ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!
ಐದು ವಿಧಾನಸಭಾ ಸ್ಥಾನಗಳು ಮತ್ತು ಅಸ್ಸಾಂನ ನಾಗಾಂವ್ ಲೋಕಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯ ಫಲಿತಾಂಶಗಳು ಪ್ರಕಟವಾಗಿವೆ. ಅಸ್ಸಾಂನ ನಾಗಾಂವ್ ಲೋಕಸಭಾ ಸ್ಥಾನವನ್ನು ಬಿಜೆಪಿ ಗೆದ್ದಿದೆ.

ಐದು ವಿಧಾನಸಭಾ ಸ್ಥಾನಗಳು ಮತ್ತು ಅಸ್ಸಾಂನ ನಾಗಾಂವ್ ಲೋಕಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯ ಫಲಿತಾಂಶಗಳು ಪ್ರಕಟವಾಗಿವೆ. ಅಸ್ಸಾಂನ ನಾಗಾಂವ್ ಲೋಕಸಭಾ ಸ್ಥಾನವನ್ನು ಬಿಜೆಪಿ ಗೆದ್ದಿದೆ. ಪಶ್ಚಿಮ ಬಂಗಾಳದ ನಂದಿಗ್ರಾಮ್ ಮತ್ತು ರೆಜಿನಗರ ವಿಧಾನಸಭಾ ಸ್ಥಾನಗಳನ್ನು ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ತಮಿಳುನಾಡಿನ ಧಾರಾಪುರಂ ಮತ್ತು ಮಧುರಾಂತಕಂ ಸ್ಥಾನಗಳನ್ನು ಟಿವಿಕೆ ಅಭ್ಯರ್ಥಿಗಳು ಗೆದ್ದಿದ್ದಾರೆ.
ಪಶ್ಚಿಮ ಬಂಗಾಳದ ನಂದಿಗ್ರಾಮ್ ಸ್ಥಾನವನ್ನು ಬಿಜೆಪಿಯ ಹಸ್ಸಿ ರಾಣಿ ರಥ್ ಗೆದ್ದರೆ, ಬಿಜೆಪಿಯ ಶಂಕರವ್ ಸರ್ಕಾರ್ ರೆಜಿನಗರ ಸ್ಥಾನವನ್ನು ಗೆದ್ದಿದ್ದಾರೆ. ತಮಿಳುನಾಡಿನ ಧಾರಾಪುರಂ ಸ್ಥಾನವನ್ನು ಟಿವಿಕೆ ಅಭ್ಯರ್ಥಿ ಸತ್ಯಬಾಮ ಪಿ. ಗೆದ್ದಿದ್ದಾರೆ ಮತ್ತು ಕೆ. ಮರಗತಮ್ ಕುಮಾರವೇಲ್ ಮಧುರಾಂತಕಂ ಸ್ಥಾನವನ್ನು ಗೆದ್ದಿದ್ದಾರೆ.
ಪುದುಚೇರಿಯ ತಟ್ಟಂಚವಾಡಿ ವಿಧಾನಸಭಾ ಸ್ಥಾನವನ್ನು ಅಖಿಲ ಭಾರತ ಎನ್ಆರ್ ಕಾಂಗ್ರೆಸ್ (ಎಐಎನ್ಆರ್ಸಿ) ಯ ಅಶೋಕ್ ಆನಂದ್ ಗೆದ್ದಿದ್ದಾರೆ. ಹೀಗಾಗಿ, ಐದು ವಿಧಾನಸಭಾ ಸ್ಥಾನಗಳ ಜೊತೆಗೆ ಅಸ್ಸಾಂನ ನಾಗಾಂವ್ ಲೋಕಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ಅಭ್ಯರ್ಥಿಗಳ ಗೆಲುವಿಗೆ ಪ್ರಧಾನಿಯೂ ಅಭಿನಂದನೆ ಸಲ್ಲಿಸಿದ್ದಾರೆ.
ನಂದಿಗ್ರಾಮ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು
ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಸಿರಾಣಿ ರಥ್ ದಾಖಲೆಯ ಅಂತರದಿಂದ ಜಯಗಳಿಸಿದ್ದಾರೆ. ಹಸಿರಾಣಿ ರಥ್ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಮಿಲನ್ ಪ್ರಧಾನ್ ಅವರನ್ನು 122,753 ಮತಗಳಿಂದ ಸೋಲಿಸಿದ್ದಾರೆ. ಪುರ್ಬಾ ಮೇದಿನಿಪುರ ಜಿಲ್ಲೆಯ ಈ ರಾಜಕೀಯವಾಗಿ ನಿರ್ಣಾಯಕ ಸ್ಥಾನದಲ್ಲಿ, ಹಸಿರಾಣಿ ರಥ್ ಒಟ್ಟು 164,427 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ 41,674 ಮತಗಳನ್ನು ಪಡೆದರು. ಹಸಿರಾಣಿ ರಥ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ದಿವಂಗತ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ತಾಯಿ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರ್ ವಿಧಾನಸಭಾ ಕ್ಷೇತ್ರವು ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರವಾಗಿದ್ದರೂ ಅಲ್ಲಿ ಬಿಜೆಪಿ 75,816 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಂಕರವ್ ಸರ್ಕಾರ್ 1,29,914 ಮತಗಳನ್ನು ಪಡೆದರೇ ತಮ್ಮ ಸಮೀಪದ ಪ್ರತಿಸ್ಪರ್ಧಿ ಹಾಗೂ 'ಆಮ್ ಜನತಾ ಉನ್ನಯನ್ ಪಾರ್ಟಿ'ಯ (AJUP) ಅಭ್ಯರ್ಥಿ ಗೋಲಂ ನಬಿ ಆಜಾದ್ ಆಜಾದ್ 54,098 ಮತಗಳನ್ನು ಪಡೆದರು.
ಮಧುರಾಂತಕಂ ಕ್ಷೇತ್ರದಲ್ಲಿ ಟಿವಿಕೆಗೆ ಗೆಲುವು
ತಮಿಳುನಾಡಿನ ಮಧುರಾಂತಕಂ ವಿಧಾನಸಭಾ ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಕೆ ಮರಗತಮ್ ಕುಮಾರವೇಲ್ ಅವರು DMKಯ ಪರಂಥಮೆನ್ ಅವರನ್ನು 20,040 ಮತಗಳ ಅಂತರದಿಂದ ಸೋಲಿಸಿ ವಿಜೇತರಾಗಿದ್ದಾರೆ. ಮರಗತಮ್ 74,048 ಮತಗಳನ್ನು ಪಡೆದರೆ, ಪರಂಥಮೆನ್ 54,008 ಮತಗಳನ್ನು ಪಡೆದರು.
ತಮಿಳುನಾಡಿನ ಧಾರಾಪುರಂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆಯಲ್ಲಿ ಟಿವಿಕೆ ಅಭ್ಯರ್ಥಿ ಪಿ. ಸತ್ಯಭಾಮ ಗೆಲುವು ಸಾಧಿಸಿದ್ದಾರೆ. ಡಿಎಂಕೆ ಅಭ್ಯರ್ಥಿ ಎಸ್. ಸುಗನ್ಯಾ 9 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



