Centre

LPG ಒತ್ತಡ ನಿವಾರಣೆಗೆ ತುರ್ತು ಕ್ರಮ: ಸೀಮೆಎಣ್ಣೆ ನಿಯಮ ಸಡಿಲಿಸಿದ ಕೇಂದ್ರ ಸರ್ಕಾರ; PDS-ಪೆಟ್ರೋಲ್ ಪಂಪ್ ಮೂಲಕ ಮಾರಾಟಕ್ಕೆ ಅವಕಾಶ..!
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮಾರ್ಚ್ 29 ರಂದು ಅಡುಗೆ ಅನಿಲ LPG ಮೇಲಿನ ಒತ್ತಡವನ್ನು ಕಡಿಮೆ ಮಾಡಲು 60 ದಿನಗಳವರೆಗೆ ಮಾರಾಟಕ್ಕೆ ಅವಕಾಶ ನೀಡುವ ಅಧಿಸೂಚನೆಯನ್ನು ಪ್ರಕಟಿಸಿದೆ.

ವಾಣಿಜ್ಯ LPG ಹಂಚಿಕೆ ಹೆಚ್ಚಳ; ಉದ್ಯಮ ವಲಯಕ್ಕೆ ಕೇಂದ್ರ ನೆರವು: ಪ್ರಲ್ಹಾದ ಜೋಶಿ
ದೇಶದಲ್ಲಿ ವಾಣಿಜ್ಯ LPG ಹಂಚಿಕೆಯನ್ನು ಹೆಚ್ಚಿಸಿದ್ದರಿಂದ ಕಾರ್ಮಿಕರಿರುವ ಕೈಗಾರಿಕಾ ವಲಯಗಳಿಗೆ ಆರ್ಥಿಕ ನೆರವು ದೊರೆಯಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

West Asia conflict: ಭಾರತದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಇಂಧನ ಭದ್ರತೆ ಸ್ಥಿರವಾಗಿದೆ- ಕೇಂದ್ರ ಸರ್ಕಾರ
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉದ್ಭವಿಸುವ ಒಟ್ಟಾರೆ ಪರಿಸ್ಥಿತಿ ನಿಯಂತ್ರಣದಲ್ಲಿರುವುದರಿಂದ ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂದು ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆಯಲ್ಲಿ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಿದೆ.

ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಲು CM ಆಡಳಿತವೇ ಕಾರಣ; ಕೇಂದ್ರದ ತಾರತಮ್ಯದ ಧೋರಣೆಯಿಂದ ರಾಜ್ಯಕ್ಕೆ ಅನ್ಯಾಯ: ಬಸವರಾಜ ರಾಯರೆಡ್ಡಿ
ಹಣಕಾಸಿನ ಕೊರತೆ ಶೇಕಡಾ 3 ಕ್ಕಿಂತ ಕಡಿಮೆ ಇದೆ. ರಾಜ್ಯದ ಆದಾಯ ಕೊರತೆ ಬಜೆಟ್ ವೆಚ್ಚದ ಶೇಕಡಾ 0.69 ರಷ್ಟಿದ್ದರೆ, ಕೇಂದ್ರದ ಅನುದಾನ ಶೇಕಡಾ 1.5 ರಷ್ಟಿದೆ ಎಂದು ಅವರು ಹೇಳಿದರು. ಕಳೆದ ಮೂರು ವರ್ಷಗಳಿಂದ ರಾಜ್ಯಕ್ಕೆ ಕೇಂದ್ರದ ಅನುದಾನವನ್ನು 16,000 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ.

ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ: ಪಶ್ಚಿಮ ಬಂಗಾಳ ಸರ್ಕಾರದಿಂದ ವಿವರ ಕೇಳಿದ ಕೇಂದ್ರ
‘ಬ್ಲೂ ಬುಕ್’ ಎಂಬುದು ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಹಾಗೂ ಅವರ ಕುಟುಂಬದ ಭದ್ರತೆ ಮತ್ತು ಶಿಷ್ಟಾಚಾರ ಕುರಿತು ನಿಯಮಗಳನ್ನು ಹೊಂದಿರುವ ಗೌಪ್ಯ ದಾಖಲೆ.

ಭಾರತದಲ್ಲಿ ಹಿಂಸಾಚಾರ ಸಾಧ್ಯತೆ: ದ್ವೇಷಕಾರಿ ಧರ್ಮೋಪದೇಶ ನೀಡುವವರ ಮೇಲೆ ನಿಗಾ ಇರಿಸಿ; ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದೇಶದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಅದರಲ್ಲೂ ವಿಶೇಷವಾಗಿ ಧಾರ್ಮಿಕ ಕೂಟಗಳಲ್ಲಿ ಉದ್ರೇಕಿತ ಭಾಷಣಗಳ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಸಾಧ್ಯತೆಗಳಿವೆ.

ಭಾರತದ ರೈತರಿಗೆ ದ್ರೋಹ: ಅಮೆರಿಕ ವ್ಯಾಪಾರ ಒಪ್ಪಂದ ಬಗ್ಗೆ ಕೇಂದ್ರದ ವಿರುದ್ಧ ರಾಹುಲ್ ಮತ್ತೆ ತೀವ್ರ ವಾಗ್ದಾಳಿ!
ಅಮೆರಿಕ ವ್ಯಾಪಾರ ಒಪ್ಪಂದದ ಹೆಸರಿನಲ್ಲಿ ಭಾರತೀಯ ರೈತರಿಗೆ ದ್ರೋಹ ಮಾಡುವುದನ್ನು ನಾವು ನೋಡುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಬಳ್ಳಾರಿ-ಹೊಸಪೇಟೆ ಹೊಸ ರೈಲು ಮಾರ್ಗಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ಇಂದು ದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 2372 ಕೋಟಿ ರೂ. ವೆಚ್ಚದ ಬಳ್ಳಾರಿ ಮತ್ತು ಹೊಸಪೇಟೆ ನಡುವೆ ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗಕ್ಕೆ ಅನುಮೋದನೆ ನೀಡಲಾಗಿದೆ.

ಮಕ್ಕಳು ಕಾಣೆಯಾಗುವುದರ ಹಿಂದೆ ದೇಶಾದ್ಯಂತ ಯಾವುದಾದರು ಜಾಲವಿದೆಯೇ ಎಂದು ಪತ್ತೆ ಹಚ್ಚಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಉಜ್ಜಲ್ ಭೂಯಾನ್ ಅವರ ಪೀಠ ಈ ಘಟನೆಗಳ ಹಿಂದೆ ಒಂದು ಮಾದರಿ ಇದೆಯೇ ಅಥವಾ ಅವು ಯಾದೃಚ್ಛಿಕ (random) ಆಗಿವೆಯೇ ಎಂದು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದೆ

