ಸಿನಿಮಾ ಸುದ್ದಿ

ಶಾಕಿಂಗ್ ಡಬಲ್ ಎಲಿಮಿನೇಶನ್ : ಬಿಗ್‌ಬಾಸ್ ಮನೆಯಿಂದ ಅಮೂಲ್ಯ ಗೌಡ, ಅರುಣ್ ಸಾಗರ್ ಔಟ್!

ಬಿಗ್ ಬಾಸ್ ಮನೆಯ ಆಟ ಕಡೆಯ ಘಟ್ಟದಲ್ಲಿದೆ. ಫಿನಾಲೆಗೆ ಕೆಲವೇ ದಿನಗಳು ಬಾಕಿಯಿದೆ. 8 ಜನ ಸ್ಪರ್ಧಿಗಳಿದ್ದ ಮನೆಯಲ್ಲಿ, ಈ ವಾರ ಡಬಲ್ ಎಲಿಮಿನೇಷನ್ ಆಗಿದೆ. ಅಮೂಲ್ಯ ಗೌಡ ಮತ್ತು ಅರುಣ್ ಸಾಗರ್ ಮನೆಯಿಂದ ಹೊರ ಬಂದಿದ್ದಾರೆ.

ಶಾಕಿಂಗ್ ಡಬಲ್ ಎಲಿಮಿನೇಶನ್ : ಬಿಗ್‌ಬಾಸ್ ಮನೆಯಿಂದ ಅಮೂಲ್ಯ ಗೌಡ, ಅರುಣ್ ಸಾಗರ್ ಔಟ್!
ಅರುಣ್ ಸಾಗರ್ ಮತ್ತು ಅಮೂಲ್ಯ ಗೌಡ
Published On :

ಬೆಂಗಳೂರು: ಬಿಗ್ ಬಾಸ್ ಮನೆಯ ಆಟ ಕಡೆಯ ಘಟ್ಟದಲ್ಲಿದೆ. ಫಿನಾಲೆಗೆ ಕೆಲವೇ ದಿನಗಳು ಬಾಕಿಯಿದೆ. 8 ಜನ ಸ್ಪರ್ಧಿಗಳಿದ್ದ ಮನೆಯಲ್ಲಿ, ಈ ವಾರ ಡಬಲ್ ಎಲಿಮಿನೇಷನ್ ಆಗಿದೆ. ಅಮೂಲ್ಯ ಗೌಡ ಮತ್ತು ಅರುಣ್ ಸಾಗರ್ ಮನೆಯಿಂದ ಹೊರ ಬಂದಿದ್ದಾರೆ.

‘ಕಮಲಿ’ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದ ನಟಿ ಅಮೂಲ್ಯ ಗೌಡ ಸೀಸನ್ 9ಕ್ಕೆ ಕಾಲಿಟ್ಟಿದ್ದರು. ಟಾಸ್ಕ್, ಅಡುಗೆ, ಮನರಂಜನೆ ಅಂತಾ ಇತರೆ ಸ್ಪರ್ಧಿಗಳಿಗೆ ಸಖತ್ ಪೈಪೋಟಿ ನೋಡಿದ್ದರು. ಆದರೆ ಅಮೂಲ್ಯ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ.

ಈ ವಾರ ಅಮೂಲ್ಯ ಗೌಡ ಮತ್ತು ಅರುಣ್ ಸಾಗರ್ ಮನೆಯಿಂದ ಹೊರಬಿದ್ದಿದ್ದು, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದೀಪಿಕಾ ದಾಸ್, ದಿವ್ಯಾ ಉರುಡುಗ, ಆರ್ಯವರ್ಧನ್ ಅಂತಿಮ ವಾರಕ್ಕೆ ಕಾಲಿಟ್ಟಿದ್ದಾರೆ.

ಅಮೂಲ್ಯ ಗೌಡ ಮತ್ತು ಅರುಣ್ ಸಾಗರ್ ಮನೆಯ ಪ್ರಬಲ ಸ್ಪರ್ಧಿಗಳೆಂದೇ ಗುರುತಿಸಿಕೊಂಡಿದ್ದರು. ಅಮೂಲ್ಯ ಅವರು ನೇರಾನೇರ ಮಾತಿನ ಮೂಲಕ ಗಮನ ಸೆಳೆದಿದ್ದರು. 11ನೇ ವಾರ ಟಾಸ್ಕ್‌ಗಳಲ್ಲಿ ಅಷ್ಟಾಗಿ ಗಮನ ಸೆಳೆದಿರಲಿಲ್ಲ. ಆದರೆ, 12ನೇ ವಾರದ ಟಾಸ್ಕ್‌ಗಳಲ್ಲಿ ಮತ್ತೆ ಹಳಿಗೆ ಮರಳಿದ್ದರು. 13ನೇ ವಾರ ಮನೆಯ ಎಲ್ಲ ಸದಸ್ಯರ ಜೊತೆ ಯಾವುದೇ ಮನಸ್ತಾಪವಿಲ್ಲದೆ ಉತ್ತಮವಾಗಿ ಸಾಗುತ್ತಿದ್ದರು. ಅಷ್ಟರಲ್ಲಿ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.