Car

ಕೇರಳ: ಕೊಟ್ಟಾಯಂ ಹೋಟೆಲ್‌ನಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಜನಪ್ರಿಯ ನಟ ಶವವಾಗಿ ಪತ್ತೆ
ಕೇರಳದ ಜನಪ್ರಿಯ ನಟ ವಿನೋದ್ ಥಾಮಸ್ ಇಲ್ಲಿನ ಪಂಪಾಡಿ ಬಳಿಯ ಹೋಟೆಲ್‌ವೊಂದರಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಅವರಿಗೆ 45 ವರ್ಷ ವಯಸ್ಸಾಗಿತ್ತು.

ಕಾರವಾರ: 10 ಅಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಕಾರಿನಲ್ಲಿ ಪ್ರಯಾಣಿಸಿದ ಕುಟುಂಬ, ಅಪಾಯದಿಂದ ಪಾರು
10 ಅಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಕಾರಿನಲ್ಲಿ ಪ್ರಯಾಣಿಸಿದ ನಾಲ್ವರಿದ್ದ ಕುಟುಂಬವೊಂದು ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾದ ಘಟನೆ ಕಾರವಾರವಾದಲ್ಲಿ ನಡೆದಿದೆ. ಸಂಬಂಧಿಕರ ಮನೆಯಲ್ಲಿ ವಾಹನ ನಿಲ್ಲಿಸಿದ ಬಳಿಕವಷ್ಟೇ ಕಾರಿನಲ್ಲಿ ಹಾವಿರುವುದು ತಿಳಿದುಬಂದಿದೆ.

ತುಮಕೂರು: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ; ಕಾರಿಗೆ ಲಾರಿ ಡಿಕ್ಕಿ ಮೂವರು ಸ್ಥಳದಲ್ಲೇ ಸಾವು
ತಾಲ್ಲೂಕಿನ ಮಿಡಿಗೇಶಿ ಗ್ರಾಮದ ಬಳಿ ಸೋಮವಾರ ರಾತ್ರಿ ಕಾರ್ ಮತ್ತು ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಿತ್ರದುರ್ಗ: ವೇಗವಾಗಿ ಬಂದು ಲಾರಿಗೆ ಡಿಕ್ಕಿ ಹೊಡೆದ ಕಾರು, ಸ್ಥಳದಲ್ಲೇ ನಾಲ್ವರ ದುರ್ಮರಣ!
ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ವೇಗವಾಗಿ ಬಂದ ಕಾರು, ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹಳಿ ತಪ್ಪಿದ ಲಿವ್ ಇನ್: ಬಾನೆಟ್ ಮೇಲೆ ಬಿದ್ದ ಮಾಜಿ ಗೆಳೆಯನ ಸಮೇತ ಕಾರು ಚಲಾಯಿಸಿದ ಯುವತಿ!
ಬಾನೆಟ್ ಮೇಲೆ ಬಿದ್ದ ವ್ಯಕ್ತಿಯೋರ್ವನ ಸಮೇತ ಮಹಿಳೆಯೊಬ್ಬಳು ಕಾರು ಚಲಾಯಿಸಿದ ಘಟನೆ ಜ್ಞಾನಭಾರತಿ ಪ್ರದೇಶದಲ್ಲಿ ವರದಿಯಾಗಿತ್ತು. ಈ ಘಟನೆ ಮರೆಯುವುದಕ್ಕೂ ಮುನ್ನವೇ ಇಂಥಹದ್ದೇ ಮತ್ತೊಂದು ಘಟನೆ ವರದಿಯಾಗಿದೆ.

ಲಾಲ್ಬಾಗ್ ಸಿಬ್ಬಂದಿಗೆ ಗುದ್ದಿದ ರಚಿತಾ ರಾಮ್ ಕಾರು: ಕಾರ್ಮಿಕನನ್ನು ಮಾತನಾಡಿಸುವ ಸೌಜನ್ಯ ತೋರದ ನಟಿ!
ರಚಿತಾ ಪ್ರಯಾಣಿಸುತ್ತಿದ್ದ ಕಾರು ಸ್ವಚ್ಛತಾ ಕಾರ್ಮಿಕನಿಗೆ ಗುದ್ದಿದೆ. ಜಸ್ಟ್ ಮಿಸ್ ಎನ್ನುವಂತೆ ಕಾರ್ಮಿಕ ಪಕ್ಕಕ್ಕೆ ಹಾರಿ ಅಪಘಾತದಿಂದ ತಪ್ಪಿಸಿಕೊಂಡಿದ್ದಾನೆ. ಈ ಘಟನೆ ನಡೆದಾಗ ರಚಿತಾ ರಾಮ್ ಕಾರಲ್ಲಿ ಇದ್ದರೂ, ಏನೂ ಆಗಿಯೇ ಇಲ್ಲ ಎನ್ನುವಂತೆ ಪ್ಲವರ್ ಶೋನತ್ತ ತೆರಳಿದ್ದಾರೆ.

ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಕಾರಿನೊಳಗೆ ನಾಯಿ ಬಿಟ್ಟು ಹೋದ ಪ್ರಯಾಣಿಕ: ಸಿಐಎಸ್ಎಫ್ ಸಿಬ್ಬಂದಿಯಿಂದ ರಕ್ಷಣೆ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊನ್ನೆ ಸೋಮವಾರ ಸಂಜೆ ಪ್ರಯಾಣಿಕರೊಬ್ಬರು ಉದ್ದೇಶಪೂರ್ವಕವಾಗಿ ಎಂಬಂತೆ ಕ್ರೌರ್ಯದ ಕೃತ್ಯ ಎಸಗಿದ್ದಾರೆ. ಗ್ರೇಟ್ ಡೇನ್ ನಾಯಿಯನ್ನು ಕಾರಿನೊಳಗೆ ಕೂಡಿ ಹಾಕಿ ತಪ್ಪಾದ ಪಾರ್ಕಿಂಗ್ ಲೇನ್‌ನಲ್ಲಿ ಬಿಟ್ಟು ಹೋಗಿದ್ದಾರೆ.

ವೈಟ್‌ಫೀಲ್ಡ್‌ನಲ್ಲಿ ಐಟಿ ಉದ್ಯೋಗಿ ಕಾರಿನ ಮೇಲೆ ಆಟೋ ಚಾಲಕ ದಾಳಿ; ಟೆಕ್ಕಿ, ಆತನ ಕುಟುಂಬದ ಹತ್ಯೆಗೆ ಪ್ರಯತ್ನ
ಆಟೋರಿಕ್ಷಾ ಚಾಲಕರೊಬ್ಬರು 42 ವರ್ಷದ ಐಟಿ ಉದ್ಯೋಗಿಯೊಬ್ಬರ ಕಾರಿನ ಮೇಲೆ ದಾಳಿ ನಡೆಸಿ, ಗಾಜನ್ನು ಒಡೆದುಹಾಕುವ ಮೂಲಕ ಕಾರಿನಲ್ಲಿದ್ದ ಐಟಿ ಉದ್ಯೋಗಿ ಪತ್ನಿ ಹಾಗೂ ಐದು ವರ್ಷದ ಮಗುವಿಗೆ ಜೀವ ಭಯವನ್ನುಂಟು ಮಾಡಿದ ಘಟನೆ ನಗರದ ವೈಟ್ ಫೀಲ್ಡ್ ನಲ್ಲಿ ನಡೆದಿದೆ.

ಕಾರನ್ನು 2 ಕಿ.ಮೀ ವರೆಗೂ ಎಳೆದೊಯ್ದ ಟಿಪ್ಪರ್ ಲಾರಿ; ಅದೃಷ್ಟವಶಾತ್ ಜೀವ ಹಾನಿ ಇಲ್ಲ!
ಟಿಪ್ಪರ್ ಲಾರಿಯೊಂದು ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು 2 ಕಿ.ಮೀ ವರೆಗೂ ಎಳೆದೊಯ್ದಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

