ದೇಶ

ಮುಸ್ಲಿಂ ಹಾಗೂ ಹಿಂದೂ ಇಬ್ಬರ ಮೇಲೂ ಸಿಎಎ ಪರಿಣಾಮ ಬೀರಲಿದೆ- ಕೇಜ್ರಿವಾಲ್ 

ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಂ ಹಾಗೂ ಹಿಂದೂ ಇಬ್ಬರ ಮೇಲೆ ಪರಿಣಾಮ ಬೀರಲಿದ್ದು, ಅನಗತ್ಯವಾಗಿ ಜಾರಿಗೆ ಬಂದಿರುವ ಕಾಯ್ದೆಯನ್ನು ಜನತೆ ತಿರಸ್ಕರಿಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ

ಮುಸ್ಲಿಂ ಹಾಗೂ ಹಿಂದೂ ಇಬ್ಬರ ಮೇಲೂ ಸಿಎಎ ಪರಿಣಾಮ ಬೀರಲಿದೆ- ಕೇಜ್ರಿವಾಲ್ 
ಕೇಜ್ರಿವಾಲ್
Published On :

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಂ ಹಾಗೂ ಹಿಂದೂ ಇಬ್ಬರ ಮೇಲೆ ಪರಿಣಾಮ ಬೀರಲಿದ್ದು, ಅನಗತ್ಯವಾಗಿ ಜಾರಿಗೆ ಬಂದಿರುವ ಕಾಯ್ದೆಯನ್ನು ಜನತೆ ತಿರಸ್ಕರಿಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ

ಟೌನ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದಿಂದ ಬರುವ ಎರಡು ಕೋಟಿ ಹಿಂದೂಗಳಿಗೆ ಏಲ್ಲಿ ಜಾಗ ನೀಡೋದು ಎಂದು ಪ್ರಶ್ನಿಸಿದ ಅವರು, ಈ ಕಾಯ್ದೆ ಸಂಪೂರ್ಣವಾಗಿ ಅನಗತ್ಯವಾಗಿದ್ದು, ಈ ಕಾನೂನು ನಮಗೆ ಬೇಡ ಎಂದರು.

ಕೇಂದ್ರ ಸರ್ಕಾರ ಮೊದಲು ಇಲ್ಲಿನ ನಾಗರಿಕರ ಬಗ್ಗೆ ಎಚ್ಚರಿಕೆ ವಹಿಸಬೇಕು, ನಂತರ ಇತರ ರಾಷ್ಟ್ರಗಳ ಜನರ ಬಗ್ಗೆ ಗಮನ ಹರಿಸಲಿ ದೇಶಕ್ಕೆ ಅನಗತ್ಯವಾಗಿರುವ ಈ ಕಾಯ್ದೆಗಿಂತಲೂ ಮೊದಲು ನಮ್ಮ ಮಕ್ಕಳಿಗೆ ಉದ್ಯೋಗ ನೀಡಬೇಕಾದ ಅಗತ್ಯತೆ ಹೆಚ್ಚಾಗಿದೆ ಎಂದು ಹೇಳಿದರು. 

ಡಿಸೆಂಬರ್ 31, 2014ರೂ ಮುಂಚಿತವಾಗಿ  ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನದಿಂದ ಭಾರತಕ್ಕೆ ಬರುವ ಹಿಂದೂ, ಸಿಖ್, ಬೌದ್ದ, ಜೈನ, ಪಾರ್ಸಿ, ಕ್ರಿಶ್ಚಿಯನ್ ಸಮುದಾಯಗಳಿಗೆ ದೇಶದ ಪೌರತ್ವ ನೀಡುವುದಾಗಿ ಕಾಯ್ದೆ ಹೇಳುತ್ತದೆ ಆದರೆ,ಈ ಕಾಯ್ದೆ ಜಾರಿಗೆ ಬರುವುದರಿಂದ ಮುಸ್ಲಿಂರಿಗೆ ಮಾತ್ರವಲ್ಲ ಹಿಂದೂಗಳ ಮೇಲೂ ಪರಿಣಾಮ ಬೀರಲಿದೆ ಎಂದು ಕೇಜ್ರಿವಾಲ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.