citizens

ಜೆಬಿ ಕಾವಲ್ ಮೀಸಲು ಅರಣ್ಯದಲ್ಲಿ ಪಾರ್ಕ್ ನಿರ್ಮಾಣಕ್ಕೆ ನಾಗರಿಕರು, ಅರಣ್ಯ ಇಲಾಖೆ ಅಧಿಕಾರಿಗಳ ವಿರೋಧ
ಜಾರಕಬಂಡೆ ಕಾವಲ್ ಮೀಸಲು ಅರಣ್ಯದಲ್ಲಿ ಪಾರ್ಕ್ ನಿರ್ಮಾಣ ಮಾಡುವ ತೋಟಗಾರಿಕೆ ಸಚಿವ ಎನ್. ಮುನಿರತ್ನ ಅವರ ಘೋಷಣೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನಾಗರಿಕರು ವಿರೋಧಿಸಿದ್ದಾರೆ.

ಕೆರೆಗಳ ರಕ್ಷಿಸಲು ಅಧಿಕಾರಿಗಳ ನಿರ್ಲಕ್ಷ್ಯ: ಎನ್'ಜಿಟಿ ಮೊರೆ ಹೋದ ನಾಗರೀಕರು, ಹೋರಾಟಗಾರರು
ಬೆಂಗಳೂರಿನ ಜಲಮೂಲವಾಗಿರುವ ಕೆರೆಗಳ ರಕ್ಷಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ಇದರಿಂದ ಬೇಸತ್ತಿರುವ ನಾಗರೀಕರು ಹಾಗೂ ಹೋರಾಟಗಾರರು ಅಳಿವಿನಂಚಿನಲ್ಲಿರುವ ಎಲೆ ಮಲ್ಲಪ್ಪ ಶೆಟ್ಟಿ ಕೆರೆ ರಕ್ಷಣೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್'ಜಿಟಿ) ಮೊರೆ ಹೋಗಿದ್ದಾರೆ.

ಕೊರೋನಾ ಸಂಕಷ್ಟದ ನಡುವೆ ವಿದ್ಯುತ್ ದರ ಏರಿಕೆ; ಜನರ ಮೇಲೆ ಮತ್ತಷ್ಟು ಹೊರೆ: ಸರ್ಕಾರದ ನಡೆಗೆ ಜನರ ಬೇಸರ
ಕೊರೋನಾ ಸಾಂಕ್ರಾಮಿಕ ರೋಗದ ಸಂಕಷ್ಟದ ನಡುವೆಯೇ ವಿದ್ಯುತ್ ದರ ಏರಿಕೆ ಮಾಡಿರುವ ಸರ್ಕಾರದ ನಡೆಗೆ ರಾಜ್ಯದ ಜನತೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಫೇಸ್ಬುಕ್ ಲೈವ್ ಬಂದು ನಾಗರೀಕರ ಸಮಸ್ಯೆ ಆಲಿಸಿದ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್
ವಸತಿ ಪ್ರದೇಶಗಳಲ್ಲಿ ತಳ್ಳುವ ಗಾಡಿಗಳಲ್ಲಿ ಮೆಗಾಫೋನ್ ಬಳಕೆ ಮಾಡದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಜೋಕೆ... ಎಚ್ಚರ ತಪ್ಪಿದರೆ ಕೊರೋನಾ 3ನೇ ಅಲೆ ಅಪಾಯ ಕಟ್ಟಿಟ್ಟ ಬುತ್ತಿ: ಕೇಂದ್ರ ಸರ್ಕಾರ
ಕೋವಿಡ್-19 ಎರಡನೇ ಅಲೆಯನ್ನು ನಿಯಂತ್ರಿಸಲು ಈಗ ಕೈಗೊಳ್ಳುತ್ತಿರುವ ನಿರ್ಬಂಧಗಳು ಮತ್ತು ಕ್ರಮಗಳನ್ನು ಕೈಬಿಟ್ಟರೆ, ನಿರ್ಬಂಧ ಸಡಿಲಿಸಿದರೆ ಮೂರನೇ ಕೋವಿಡ್-19 ಅಲೆಯು ದೇಶವನ್ನು ಅಪ್ಪಳಿಸಿ ಇನ್ನಷ್ಟು ಸಾವು ನೋವು ಆಗಬಹುದು ಎಂದು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಪೊಲೀಸರ ಪ್ರತಿ ನಡೆಯನ್ನು ಪ್ರಶ್ನೆ ಮಾಡುವ ಮುನ್ನ ನಮ್ಮ ನಡೆಯನ್ನು ಆತ್ಮಾವಲೋಕನ ಮಾಡಿಕೊಳ್ಳೋಣ: ಡಿಜಿಪಿ ಪ್ರವೀಣ್ ಸೂದ್
ಮೊನ್ನೆ ಮೇ 10ರಂದು ರಾಜ್ಯದಲ್ಲಿ ಕೊರೋನಾ ಲಾಕ್ ಡೌನ್ ಆರಂಭಗೊಂಡ ನಂತರ ಪೊಲೀಸರ ನಡೆಗೆ ವಿರೋಧ ಪಕ್ಷದ ನಾಯಕರು, ಸಾರ್ವಜನಿಕರು ಸಾಕಷ್ಟು ವಿರೋಧ, ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

ಕೊರೋನಾಗೆ ಕೇರ್ ಮಾಡದ ಮೈಸೂರು ಜನತೆ: ಮಾಸ್ಕ್, ಸಾಮಾಜಿಕ ಅಂತರ ಮರೆತು ಷಷ್ಠಿ ಪೂಜೆಯಲ್ಲಿ ಭಾಗಿ
ಸುಬ್ರಮಣ್ಯ ಷಷ್ಠಿ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಸಾಮಾಜಿಕ ಅಂತರ, ಮಾಸ್ಕ್ ಹಾಕುವುದನ್ನು ಮರೆತು ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದು ಹುತ್ತಕ್ಕೆ ಹಾಲೆರೆದರು.

ಆರೋಗ್ಯ ಸೇತು ಆಪ್ ಇಲ್ಲ ಎಂಬ ಕಾರಣಕ್ಕೆ ನಾಗರಿಕರಿಗೆ ಸೌಲಭ್ಯ ನಿರಾಕರಿಸುವಂತಿಲ್ಲ: ಹೈಕೋರ್ಟ್
ಆರೋಗ್ಯ ಸೇತು ಆಪ್ ಹೊಂದಿಲ್ಲ ಎಂಬ ಒಂದೇ ಕಾರಣಕ್ಕೆ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಯಾವುದೇ ಅಂಗಸಂಸ್ಥೆಗಳು ನಾಗರಿಕರಿಗೆ ಯಾವುದೇ ಸೌಲಭ್ಯ ಅಥವಾ ಸೇವೆಯನ್ನು ನಿರಾಕರಿಸುವಂತಿಲ್ಲ ಎಂದು ರಾಜ್ಯ ಹೈಕೋರ್ಟ್ ಹೇಳಿದೆ.

ಹೋಮ್ ಕ್ವಾರಂಟೈನ್ ಸ್ಕ್ವಾಡ್ ಸದಸ್ಯರಾಗಲು ಸುಮಾರು 4 ಸಾವಿರ ನಾಗರಿಕರ ಸಹಿ
ನಾಗರಿಕ ಕ್ವಾರಂಟೈನ್ ಸ್ಕ್ವಾಡ್ ಸದಸ್ಯರಾಗಲು ಬೆಂಗಳೂರಿನ ಜನತೆ ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು, ಸುಮಾರು 4 ಸಾವಿರ ನಾಗರಿಕರು ಸಹಿ ಹಾಕಿದ್ದಾರೆ.

