CAA

ಸಿಎಎ ಪ್ರತಿಭಟನೆ: ಹಿಂಸಾಚಾರ ಯಾವುದೇ ಸಮಸ್ಯೆಗೂ ಪರಿಹಾರವಲ್ಲ- ಉಪ ರಾಷ್ಟ್ರಪತಿ
ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಹಾಗೂ ಹಿಂಸಾಚಾರಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ಹಿಂಸಾಚಾರ ಯಾವುದೇ ಸಮಸ್ಯೆಗೂ ಪರಿಹಾರವಲ್ಲ ಎಂದು ಮಂಗಳವಾರ ಹೇಳಿದ್ದಾರೆ.

ಸಿಎಎ ಹಿಂಸಾಚಾರ: ಅಸ್ಸಾಂನಲ್ಲಿ ಕರ್ಫ್ಯೂ ಹಿಂಪಡೆದ ಸರ್ಕಾರ, ನಾಲ್ವರು ನಾಗರಿಕರು ಸಾವು
ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿ ವಿರೋಧಿಸಿ ಅಸ್ಸಾಂ ರಾಜ್ಯಾದ್ಯಂತ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಹೇರಿಕೆಯಾಗಿದ್ದ ಕರ್ಫ್ಯೂವನ್ನು ಮಂಗಳವಾರ ಹಿಂಪಡೆಯಲಾಗಿದೆ.

ಜನರ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ 'ಪಾಕಿಸ್ತಾನ ಭಾಷೆ' ಹೇಳಿಕೆ ನೀಡಿದೆ: ಕಾಂಗ್ರೆಸ್
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಬಿಜೆಪಿ ನಾಯಕರು ಪಾಕಿಸ್ತಾನತ ಭಾಷೆ ಹೇಳಿಕೆಯನ್ನು ನೀಡಿದ್ದಾರೆಂದು ಕಾಂಗ್ರೆಸ್ ಹೇಳಿದೆ.

ಪೌರತ್ವ ತಿದ್ದುಪಡಿ ಕಾಯ್ದೆಗೂ ಭಾರತದ ನಾಗರಿಕರಿಗೂ ಸಂಬಂಧವಿಲ್ಲ: ನರಸಿಂಹರಾವ್
ಪೌರತ್ವ ತಿದ್ದುಪಡಿ ಮಸೂದೆಗೂ ದೇಶದ ನಾಗರಿಕರಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಜಿ.ವಿ.ಎಲ್ ನರಸಿಂಹ ರಾವ್ ಹೇಳಿದ್ದಾರೆ.

ಕೊಲ್ಕತ್ತಾ: ಪೌರತ್ವ ಕಾಯ್ದೆ, ಎನ್ ಆರ್ ಸಿ ಹಿಂಪಡೆಯುವವರೆಗೂ ಪ್ರತಿಭಟನೆ, ಮೆಗಾ ರ‍್ಯಾಲಿಯಲ್ಲಿ ಮಮತಾ
ಪೌರತ್ವ ( ತಿದ್ದುಪಡಿ ) ಕಾಯ್ದೆ ಹಾಗೂ ದೇಶಾದ್ಯಂತ ಎನ್ ಆರ್ ಸಿ ಅನುಷ್ಠಾನ ಪ್ರಸ್ತಾವವನ್ನು ವಿರೋಧಿಸಿ ಸಹಸ್ರಾರು ಟಿಎಂಸಿ ಕಾರ್ಯಕರ್ತರೊಂದಿಗೆ ಇಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕೊಲ್ಕತ್ತಾದ ಬೀದಿಗಳಲ್ಲಿ ಮೆಗಾ ರ‍್ಯಾಲಿ ನಡೆಸಲಾಯಿತು.

