BDA

ಬಿಬಿಎಂಪಿ, ಬಿಡಿಎ, ಕೆಐಎಡಿಬಿ ವ್ಯಾಜ್ಯಗಳು ನ್ಯಾಯಾಲಯಕ್ಕೆ ಅಂಟಿರುವ ಅನಿಷ್ಟ: ಹೈಕೋರ್ಟ್ ಕಿಡಿ
ಬಿಬಿಎಂಪಿ, ಬಿಡಿಎ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವ್ಯಾಜ್ಯಗಳು ಕೋರ್ಟ್‌ಗೆ ಅಂಟಿರುವ ಅನಿಷ್ಟಗಳಿದ್ದಂತೆ ಎಂದು ಹೈಕೋರ್ಟ್ ಕಿಡಿಕಾರಿದೆ.

ಮಾರುವೇಷದಲ್ಲಿ ಒಮ್ಮೆ ಬಿಡಿಎಗೆ ಹೋಗಿಬನ್ನಿ: ಸುಗ್ರೀವಾಜ್ಞೆ ಮೂಲಕ ಪ್ರಾಧಿಕಾರ ಮುಚ್ಚುವುದೇ ಲೇಸು; ಹೈಕೋರ್ಟ್
ನಿವೇಶನ ಹಂಚಿಕೆದಾರರು ಮತ್ತು ಬಿಡಿಎ ರೂಪಿಸಿದ ಬಡಾವಣೆಗಳಿಂದ ಭೂಮಿ ಕಳೆದುಕೊಂಡವರ ಸಂಕಷ್ಟವನ್ನು ಪರಿಗಣಿಸಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಸುಗ್ರೀವಾಜ್ಞೆ ಮೂಲಕ ಮುಚ್ಚುವುದೇ ಲೇಸು ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

ಶಿವರಾಮ ಕಾರಂತ ಬಡಾವಣೆ: ನಿವೃತ್ತ ನ್ಯಾ. ಚಂದ್ರಶೇಖರ್ ಸಮಿತಿ ವಿಸರ್ಜನೆಗೆ ಕರ್ನಾಟಕ ಹೈಕೋರ್ಟ್ ಅಸ್ತು
ಬೆಂಗಳೂರಿನ ಡಾ. ಶಿವರಾಮಕಾರಂತ ಬಡಾವಣೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎ ವಿ ಚಂದ್ರಶೇಖರ್ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿ ವಿಸರ್ಜನೆಗೆ ಕರ್ನಾಟಕ ಹೈಕೋರ್ಟ್ ಅಸ್ತು ಎಂದಿದೆ.

ಕಾರಂತ್ ಲೇಔಟ್ ನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಿ: ಬಿಡಿಎಗೆ ಹೈಕೋರ್ಟ್ ಸೂಚನೆ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಅಧಿಸೂಚನೆ ಹೊರಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ನಡುವೆಯೇ ಹೈಕೋರ್ಟ್ ಬಡಾವಣೆ ನಿರ್ಮಾಣದ ಕುರಿತು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಗುರುವಾರ ಆದೇಶಿಸಿದೆ.

ವೈಟ್ ರೋಸ್ ಲೇಔಟ್‌ನಲ್ಲಿ ಅಧಿಕೃತ ಕಟ್ಟಡಗಳ ನಿರ್ಮಾಣ: ಪ್ರತಿಭಟನೆ ಬಳಿಕ ಎಚ್ಚೆತ್ತ ಅಧಿಕಾರಿಗಳು, ಬಿಲ್ಡರ್‌ಗಳಿಗೆ ನೋಟಿಸ್ ಜಾರಿ
ನಗರದ ವೈಟ್ ರೋಸ್ ಲೇಔಟ್‌ನಲ್ಲಿ ನಾಯಿಕೊಡೆಗಳಂತೆ ತಲೆಎತ್ತುತ್ತಿರುವ ಅನಧಿಕೃತ ಕಟ್ಟಡಗಳು ಹಾಗೂ ಪೇಯಿಂಗ್ ಗೆಸ್ಟ್ ವಸತಿ ಗೃಹಗಳ ವಿರುದ್ಧ ವೈಟ್‌ಫೀಲ್ಡ್ ನಿವಾಸಿಗಳು ಪ್ರತಿಭಟನೆ ನಡೆಸಿದ ಬಳಿಕ ಬಿಡಿಎ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಬಿಲ್ಡರ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಡಾ.ಶಿವರಾಮ ಕಾರಂತ್ ಲೇಔಟ್‌ನಲ್ಲಿ ದೊಡ್ಡ ಸೈಟ್‌ಗಳಿಗೆ ಪ್ರತಿ ಚದರ ಅಡಿಗೆ 4,900 ರೂ. ನಿಗದಿ: ಬಿಡಿಎ
ಚಾಲ್ತಿಯಲ್ಲಿರುವ ಮಾರುಕಟ್ಟೆ ದರವನ್ನು ಮುಂದುವರಿಸಲು, ಡಾ.ಶಿವರಾಮ ಕಾರಂತ್ ಲೇಔಟ್‌ನಲ್ಲಿ ದೊಡ್ಡ ಆಯಾಮದ ನಿವೇಶನಗಳಿಗೆ ಪ್ರತಿ ಚದರ ಅಡಿಗೆ 4,900 ರೂ.ಗಳನ್ನು ನಿಗದಿಪಡಿಸಲು ಬಿಡಿಎ ಮಂಡಳಿ ನಿರ್ಧರಿಸಿದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಿಎ ನಿವೇಶನ ಹಂಚಿಕೆಯಿಂದ 300 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ: ಬಿಡಿಎ
ನಾಗರಿಕ ಸೌಕರ್ಯ (CA) ನಿವೇಶನಗಳ ಹಂಚಿಕೆಯಲ್ಲಿ ವಿರಾಮ ನಂತರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಧಿಸೂಚನೆ ಪ್ರಕ್ರಿಯೆ ಪ್ರಾರಂಭಿಸಿದೆ. ಹೊಸ ಸರ್ಕಾರದ ಅಡಿಯಲ್ಲಿ ಇದೇ ಮೊದಲ ಬಾರಿಗೆ ನಿವೇಶನ ಹಂಚಿಕೆಯಾಗಲಿದೆ. ಸದ್ಯದಲ್ಲಿಯೇ ಅವುಗಳ ಮೂಲಕ ಕನಿಷ್ಠ 300 ಕೋಟಿ ರೂಪಾಯಿ ಸಂಗ್ರಹಿಸುವ ಯೋಜನೆಯಲ್ಲಿ ಸರ್ಕಾರವಿದೆ.

ಕಾರಂತ ಲೇಔಟ್: ಪ್ರತಿ ಚದರ ಅಡಿಗೆ 3,650 ರೂ. ನಿಗದಿಪಡಿಸಲು ಬಿಡಿಎ ಪ್ರಸ್ತಾಪ
ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ವಿನಾಕಾರಣ ವಿಳಂಬವಾಗುತ್ತಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಈ ಲೇಔಟ್ ಬಹುತೇಕ ಪೂರ್ಣಗೊಂಡಿದ್ದು, ಹಂಚಿಕೆ ಡಿಸೆಂಬರ್ ಮೊದಲ ವಾರದಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ಅದು ಬೇಗನೆ ಆಗುವ ಹಾಗೆ ಕಾಣುತ್ತಿಲ್ಲ.

ಭ್ರಷ್ಟಾಚಾರದ ಕೂಪವೆಂಬ ಕುಖ್ಯಾತಿಯನ್ನು ತೊಡೆದುಹಾಕಿ: ಬಿಡಿಎ ಅಧಿಕಾರಿಗಳಿಗೆ ಡಿಕೆ ಶಿವಕುಮಾರ್
‘ಬ್ರೋಕರ್‌ಗಳ ದಂಧೆ, ಮಧ್ಯಸ್ಥರು, ಭ್ರಷ್ಟಾಚಾರದ ಕೂಪವೆಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು (ಬಿಡಿಎ) ದೂಷಿಸಲಾಗುತ್ತಿದೆ. ಇದನ್ನು ಇಲ್ಲಿನ ಸಿಬ್ಬಂದಿ ತೊಡೆದುಹಾಕಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಹೇಳಿದರು.

