Bigg Boss Kannada

ಬಿಗ್ ಬಾಸ್ ಕನ್ನಡ 10: ವಿನಯ್ ಟೀಮ್‌ನ ಮತ್ತೊಂದು ವಿಕೆಟ್ ಪತನ, ದೊಡ್ಮನೆಯಿಂದ ಹೊರಬಂದ ಮೈಕಲ್!
ಬಿಗ್ ಬಾಸ್' ಕನ್ನಡ 10 ಶೋ ಆರಂಭವಾಗಿ ಈಗಾಗಲೇ 13 ವಾರಗಳನ್ನು ಪೂರೈಸಿದ್ದು, ಈ ವಾರ ಮೈಕಲ್ ಅಜಯ್ ಅವರು ತಮ್ಮ ಆಟವನ್ನು ಅಂತ್ಯಗೊಳಿಸಿದ್ದಾರೆ. ವೀಕ್ಷಕರಿಂದ ಕಡಿಮೆ ವೋಟ್ ಪಡೆದುಕೊಂಡ ಕಾರಣ, ಮೈಕಲ್ ಅವರು ದೊಡ್ಮನೆಯಿಂದ ಹೊರಬಂದಿದ್ದಾರೆ.

ಪ್ರಮುಖ ಕಾರಣವೊಂದಕ್ಕೆ ಗಮನ ಸೆಳೆದ ಬಿಗ್ ಬಾಸ್ ಕನ್ನಡ; ಕರ್ನಾಟಕ ಸರ್ಕಾರದಿಂದಲೂ ಪ್ರಶಂಸೆ
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಈ ಬಾರಿ ಪ್ರಮುಖ ಕಾರಣವೊಂದಕ್ಕೆ ಗಮನಸೆಳೆದಿದೆ. ಮುಟ್ಟಿನ ಕಪ್ ಬಳಕೆಯನ್ನು ಉತ್ತೇಜಿಸುತ್ತಿರುವ ರಾಜ್ಯ ಸರ್ಕಾರ ಬಿಗ್ ಬಾಸ್ ಕನ್ನಡ ಶೋ ಮೂಲಕ ಜಾಗೃತಿ ಮೂಡಿಸಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿದೆ.

ಮೋಸಗಾರ, ಮಾದಕ ವ್ಯಸನಿ, ಮಗಳಿಗೆ ಅನ್ಯಾಯ ಮಾಡಿದ್ದಾನೆ: ವರ್ತೂರು ಸಂತೋಷ್ ವಿರುದ್ಧ ಮಾವನ ಆರೋಪ
ಬಿಗ್ ಬಾಸ್ ಮೂಲಕ ನಾಡಿಗೆ ಪರಿಚಯವಾದ ವರ್ತೂರು ಸಂತೋಷ್ ನಾನಾ ಕಾರಣಗಳಿಂದಾಗಿ ಸುದ್ದಿ ಆಗುತ್ತಿದ್ದಾರೆ. ಈ ಹಿಂದೆ ಹುಲಿ ಉಗುರು ಕಾರಣಕ್ಕಾಗಿ ಅವರು ಸಂಚಲನ ಸೃಷ್ಟಿ ಮಾಡಿದ್ದರು. ಜೈಲಿಗೂ ಹೋಗಿ ಬಂದರು.

ರಾಮೋಹಳ್ಳಿ ಪೊಲೀಸರಿಂದ ವರ್ತೂರು ಸಂತೋಷ್ ಅರೆಸ್ಟ್: ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲು!
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸ್ಪರ್ಧಿಯಾಗಿರುವ ವರ್ತೂರು ಸಂತೋಷ್ ಬಂಧನವಾಗಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಸ್ಪರ್ಧಿಯೊಬ್ಬರನ್ನ ಬಂಧಿಸಲಾಗಿದೆ.

ಬಿಗ್ ಬಾಸ್ ಕನ್ನಡ 10ನೇ ಸೀಸನ್ ಆರಂಭಕ್ಕೆ ಡೇಟ್ ಫಿಕ್ಸ್!
ಕನ್ನಡದ ಕಿರುತೆರೆಯ ವೀಕ್ಷಕರು ಕಾಯುತ್ತಿದ್ದ ಮಹತ್ವದ ಅಪ್‌ಡೇಟ್ ಸಿಕ್ಕಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕನ್ನಡದ 10ನೇ ಆವೃತ್ತಿಯ ಡೇಟ್ ಫಿಕ್ಸ್ ಆಗಿದೆ.

ಮಲಯಾಳಂ ಸಿನಿಮಾ ಚಿತ್ರೀಕರಣ ಪೂರ್ಣ; ಕನ್ನಡದಲ್ಲಿ ಮುಂದಿನ ಚಿತ್ರ ಘೋಷಿಸಿದ ಆರ್ಯನ್
ಬಿಗ್ ಬಾಸ್ ಸ್ಪರ್ಧಿ ಮತ್ತು ನಟ ಆರ್ಯನ್, ಕೊನೆಯ ಚಿತ್ರ 'ಡಿಯರ್ ಸತ್ಯ'ದಲ್ಲಿನ ಅವರ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಚೊಚ್ಚಲ ಮಲಯಾಳಂ (ದಿಲೀಪ್-ಅರುಣ್ ಗೋಪಿ ಅವರ ಚಿತ್ರ) ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಇದೀಗ ಕನ್ನಡದಲ್ಲಿ ತಮ್ಮ ಮುಂದಿನ ಯೋಜನೆಯನ್ನು ಘೋಷಿಸಿದ್ದಾರೆ.

'ಪ್ರೇಮಿಗಳ ಗಮನಕ್ಕೆ' ಸಿನಿಮಾದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 6 ವಿಜೇತ ಶಶಿ ಕುಮಾರ್
ಬಿಗ್ ಬಾಸ್ ಕನ್ನಡ ಸೀಸನ್ 6 ವಿಜೇತ, ಕೃಷಿಕ ಮತ್ತು ನಟ ಶಶಿಕುಮಾರ್ ಅವರು ಕೊನೆಯದಾಗಿ ಮೆಹಬೂಬಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕನ್ನಡ-ತಮಿಳು ದ್ವಿಭಾಷಾ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ಶಾಕಿಂಗ್ ಡಬಲ್ ಎಲಿಮಿನೇಶನ್ : ಬಿಗ್‌ಬಾಸ್ ಮನೆಯಿಂದ ಅಮೂಲ್ಯ ಗೌಡ, ಅರುಣ್ ಸಾಗರ್ ಔಟ್!
ಬಿಗ್ ಬಾಸ್ ಮನೆಯ ಆಟ ಕಡೆಯ ಘಟ್ಟದಲ್ಲಿದೆ. ಫಿನಾಲೆಗೆ ಕೆಲವೇ ದಿನಗಳು ಬಾಕಿಯಿದೆ. 8 ಜನ ಸ್ಪರ್ಧಿಗಳಿದ್ದ ಮನೆಯಲ್ಲಿ, ಈ ವಾರ ಡಬಲ್ ಎಲಿಮಿನೇಷನ್ ಆಗಿದೆ. ಅಮೂಲ್ಯ ಗೌಡ ಮತ್ತು ಅರುಣ್ ಸಾಗರ್ ಮನೆಯಿಂದ ಹೊರ ಬಂದಿದ್ದಾರೆ.

ಆಗಸ್ಟ್ 6 ರಿಂದ ಒಟಿಟಿಯಲ್ಲಿ ಕನ್ನಡ ಬಿಗ್ ಬಾಸ್ ಮೊದಲ ಸೀಸನ್: ಈ ಬಗ್ಗೆ ಸುದೀಪ್ ಹೇಳಿದ್ದೇನು?
ಕನ್ನಡ ಡಿಜಿಟಲ್ ಲೋಕದಲ್ಲಿ ಹೊಸ ಕ್ರಾಂತಿಯಾಗುತ್ತಿದೆ. ವೂಟ್ ಒಟಿಟಿಯಲ್ಲಿ ಬಿಗ್ ಬಾಸ್‌ನ ಮೊದಲ ಸೀಸನ್ ಆರಂಭ ಆಗುವುದಕ್ಕೆ ಕ್ಷಣಗಣನೆ ಶುರುವಾಗಿದೆ. ಆಗಸ್ಟ್ 6 ರಿಂದ ಈ ರಿಯಾಲಿಟಿ ಶೋ ಒಟಿಟಿಯಲ್ಲಿ ಪ್ರಸಾರವಾಗಲಿದೆ.

