Bhopal

ಭೋಪಾಲ್: ಪ್ರಧಾನಿ ರ‍್ಯಾಲಿಗೆ ತೆರಳುತ್ತಿದ್ದ ಖಾಸಗಿ ಬಸ್ ಟ್ರಕ್‌ಗೆ ಡಿಕ್ಕಿ, 39 ಮಂದಿಗೆ ಗಾಯ
ಭೋಪಾಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿ ಸ್ಥಳಕ್ಕೆ ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಖಾರ್ಗೋನ್ ಜಿಲ್ಲೆಯಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 39 ಮಂದಿ ಗಾಯಗೊಂಡಿದ್ದು, ಅವರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಬಿಜೆಪಿ ಯಾತ್ರೆಗೆ ಅಹ್ವಾನ ನೀಡಿದರೂ ಹೋಗುವುದಿಲ್ಲ: ಫ್ರೈರ್ ಬ್ರಾಂಡ್ ಉಮಾಭಾರತಿ!
ಮಧ್ಯಪ್ರದೇಶದಲ್ಲಿ ತಮ್ಮದೇ ಬಿಜೆಪಿ ಪಕ್ಷ ಹಮ್ಮಿಕೊಂಡಿರುವ ಜನಾಶೀರ್ವಾದ್ ಯಾತ್ರೆಗೆ ಆಹ್ವಾನಿಸದಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದ್ದ ಬಿಜೆಪಿ ಫೈರ್ ಬ್ರಾಂಡ್ ನಾಯಕಿ ಉಮಾಭಾರತಿ ಇದೀಗ ಯಾತ್ರೆಗೆ ಆಹ್ವಾನ ನೀಡಿದರೂ ಹೋಗುವುದಿಲ್ಲ ಎಂದು ಖಜಕ್ ಆಗಿ ಹೇಳಿದ್ದಾರೆ.

'ಭಾರತ ಹಿಂದೂ ರಾಷ್ಟ್ರ' ಎಂದ ಕಮಲ್ ನಾಥ್, 'ಬಜರಂಗದಳ ನಿಷೇಧವಿಲ್ಲ.. ರಾಜಿನಾಮೆ ನೀಡಿ' ಎಂದ ದಿಗ್ವಿಜಯ್ ಸಿಂಗ್
ದೇಶದಲ್ಲಿ ಶೇ.82ರಷ್ಚು ಮಂದಿ ಹಿಂದೂಗಳಿದ್ದು ಹೀಗಾಗಿ ಇಲ್ಲಿ ಹಿಂದೂ ರಾಷ್ಟ್ರ ಹೌದೇ ಅಲ್ಲವೇ ಎಂಬ ಚರ್ಚೆಯೇ ಬೇಕಿಲ್ಲ ಎಂಬ ಮಧ್ಯ ಪ್ರದೇಶ ಸಿಎಂ ಕಮಲ್ ನಾಥ್ ಅವರ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿಮಾನ ತುರ್ತು ಭೂಸ್ಪರ್ಶ!
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ಭೋಪಾಲ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಹವಾಮಾನ ವೈಪರೀತ್ಯದಿಂದಾಗಿ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ.

ಮಧ್ಯಪ್ರದೇಶದಲ್ಲಿ ಪರೀಕ್ಷೆ ಹಗರಣದ ವಿರುದ್ಧ ಪ್ರತಿಭಟನೆ: ಜಲ ಫಿರಂಗಿ ಬಳಸಿ ಕೈ ಕಾರ್ಯಕರ್ತರನ್ನು ಚದುರಿಸಿದ ಪೊಲೀಸ್
ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಪಟ್ವಾರಿ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಗಳನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ಮಧ್ಯ ಪ್ರದೇಶ: ಕುನೋ ಅರಣ್ಯಕ್ಕೆ ಮತ್ತೆರಡು ಚೀತಾ ಬಿಡುಗಡೆ, ಸಂಖ್ಯೆ 12ಕ್ಕೆ ಏರಿಕೆ!
ಮಧ್ಯಪ್ರದೇಶದಲ್ಲಿ ಮತ್ತೆರಡು ಚೀತಾಗಳನ್ನು ಕುನೋ ಅರಣ್ಯಕ್ಕೆ ಬಿಡುಗಡೆ ಮಾಡಲಾಗಿದ್ದು, ಆ ಮೂಲಕ ಅರಣ್ಯಕ್ಕೆ ಬಿಡುಗಡೆಯಾದ ಚೀತಾಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ದಾಳಿ ಮಾಡಿದ ವ್ಯಾಘ್ರನನ್ನೇ ಒಗ್ಗಟ್ಟಾಗಿ ಹೆದರಿಸಿ ಓಡಿಸಿದ ಹಸುಗಳು, ಸಿಸಿಟಿವಿಯಲ್ಲಿ ಅಪರೂಪದ ದೃಶ್ಯ ಸೆರೆ
ತಮ್ಮ ಗುಂಪಿನ ಹಸುವೊಂದರ ಮೇಲೆ ದಾಳಿ ಮಾಡಿದ್ದ ಹುಲಿಯನ್ನು ಎಲ್ಲಾ ಹಸುಗಳು ಒಗ್ಗೂಡಿ ಹೆದರಿ ಓಡಿಸಿರುವ ಅಪರೂಪದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಜೊತೆ 'ದಿ ಕೇರಳ ಸ್ಟೋರಿ' ವೀಕ್ಷಿಸಲು ತೆರಳಿದ್ದ ಯುವತಿ ಮತ್ತೆ ನಾಪತ್ತೆ!
ಇತ್ತೀಚೆಗೆ ವಿವಾದಿತ ಹಿಂದಿ ಚಿತ್ರ ‘ದಿ ಕೇರಳ ಸ್ಟೋರಿ’ ವೀಕ್ಷಿಸಲು ಥಿಯೇಟರ್‌ಗೆ ತೆರಳಿದ್ದ 18 ವರ್ಷದ ಯುವತಿ ಮತ್ತೊಮ್ಮೆ ನಾಪತ್ತೆಯಾಗಿದ್ದಾಳೆ. ಆಕೆಯ ಪೋಷಕರು ಭೋಪಾಲ್‌ನ ಕಮಲಾನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

ಮಧ್ಯ ಪ್ರದೇಶ: ಸಾಮೂಹಿಕ ವಿವಾಹದಲ್ಲಿ ವಧುಗಳಿಗೆ ಪ್ರಗ್ನೆನ್ಸಿ ಟೆಸ್ಟ್, ಹಲವರು ಗರ್ಭಿಣಿಯರು! ವಿವಾದ ಸ್ಫೋಟ, ವ್ಯಾಪಕ ಆಕ್ರೋಶ
ಮಧ್ಯಪ್ರದೇಶದ ಸಾಮೂಹಿಕ ವಿವಾಹ ಕಾರ್ಯಕ್ರಮ ಭಾರಿ ವಿವಾದ ಸೃಷ್ಟಿ ಮಾಡಿದ್ದು, ಕಾರ್ಯಕ್ರಮದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

