BMRCL

6 ತಿಂಗಳಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರಿಂದ 32 ಲಕ್ಷ ರೂ ದಂಡ ವಸೂಲಿ: BMRCL
ಕಳೆದ ಆರು ತಿಂಗಳುಗಳಲ್ಲಿ ಬೆಂಗಳೂರು ಮೆಟ್ರೋ ಪ್ರಾಧಿಕಾರ ಪ್ರಯಾಣಿಕರಿಂದ ಸುಮಾರು 32 ಲಕ್ಷ ರೂ ದಂಡ ವಸೂಲಿ ಮಾಡಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಚಾಲಕರಹಿತ ರೈಲಿನ ವ್ಯವಸ್ಥೆ, ನಿಯಂತ್ರಣ ಹೇಗೆ?
ಐಟಿ ಸಿಟಿ ಬೆಂಗಳೂರಿನ ಹೆಬ್ಬಗೋಡಿ ಡಿಪೋದಲ್ಲಿ ನಿಯೋಜನೆಗೊಂಡಿರುವ ಮಾನವರಹಿತ ಸಂವಹನ ಆಧಾರಿತ ರೈಲು ನಿಯಂತ್ರಣ (CBTC) ರೈಲು ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಮೆಟ್ರೋ ರೈಲುಗಳಿಗಿಂತ ಹೆಚ್ಚಿನ ಅನುಕೂಲಗಳನ್ನು ಪ್ರಯಾಣಿಕರಿಗೆ ಒದಗಿಸುತ್ತದೆ.

Romance in Metro train: ಬೆಂಗಳೂರು ಮೆಟ್ರೋ ರೈಲಿನಲ್ಲಿ ಯುವಕ-ಯವತಿಯ ಅಸಭ್ಯ ವರ್ತನೆ, ಸಹ ಪ್ರಯಾಣಿಕರ ಆಕ್ರೋಶ
ಚಲಿಸುತ್ತಿದ್ದ ಮೆಟ್ರೋ ರೈಲಿನಲ್ಲಿ ಯುವಕ- ಯುವತಿ ಪರಸ್ಪರ ಬಿಗಿದಪ್ಪಿದ್ದ ವರ್ತನೆಗೆ ಸಹ ಪ್ರಯಾಣಿಕರು ಕಿಡಿಕಾರಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

Namma Metro: 'ಚಾಕೊಲೆಟ್' ಪ್ರಚಾರಕ್ಕೆ ಮೆಟ್ರೋ ವಾಶ್ ರೂಂನಲ್ಲಿ ಕ್ಯೂಆರ್ ಕೋಡ್: ವ್ಯಕ್ತಿ ಬಂಧನ
ಇತ್ತೀಚೆಗೆ ಚಾಕೊಲೆಟ್ ಉದ್ಯಮ ಆರಂಭಿಸಿದ್ದ ವ್ಯಕ್ತಿಯೋರ್ವ ತನ್ನ ಉತ್ಪನ್ನ ಪ್ರಚಾರಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಲ್ದಾಣದ ಶೌಚಾಲಯಗಳಲ್ಲಿ ಭಿತ್ತಿಪತ್ರ ಅಂಟಿಸಿ ಸಿಕ್ಕಿಬಿದ್ದಿದ್ದು, ಪೊಲೀಸರ ಅತಿಥಿಯಾಗಿದ್ದಾರೆ.

ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ; 2023-2024ರಲ್ಲಿ BMRCL ಗೆ 130 ಕೋಟಿ ರೂ. ಲಾಭ
ಬೆಂಗಳೂರು ಮೆಟ್ರೊ ರೈಲು ನೆಟ್‌ವರ್ಕ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಸತತ ಎರಡನೇ ಹಣಕಾಸು ವರ್ಷವೂ ತನ್ನ ಕಾರ್ಯಾಚರಣೆಯಿಂದ ಅಧಿಕ ಲಾಭ ಗಳಿಸಿದೆ. 2023-2024ರ ಆರ್ಥಿಕ ವರ್ಷದಲ್ಲಿ 129.3 ಕೋಟಿ ರೂ. ಲಾಭ ಗಳಿಸಿದೆ. ಇದು ಈವರೆಗಿನ ಅತ್ಯಧಿಕ ಲಾಭವಾಗಿದೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ.

ಮೆಟ್ರೋ 3ನೇ ಹಂತದ ಯೋಜನೆ: ಭೂಸ್ವಾಧೀನ ಪ್ರಕ್ರಿಯೆಗೆ BMRCL ಚಾಲನೆ
ಮೆಟ್ರೋ 3ನೇ ಹಂತದ ಯೋಜನೆಗೆ ಕೇಂದ್ರದ ಅನುಮತಿಗಾಗಿ ಕಾಯುತ್ತಿರುವಾಗಲೇ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಯೋಜನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದೆ. 106 ಎಕರೆ ವ್ಯಾಪ್ತಿಯಲ್ಲಿರುವ ಒಟ್ಟು 713 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಗುರುತಿಸಲಾಗಿದ್ದು, ಆ ಎಲ್ಲ ಆಸ್ತಿಗಳನ್ನು ಯೋಜನೆಗೆ ಬಿಟ್ಟುಕೊಡಲು ಮಾಲೀಕರು ಸಿದ್ಧರಿಲ್ಲ.

ನಮ್ಮ ಮೆಟ್ರೋ ಬಗ್ಗೆ ನೀವೆಷ್ಟು ಸಂತೃಪ್ತ? ಏಪ್ರಿಲ್ 8 ರಿಂದ ಪ್ರಯಾಣಿಕರ ತೃಪ್ತಿ ಸಮೀಕ್ಷೆಯಲ್ಲಿ ನೀವೂ ಭಾಗವಹಿಸಿ
ನಮ್ಮ ಮೆಟ್ರೋ ಪ್ರಯಾಣಿಕರ ಅಭಿಪ್ರಾಯ ತಿಳಿದುಕೊಳ್ಳಲು ತೃಪ್ತಿ ಸಮೀಕ್ಷೆಗೆ ಮುಂದಾಗಿದ್ದು, 'ಕಾಮೆಟ್ ನೊವಾ'(COMET NOVA) ಸಂಸ್ಥೆಯು ಏಪ್ರಿಲ್ 8 ರಿಂದ ಮೇ 6 ರವರೆಗೆ ಸಮೀಕ್ಷೆ ನಡೆಸಲಿದೆ.

ಚಲ್ಲಘಟ್ಟ ಮೆಟ್ರೋ ನಿಲ್ದಾಣ: ಬೆಂಗಳೂರು- ಮೈಸೂರು ಹೆದ್ದಾರಿ ಕೆಳಗಿನ ಸೇತುವೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲ!
ಚಲ್ಲಘಟ್ಟ ಮೆಟ್ರೋ ನಿಲ್ದಾಣಕ್ಕೆ ತೆರಳುವವರು ಅಥವಾ ವಾಪಸ್ ಬರುವವರಿಗೆ, ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಅನುಕೂಲಕರಾಗುವ ನಿಟ್ಟಿನಲ್ಲಿ ಬಿಎಂಆರ್ ಸಿಎಲ್ ಬೆಂಗಳೂರು-ಮೈಸೂರು ಹೆದ್ದಾರಿಯ ಎರಡೂ ಬದಿಗಳಲ್ಲಿ ಸೇತುವೆ ನಿರ್ಮಿಸಲು ತೀರ್ಮಾನಿಸಿದೆ.

ತಾಯಿಯೊಂದಿಗೆ ಜಗಳ: BMRCL ಕಾರ್ಮಿಕ ಆತ್ಮಹತ್ಯೆಗೆ ಶರಣು
ತಾಯಿಯೊಂದಿಗೆ ಜಗಳ ಮಾಡಿಕೊಂಡ ಬಿಎಂಆರ್‌ಸಿಎಲ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ಬೈಯಪ್ಪನಹಳ್ಳಿ ಡಿಪೋದಲ್ಲಿ ನಡೆದಿದೆ.

