ಹಳಿ ತಪ್ಪಿದ ಲಿವ್ ಇನ್: ಬಾನೆಟ್ ಮೇಲೆ ಬಿದ್ದ ಮಾಜಿ ಗೆಳೆಯನ ಸಮೇತ ಕಾರು ಚಲಾಯಿಸಿದ ಯುವತಿ!
ಬಾನೆಟ್ ಮೇಲೆ ಬಿದ್ದ ವ್ಯಕ್ತಿಯೋರ್ವನ ಸಮೇತ ಮಹಿಳೆಯೊಬ್ಬಳು ಕಾರು ಚಲಾಯಿಸಿದ ಘಟನೆ ಜ್ಞಾನಭಾರತಿ ಪ್ರದೇಶದಲ್ಲಿ ವರದಿಯಾಗಿತ್ತು. ಈ ಘಟನೆ ಮರೆಯುವುದಕ್ಕೂ ಮುನ್ನವೇ ಇಂಥಹದ್ದೇ ಮತ್ತೊಂದು ಘಟನೆ ವರದಿಯಾಗಿದೆ.

ಬೆಂಗಳೂರು: ಬಾನೆಟ್ ಮೇಲೆ ಬಿದ್ದ ವ್ಯಕ್ತಿಯೋರ್ವನ ಸಮೇತ ಮಹಿಳೆಯೊಬ್ಬಳು ಕಾರು ಚಲಾಯಿಸಿದ ಘಟನೆ ಜ್ಞಾನಭಾರತಿ ಪ್ರದೇಶದಲ್ಲಿ ವರದಿಯಾಗಿತ್ತು. ಈ ಘಟನೆ ಮರೆಯುವುದಕ್ಕೂ ಮುನ್ನವೇ ಇಂಥಹದ್ದೇ ಮತ್ತೊಂದು ಘಟನೆ ವರದಿಯಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ನಿವಾಸಿಯಾದ ದ್ರುವ (31) (ಹೆಸರು ಬದಲಾವಣೆ ಮಾಡಲಾಗಿದೆ) ಎಂಬ ವ್ಯಕ್ತಿ ತನಗೆ ಎದುರಾದ ಸನ್ನಿವೇಶದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆತನ ಹೇಳಿಕೆಯ ಪ್ರಕಾರ ಆತ 33 ವರ್ಷದ ಮಹಿಳೆಯ ಜೊತೆ ಲಿವ್ ಇನ್ ರಿಲೇಷನ್ಶಿಪ್ ನಲ್ಲಿದ್ದ. ಆದರೆ ಆಕೆ ಆತನ ವಿರುದ್ಧ ಜುಲೈ ನಲ್ಲಿ ಈಶಾನ್ಯ ವಿಭಾಗದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ ಬಳಿಕ ಸಂಬಂಧ ಹದಗೆಟ್ಟಿತ್ತು. ಈ ಬಳಿಕ ವ್ಯಕ್ತಿ ತನ್ನ ವಿರುದ್ಧ ಪೋಲೀಸ್ ಕ್ರಮ ಜರುಗಿಸದಂತೆ ಹೈಕೋರ್ಟ್ ನಿಂದ ತಡೆ ತಂದಿದ್ದರು.
ಇದರಿಂದ ಆಕ್ರೋಶಗೊಂಡ ಮಹಿಳೆ. ಹೊಯ್ಸಳ ನಗರದಲ್ಲಿರುವ ಆತನ ಕಚೇರಿಗೆ ತೆರಳಿ ನಿಂದಿಸಿದ್ದಾಳೆ. ಅಷ್ಟೇ ಅಲ್ಲದೇ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ ಆದರೆ ಆತ ಕೊಡಲು ಒಪ್ಪದೇ ಇದ್ದಾಗ ಆತನ ವಾಹನದ ಕೀ ಪಡೆದು ಹೊರಡಲು ಯತ್ನಿಸಿದ್ದಾಳೆ. ಕಾರನ್ನು ನಿಲ್ಲಿಸಲು ಆತ ಪ್ರಯತ್ನಿಸಿದಾಗ ಆತನ ಮೇಲೆಯೇ ಕಾರು ಚಾಲನೆ ಮಾಡಲು ಯತ್ನಿಸಿದ್ದಾಳೆ. ಸಮತೋಲನ ಕಳೆದುಕೊಂಡು ಬಾನೆಟ್ ಮೇಲೆ ಆತ ಬಿದ್ದಿದ್ದಾನೆ. ಆದರೆ ಇದನ್ನೂ ಲೆಕ್ಕಿಸದೇ ಸ್ವಲ್ಪ ದೂರದವರೆಗೆ ಆಕೆ ಕಾರು ಚಾಲನೆ ಮಾಡಿದ್ದಾಳೆ. ಏಕಾ ಏಕಿ ಬ್ರೇಕ್ ಹಾಕಿದ್ದರ ಪರಿಣಾಮ ಆತ ಬಿದ್ದಿದ್ದಾನೆ. ಮಹಿಳೆ ಮೇಲೆ ದೂರು ದಾಖಲಾಗಿದೆ. ಈಗ ಆಕೆ ಗರ್ಭಿಣಿ ಎಂದು ತಿಳಿದುಬಂದಿದ್ದು, ದೃಶ್ಯಾವಳಿಗಳನ್ನು ಪರಿಶೀಲಿಸಿ ಆಕೆಯ ಹೇಳಿಕೆಯನ್ನು ಪಡೆಯುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


