CAA

ಸಿಎಎ ಪ್ರತಿಭಟಕಾರರ ವಿರುದ್ಧ ಪೋಸ್ಟರ್: ನಿಮ್ಮ ಕ್ರಮ ಬೆಂಬಲಿಸುವ ಯಾವುದೇ ಕಾನೂನಿಲ್ಲ- ಯೋಗಿ ಸರ್ಕಾರದ ವಿರುದ್ಧ ಸುಪ್ರೀಂ ಕಿಡಿ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದವರಿಗೆ ಹೆಸರು, ಫೋಟೋ ಹಾಗೂ ವಿಳಾಸವನ್ನೊಳಗೊಂಡ ಪೋಸ್ಟರ್ ಹಾಕಿದ್ದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ತೀವ್ರವಾಗಿ ಕಿಡಿಕಾರಿದೆ.

ಬ್ರಿಟಿಷರನ್ನು ಒದ್ದೋಡಿಸಲು ಒಟ್ಟಾದಂತೆ, ಈಗ ಮೋದಿಯಂತಹವರನ್ನು ಒದ್ದೋಡಿಸಲು ಮುಸ್ಲಿಮರು ಒಟ್ಟಾಗಬೇಕಿದೆ
ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲು ಮುಸ್ಲಿಮರು ಬೀದಿಗಿಳಿದಿದ್ದರು. ಈಗ ನಮ್ಮ ದೇಶದಲ್ಲಿ ಮೋದಿಯಂತಹವರನ್ನು ಒದ್ದೋಡಿಸಲು ಮುಸ್ಲಿಮರು ಬೀದಿಗಿಳಿಯಬೇಕಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ಎಲ್ಲರನ್ನು ಸ್ವಾಗತಿಸುವ ಒಂದೇ ಒಂದು ದೇಶವನ್ನು ನನಗೆ ತೋರಿಸಿ: ಯುಎನ್‌ಎಚ್‌ಆರ್‌ಸಿಗೆ ಜೈಶಂಕರ್ ತಿರುಗೇಟು!
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಾತನಾಡಿದ್ದ ವಿಶ್ವಸಂಸ್ಧೆಯ ಮಾನವ ಹಕ್ಕುಗಳ ಮಂಡಳಿ(ಯುಎನ್‌ಎಚ್‌ಆರ್‌ಸಿ)ಗೆ ತಿರುಗೇಟು ನೀಡಿರುವ ವಿದೇಶಾಂಗ ಸಚಿವ ಜೈ ಶಂಕರ್ ಜಗತ್ತಿನಲ್ಲಿ ಎಲ್ಲರನ್ನೂ ಸ್ವಾಗಿತಸುವ ಒಂದೇ ಒಂದು ದೇಶವನ್ನು ನನಗೆ ತೋರಿಸಿ ಎಂದು ಸವಾಲು ಹಾಗಿದ್ದಾರೆ.

ದೆಹಲಿ ಹಿಂಸಾಚಾರ: ಪೇದೆ ರತನ್ ಲಾಲ್ ಹತ್ಯೆ, ಡಿಸಿಪಿ, ಎಸಿಪಿ ಕೊಲ್ಲುವ ಯತ್ನದ ವಿಡಿಯೋ ಪೋಸ್ಟ್ ಮಾಡಿದ ಕಪಿಲ್ ಮಿಶ್ರಾ!
ಸಿಎಎ ಸಂಬಂಧ ನಡೆದ ಹಿಂಸಾಚಾರದಲ್ಲಿ ದೆಹಲಿಯ ಪೊಲೀಸ್ ಪೇದೆ ರತನ್ ಲಾಲ್ ಹತ್ಯೆಯಾಗಿದ್ದು ಡಿಸಿಪಿ ಮತ್ತು ಎಸಿಪಿಯ ಮೇಲೆ ಉದ್ರಿಕ್ತರು ಹತ್ಯೆ ಯತ್ನ ಮಾಡುತ್ತಿರುವ ವಿಡಿಯೋ ಇದೀಗ ಬಿಡುಗಡೆಯಾಗಿದೆ.

ಸಿಎಎ ಅವಶ್ಯಕವಾಗಿದೆ, ಮುಸ್ಲಿಮರನ್ನು ಭಾರತದಿಂದ ಹೊರಗೆ ಕಳುಹಿಸುವ ಉದ್ದೇಶ ಹೊಂದಿಲ್ಲ- ಹರೀಶ್ ಸಾಳ್ವೆ
ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಿಎಎ ಅವಶ್ಯಕವಾಗಿದೆ, ಮುಸ್ಲಿಂರನ್ನು ಭಾರತದಿಂದ ಹೊರಗೆ ಕಳುಹಿಸುವ ಉದ್ದೇಶ ಹೊಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ಶಬರಿಮಲೆ ನಂತರ ಸಿಎಎ ಕುರಿತ ಮನವಿ ಅರ್ಜಿ ಆಲಿಸಲು ಸುಪ್ರೀಂಕೋರ್ಟ್ ನಿರ್ಧಾರ
ಹೋಳಿ ರಜೆಯ ನಂತರ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಮನವಿ ಅರ್ಜಿಯನ್ನು ಉಲ್ಲೇಖಿಸುವಂತೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿದ್ದು, ಶಬರಿಮಲೆ ಕುರಿತ ವಿಚಾರಣೆ ನಂತರ ಸಿಎಎ ಕುರಿತ ಮನವಿ ಅರ್ಜಿಗಳನ್ನು ಆಲಿಸುವುದಾಗಿ ಹೇಳಿದೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಹಿಂಸಾಚಾರ ಅನಗತ್ಯ: ಸಿಎಂ ಯಡಿಯೂರಪ್ಪ
ಸಂಸತ್ ನಡೆಯುವ ಕಾರ್ಯವೈಖರಿ ಮತ್ತು ಅದಕ್ಕೆ ಯಾವ ರೀತಿಯ ಬೆಲೆ ಕೊಡಬೇಕೆಂಬುದರ ಬಗ್ಗೆ ತಿಳುವಳಿಕೆ ಇರುವವರೇ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕ ನೋಂದಣಿ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಅನಗತ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಚಾಟಿ ಬೀಸಿದರು.

ಬಂಗಾಳದಲ್ಲಿರುವ ಎಲ್ಲ ಬಾಂಗ್ಲಾದೇಶಿಗರೂ ಭಾರತೀಯರೇ.. ಎಲ್ಲರಿಗೂ ಭಾರತೀಯ ಪೌರತ್ವ ನೀಡಲಾಗಿದೆ: ಸಿಎಂ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಎಲ್ಲ ಬಾಂಗ್ಲಾದೇಶಿಗರೂ ಭಾರತೀಯರೇ ಆಗಿದ್ದು, ಅವರಿಗೆ ಈಗಾಗಲೇ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ಯುಎನ್ ಹೆಚ್ ಆರ್ ಸಿ ಸಿಎಎ ಮಧ್ಯಸ್ಥಿಕೆ ಅರ್ಜಿ: ಇದು ಆಂತರಿಕ ವಿಷಯ ಎಂದು ಭಾರತ ತಿರುಗೇಟು
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಮಧ್ಯಸ್ಥಿಕೆ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಜಿನಿವಾದಲ್ಲಿರುವ ಭಾರತೀಯ ಶಾಶ್ವತ ನಿಯೋಗಕ್ಕೆ ತಿಳಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

