ಮಕ್ಕಳು ಕಾಣೆಯಾಗುವುದರ ಹಿಂದೆ ದೇಶಾದ್ಯಂತ ಯಾವುದಾದರು ಜಾಲವಿದೆಯೇ ಎಂದು ಪತ್ತೆ ಹಚ್ಚಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಉಜ್ಜಲ್ ಭೂಯಾನ್ ಅವರ ಪೀಠ ಈ ಘಟನೆಗಳ ಹಿಂದೆ ಒಂದು ಮಾದರಿ ಇದೆಯೇ ಅಥವಾ ಅವು ಯಾದೃಚ್ಛಿಕ (random) ಆಗಿವೆಯೇ ಎಂದು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದೆ

ದೇಶದ ವಿವಿಧ ಭಾಗಗಳಿಂದ ಮಕ್ಕಳು ಕಾಣೆಯಾಗುವ ಘಟನೆಗಳ ಹಿಂದೆ ರಾಷ್ಟ್ರವ್ಯಾಪಿ ಜಾಲ ಅಥವಾ ರಾಜ್ಯ-ನಿರ್ದಿಷ್ಟ ಗುಂಪು ಇದೆಯೇ ಎಂದು ಖಚಿತಪಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಉಜ್ಜಲ್ ಭೂಯಾನ್ ಅವರ ಪೀಠ ಈ ಘಟನೆಗಳ ಹಿಂದೆ ಒಂದು ಮಾದರಿ ಇದೆಯೇ ಅಥವಾ ಅವು ಯಾದೃಚ್ಛಿಕ (random) ಆಗಿವೆಯೇ ಎಂದು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದೆ ಮತ್ತು ಎಲ್ಲಾ ರಾಜ್ಯಗಳಿಂದ ಡೇಟಾವನ್ನು ಒಟ್ಟುಗೂಡಿಸುವಂತೆ ಕೇಂದ್ರವನ್ನು ಕೇಳಿದೆ.
ಕೇಂದ್ರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಕೆಲವು ರಾಜ್ಯಗಳು ಕಾಣೆಯಾದ ಮಕ್ಕಳು ಮತ್ತು ಕಾನೂನು ಕ್ರಮಗಳ ಕುರಿತು ತಮ್ಮ ಡೇಟಾವನ್ನು ನೀಡಿವೆ. ಆದರೆ ಸುಮಾರು ಒಂದು ಡಜನ್ ರಾಜ್ಯಗಳು ತಮ್ಮ ಡೇಟಾವನ್ನು ನೀಡಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ಸಂಪೂರ್ಣ ಡೇಟಾವನ್ನು ಪಡೆದ ನಂತರವೇ ವಿಶ್ಲೇಷಣೆ ಮಾಡಬಹುದು ಎಂದು ಅವರು ಐಶ್ವರ್ಯಾ ಭಾಟಿ ಹೇಳಿದರು. "ಮಕ್ಕಳು ಕಾಣೆಯಾಗುವ ಈ ಘಟನೆಗಳ ಹಿಂದೆ ರಾಷ್ಟ್ರವ್ಯಾಪಿ ಜಾಲ ಅಥವಾ ರಾಜ್ಯ-ನಿರ್ದಿಷ್ಟ ಗುಂಪು ಇದೆಯೇ ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಇದು ಒಂದು ಮಾದರಿಯೇ ಅಥವಾ ಕೇವಲ ಯಾದೃಚ್ಛಿಕ (randam) ಘಟನೆಯೇ?" ಎಂದು ಪೀಠ ಭಾಟಿ ಅವರನ್ನು ಪ್ರಶ್ನಿಸಿದೆ. ರಕ್ಷಿಸಲ್ಪಟ್ಟ ಮಕ್ಕಳನ್ನು ಅಂತಹ ಘಟನೆಗಳಿಗೆ ಯಾರು ಕಾರಣರು ಎಂದು ಖಚಿತಪಡಿಸಿಕೊಳ್ಳಲು ಸಂದರ್ಶಿಸಬೇಕು ಎಂದು ಸುಪ್ರೀಂ ಕೋರ್ಟ್ ಭಾಟಿಗೆ ಸೂಚಿಸಿತು.
ದತ್ತಾಂಶವನ್ನು ನೀಡದ ರಾಜ್ಯಗಳನ್ನು ಸಹ ಪೀಠ ಟೀಕಿಸಿತು ಮತ್ತು ಅಗತ್ಯವಿದ್ದರೆ ಕಠಿಣ ಆದೇಶಗಳನ್ನು ನೀಡಬಹುದು ಎಂದು ಹೇಳಿದೆ. ಹಿರಿಯ ವಕೀಲೆ ಅಪರ್ಣಾ ಭಟ್ ಅವರು ಕೇಂದ್ರ ಈ ಕ್ರಮ ಕೈಗೊಂಡಿದೆ ಮತ್ತು ದತ್ತಾಂಶವನ್ನು ಒದಗಿಸಲು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಬೇಕೆಂದು ಹೇಳಿದರು.
'ಗುರಿಯಾ ಸ್ವಯಂ ಸೇವಿ ಸಂಸ್ಥಾನ' ಎಂಬ ಸರ್ಕಾರೇತರ ಸಂಸ್ಥೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪೀಠವು ವಿಚಾರಣೆ ನಡೆಸುತ್ತಿತ್ತು, ಈ ಅರ್ಜಿ ಹಲವಾರು ರಾಜ್ಯಗಳಲ್ಲಿ ಪತ್ತೆಯಾಗದ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದನ್ನು ಎತ್ತಿ ತೋರಿಸಿತ್ತು.
ಡಿಸೆಂಬರ್ 9 ರಂದು, ಕಾಣೆಯಾದ ಮಕ್ಕಳ ಕುರಿತು ಆರು ವರ್ಷಗಳ ರಾಷ್ಟ್ರವ್ಯಾಪಿ ಡೇಟಾವನ್ನು ಒದಗಿಸುವಂತೆ ಮತ್ತು ಅಂತಹ ದತ್ತಾಂಶವನ್ನು ಸಂಗ್ರಹಿಸುವಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಪರಿಣಾಮಕಾರಿ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಗೃಹ ಸಚಿವಾಲಯದಲ್ಲಿ ಮೀಸಲಾದ ಅಧಿಕಾರಿಯನ್ನು ನೇಮಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿತು.
ಕಾಣೆಯಾದ ಮಕ್ಕಳ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಂತಹ ವಿವರಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನಡೆಸುವ ಪೋರ್ಟಲ್‌ನಲ್ಲಿ ತ್ವರಿತವಾಗಿ ಅಪ್‌ಲೋಡ್ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ಈ ಹಿಂದೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



