CAA

ಕಾಂಗ್ರೆಸ್‌ನಿಂದ ಮತ ಬ್ಯಾಂಕ್ ರಾಜಕಾರಣ: ಗೋವಿಂದ ಕಾರಜೋಳ
ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ತನ್ನ ಮತ ಬ್ಯಾಂಕಿಗಾಗಿ ಅಲ್ಪಸಂಖ್ಯಾತರು, ದೀನದಲಿತರು ಸೇರಿದಂತೆ ಕೆಲ ಸಮುದಾಯಗಳಿಗೆ ತಪ್ಪು ತಿಳುವಳಿಕೆ ಕೊಟ್ಟು ಅವರನ್ನು ಭಯದ ವಾತಾವರಣದಲ್ಲಿಯೇ ಇರುವಂತೆ ಮಾಡಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.

ಸಿಎಎ ಪರ ಬಿಜೆಪಿ ದೇಶಾದ್ಯಂತ 'ಮನೆ ಮನೆ ಸಂಪರ್ಕ ಅಭಿಯಾನ': ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಇಂದು ಚಾಲನೆ
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದೇಶಾದ್ಯಂತ ಜನರಲ್ಲಿ ಅರಿವು ಮೂಡಿಸಲು ಬಿಜೆಪಿ ಹಮ್ಮಿಕೊಂಡಿರುವ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭಾನುವಾರ ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಸಂತ ನಗರದಲ್ಲಿ ಚಾಲನೆ ನೀಡಲಿದ್ದಾರೆ.

ಸಿಎಎ ವಿರೋಧಿಸಿ ದೇಶವ್ಯಾಪಿ ಯಾತ್ರೆ : ಯಶವಂತ ಸಿನ್ಹಾ
ಪೌರತ್ವ (ತಿದ್ದುಪಡಿ) ಕಾಯ್ದೆ, ನಾಗರಿಕರ ರಾಷ್ಟ್ರೀಯ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ವಿರೋಧಿಸಿ ರಾಷ್ಟ್ರವ್ಯಾಪಿ 'ಯಾತ್ರೆ' ನಡೆಸುವುದಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರು ಶನಿವಾರ ಘೋಷಿಸಿದ್ದಾರೆ.

ಪೌರತ್ವ ಕಾಯ್ದೆ ಕುರಿತು ಬೇಜವಾಬ್ದಾರಿಯಿಂದ ಹೇಳಿಕೆ ನೀಡುವುದಿಲ್ಲ: ವಿರಾಟ್ ಕೊಹ್ಲಿ
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಸಂಪೂರ್ಣ ಮಾಹಿತಿಯಿಲ್ಲದೆ ಬೇಜವಾಬ್ದಾರಿಯ ಹೇಳಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪೌರತ್ವ ಕಾಯಿದೆ ಬೆಂಬಲಿಸಿದ ಪ್ರಾದೇಶಿಕ ಪಕ್ಷಗಳಿಗೆ ಈಗ ವಾಸ್ತವದ ಅರಿವಾಗಿದೆ: ಗುಲಾಮ್ ನಬಿ ಆಜಾದ್
ಪ್ರತಿಪಕ್ಷಗಳಿಗೆ ರಾಜ್ಯ ಸಭೆಯಲ್ಲಿ ಬಹುಮತ ಇದ್ದರೂ ಕೆಲವು ಪ್ರಾದೇಶಿಕ ಪಕ್ಷಗಳು ಸಿಎಬಿ ಕಾಯ್ದೆಗೆ ಬೆಂಬಲಿಸಿದ್ದವು. ಆದರೆ ಈಗ ಅವರಿಗೆ ವಾಸ್ತವ ಅರಿವಾಗಿದೆ. ಅವರು ಈಗ ಈ ಕಾಯ್ದೆ ಬೆಂಬಲಿಸಬಾರದು ಎನ್ನುತ್ತಿದ್ದಾರೆ.

ನಿಮ್ಮ ಮಿತ್ರ ರಾಷ್ಟ್ರಗಳು, ನಿಮ್ಮ ಸಿಎಂರಿಂದಲೇ ಸಿಎಎ ಗೆ ವಿರೋಧ : ಅಮಿತ್ ಶಾಗೆ ಕಾಂಗ್ರೆಸ್ ತಿರುಗೇಟು
ಸೇವೆ ಮಾಡಲು ಜನರು ಪ್ರಧಾನಿ ಮತ್ತು ಗೃಹ ಸಚಿವರನ್ನು ಆಯ್ಕೆ ಮಾಡಿದ್ದಾರೆ ಹೊರತು ವಿಪಕ್ಷಗಳನ್ನು ತೆಗಳಲು ಅಲ್ಲ ಎಂದು ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷದ ನಾಯಕರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಬಾಂಗ್ಲಾ ವಿಡಿಯೋ ತೋರಿಸಿ ಉತ್ತರ ಪ್ರದೇಶದ್ದು ಎಂದ ಪಾಕ್ ಪ್ರಧಾನಿ, ಭೀಕರ ಟ್ರೋಲ್!
ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಭಾರತದ ಕಾಲೆಳೆಯಲು ನಕಲಿ ವಿಡಿಯೋ ಅಪ್ಲೋಡ್ ಮಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ನೆಟ್ಟಿಗರು ಭೀಕರವಾಗಿ ಟ್ರೋಲ್ ಮಾಡುತ್ತಿದ್ದಾರೆ.

ಪ್ರಜಾಪ್ರಭುತ್ವ ಉಳಿಸಬೇಕಾಗಿದೆ: ಸಿಎಎ ವಿರುದ್ಧ 11 ರಾಜ್ಯಗಳ ಸಿಎಂಗಳಿಗೆ ಪಿಣರಾಯಿ ವಿಜಯನ್ ಪತ್ರ
ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ ಬೆನ್ನಲ್ಲೇ ಸಿಎಎ ವಿರೋಧಿಸಿ 11 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲರೂ ಒಂದಾಗಬೇಕು ಎಂದು ಹೇಳಿದ್ದಾರೆ.

ಮುಸ್ಲಿಂ ಹಾಗೂ ಹಿಂದೂ ಇಬ್ಬರ ಮೇಲೂ ಸಿಎಎ ಪರಿಣಾಮ ಬೀರಲಿದೆ- ಕೇಜ್ರಿವಾಲ್
ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಂ ಹಾಗೂ ಹಿಂದೂ ಇಬ್ಬರ ಮೇಲೆ ಪರಿಣಾಮ ಬೀರಲಿದ್ದು, ಅನಗತ್ಯವಾಗಿ ಜಾರಿಗೆ ಬಂದಿರುವ ಕಾಯ್ದೆಯನ್ನು ಜನತೆ ತಿರಸ್ಕರಿಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ

