ಎಲ್ಲರನ್ನು ಸ್ವಾಗತಿಸುವ ಒಂದೇ ಒಂದು ದೇಶವನ್ನು ನನಗೆ ತೋರಿಸಿ: ಯುಎನ್‌ಎಚ್‌ಆರ್‌ಸಿಗೆ ಜೈಶಂಕರ್ ತಿರುಗೇಟು!
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಾತನಾಡಿದ್ದ ವಿಶ್ವಸಂಸ್ಧೆಯ ಮಾನವ ಹಕ್ಕುಗಳ ಮಂಡಳಿ(ಯುಎನ್‌ಎಚ್‌ಆರ್‌ಸಿ)ಗೆ ತಿರುಗೇಟು ನೀಡಿರುವ ವಿದೇಶಾಂಗ ಸಚಿವ ಜೈ ಶಂಕರ್ ಜಗತ್ತಿನಲ್ಲಿ ಎಲ್ಲರನ್ನೂ ಸ್ವಾಗಿತಸುವ ಒಂದೇ ಒಂದು ದೇಶವನ್ನು ನನಗೆ ತೋರಿಸಿ ಎಂದು ಸವಾಲು ಹಾಗಿದ್ದಾರೆ.

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಾತನಾಡಿದ್ದ ವಿಶ್ವಸಂಸ್ಧೆಯ ಮಾನವ ಹಕ್ಕುಗಳ ಮಂಡಳಿ(ಯುಎನ್‌ಎಚ್‌ಆರ್‌ಸಿ)ಗೆ ತಿರುಗೇಟು ನೀಡಿರುವ ವಿದೇಶಾಂಗ ಸಚಿವ ಜೈ ಶಂಕರ್ ಜಗತ್ತಿನಲ್ಲಿ ಎಲ್ಲರನ್ನೂ ಸ್ವಾಗಿತಸುವ ಒಂದೇ ಒಂದು ದೇಶವನ್ನು ನನಗೆ ತೋರಿಸಿ ಎಂದು ಸವಾಲು ಹಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಧೆಯ ಮಾನವ ಹಕ್ಕುಗಳ ಮಂಡಳಿ ಟೀಕಿಸಿರುವುದನ್ನು ಟೀಕಿಸಿದ ಜೈಶಂಕರ್ ಮಂಡಳಿಯ ನಿರ್ದೇಶಕರು ಈ ಹಿಂದೆ ಕೂಡ ತಪ್ಪು ಮಾಡಿದ್ದರು. ಕಾಶ್ಮೀರ ಸಮಸ್ಯೆಯನ್ನು ನಿಭಾಯಿಸುವ ಬಗ್ಗೆ ಮಾನವ ಹಕ್ಕುಗಳ ಮಂಡಳಿ ಹಿಂದಿನ ದಾಖಲೆಯನ್ನು ನೋಡಬೇಕು ಎಂದು ಹೇಳಿದ್ದಾರೆ.
ಈ ಶಾಸನದ ಮೂಲಕ ನಾವು ಸ್ಥಿತಿಯಿಲ್ಲದವರ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದೇವೆ. ಅದನ್ನು ಪ್ರಶಂಸಿಸಬೇಕು ಎಂದು ಇಟಿ ಗ್ಲೋಬಲ್ ಬಿಸಿನೆಸ್ ಶೃಂಗಸಭೆಯಲ್ಲಿ ಸಿಎಎ ಕುರಿತಂತೆ ಕೇಳಿದಾಗ ಜೈಶಂಕರ್ ಉತ್ತರಿಸಿದರು.
ನಾವು ಇದನ್ನು ದೊಡ್ಡ ಸಮಸ್ಯೆಯಾಗದಂತೆ ನಿಭಾಯಿಸಿದ್ದೇವೆ. ಪ್ರತಿಯೊಂದು ದೇಶದಲ್ಲೂ ಅಲ್ಲಿನ ಪೌರತ್ವವನ್ನು ನೋಡಿದಾಗ, ಒಂದು ಮಾನದಂಡವನ್ನು ಹೊಂದಿರುತ್ತದೆ. ಆದರೆ ಪ್ರಪಂಚದ ಪ್ರತಿಯೊಬ್ಬರಿಗೂ ಸ್ವಾಗತವಿದೆ ಎಂದು ಹೇಳುವ ದೇಶವನ್ನು ನನಗೆ ತೋರಿಸಿ, ಯಾರು ಅದನ್ನು ಹೇಳುವುದಿಲ್ಲ ಎಂದು ಹೇಳಿದರು.
ಕಾಶ್ಮೀರ ವಿಷಯದಲ್ಲಿ ಯುಎನ್‌ಹೆಚ್‌ಆರ್‌ಸಿ ನಿರ್ದೇಶಕರು ಭಾರತದ ನಿರ್ಧಾರವನ್ನು ಒಪ್ಪುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ಯುಎನ್‌ಹೆಚ್‌ಆರ್‌ಸಿ ನಿರ್ದೇಶಕರು ಈ ಮೊದಲು ತಪ್ಪು ಮಾಡಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


