BDA

ಬೆಳ್ಳಂದೂರು ಕೆರೆ ಬಳಿ ಯಾವುದೇ ರಸ್ತೆ ನಿರ್ಮಿಸಿಲ್ಲ: ಎನ್‌ಜಿಟಿಗೆ ಬಿಡಿಎ ಮಾಹಿತಿ
ಬೆಳ್ಳಂದೂರು ಕೆರೆ ಬಳಿ ಯಾವುದೇ ರಸ್ತೆ ನಿರ್ಮಿಸಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬುಧವಾರ ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ಅಫಿಡವಿಟ್ ಸಲ್ಲಿಸಿದೆ.

ಅರ್ಕಾವತಿ ಬಡಾವಣೆ ಯೋಜನೆ: ರೇರಾ ಕಾಯ್ದೆಯಡಿ ನೋಂದಾಯಿಸಿ; ಬಿಡಿಎಗೆ ನ್ಯಾಯಾಲಯದ ಆದೇಶ
ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕ (RERA-K) ಶುಕ್ರವಾರ ಆದೇಶ ಹೊರಡಿಸಿದ್ದು, ರೇರಾ ಕಾಯ್ದೆ 2016 ರ ಅಡಿಯಲ್ಲಿ ತನ್ನ ಅರ್ಕಾವತಿ ಲೇಔಟ್ ಯೋಜನೆಯನ್ನು ತಕ್ಷಣವೇ ನೋಂದಾಯಿಸಲು ಬಿಡಿಎಗೆ ನಿರ್ದೇಶಿಸಿದೆ.

ಬೆಂಗಳೂರಿನಲ್ಲಿ ಮುಂದುವೆರದ ಅಕ್ರಮ ಒತ್ತುವರಿ ಕಾರ್ಯಾಚರಣೆ: 25 ಕೋಟಿ ರೂ ಮೌಲ್ಯದ ಆಸ್ತಿ ಬಿಡಿಎ ವಶಕ್ಕೆ
ಅಕ್ರಮ ಒತ್ತುವರಿ ವಿರುದ್ಧದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯಾಚರಣೆ ಮುಂದುವರೆಸಿದ್ದು, ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ (Kempegowda Layout) ಸುಮಾರು 25 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಬಿಡಿಎ ಮರು ವಶಪಡಿಸಿಕೊಂಡಿದೆ.

ಬಿಡಿಎ ಆಯುಕ್ತರಾಗಿ ಎನ್. ಜಯರಾಮ್ ನೇಮಕ: ರಾಜ್ಯ ಸರ್ಕಾರ ಆದೇಶ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಯುಕ್ತ ಹುದ್ದೆಗೆ ಹಿರಿಯ ಐಎಎಸ್ ಅಧಿಕಾರಿ ಎನ್.ಜಯರಾಮ್ ಅವರನ್ನು ನೇಮಿಸಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಸುಧಾರಿತ ಮೂಲಸೌಕರ್ಯ ವ್ಯವಸ್ಥೆಗೆ ಆದ್ಯತೆ; ಶಿವರಾಮ ಕಾರಂತ ಬಡಾವಣೆಯಲ್ಲಿ 200 ಮೀ. ಅಗಲದ ಮಾದರಿ ರಸ್ತೆ ನಿರ್ಮಾಣ
ಬಡಾವಣೆಯಲ್ಲಿ ಮೂಲಸೌಕರ್ಯ ವ್ಯವಸ್ಥೆಯನ್ನು ಕಲ್ಪಿಸಲು ಹೆಚ್ಚು ಸುಧಾರಿತ ವಿಧಾನವನ್ನು ಅನುಷ್ಠಾನಗೊಳಿಸಲು ಮುಂದಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಡಾ. ಶಿವರಾಮ ಕಾರಂತ ಬಡಾವಣೆಯ ರಾಮಗೊಂಡನಹಳ್ಳಿ ಗ್ರಾಮದಲ್ಲಿ 200 ಮೀ. ಅಗಲದ ರಸ್ತೆ ನಿರ್ಮಾಣ ಮಾಡಲಿದೆ.

ಕೆಂಪೇಗೌಡ ಬಡಾವಣೆ ನಿರ್ಮಾಣ ಕಾಮಗಾರಿ: ಬಿಡಿಎಯಿಂದ 15 ಎಕರೆ ಭೂಮಿ ವಶಕ್ಕೆ
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ (ಎನ್‌ಪಿಕೆಎಲ್) ಹಾದು ಹೋಗುವ ಮುಖ್ಯ ರಸ್ತೆ (ಎಂಎಆರ್) ನಿರ್ಮಾಣ ಕಾಮಗಾರಿಗೆ ಅಗತ್ಯವಿರುವ 15 ಎಕರೆ ಭೂಮಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಶಪಡಿಸಿಕೊಳ್ಳುವ ವೇಳೆ, ಭಾರೀ ಹೈಡ್ರಾಮಾ ನಡೆಯಿತು.

ವಿಲ್ಲಾ ಮಾಲಿಕನಿಗೆ ಕಾರು ನಿಲುಗಡೆ ಹಣ ಪಾವತಿಸಲಿರುವ ಬಿಡಿಎ
ಸೇವೆಯಲ್ಲಿನ ಕೊರತೆ ಹಾಗೂ ಅನ್ಯಾಯದ ವ್ಯಾಪಾರ ಪದ್ಧತಿಗೆ ಬಿಡಿಎಯನ್ನು ಹೊಣೆ ಮಾಡಿರುವ ಬೆಂಗಳೂರಿನ ಹೆಚ್ಚುವರಿ ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ವಿಲ್ಲಾ ಮಾಲಿಕರೊಬ್ಬರಿಗೆ 2 ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ಸೂಚನೆ ನೀಡಿದೆ.

ಬೆಂಗಳೂರು: ವಾಣಿಜ್ಯ ಸಂಕೀರ್ಣಗಳ ನವೀಕರಣ ಯೋಜನೆ, ಪುನರ್ ಆರಂಭಕ್ಕೆ ಬಿಡಿಎ ಮುಂದು!
ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಏಳು ವಾಣಿಜ್ಯ ಸಂಕೀರ್ಣಗಳನ್ನು ಮರು ನಿರ್ಮಾಣ ಮಾಡುವುದರೊಂದಿಗೆ ಬಾಡಿಗೆಯಲ್ಲಿ ಆರು ಪಟ್ಟು ಹೆಚ್ಚು ಆದಾಯ ಗಳಿಸುವ ಬಿಡಿಎ ಯೋಜನೆಗೆ ಹಿಂದಿನ ಸರ್ಕಾರ 2019 ಅಕ್ಟೋಬರ್ ನಲ್ಲಿ ತಡೆ ಹಿಡಿಯುವ ಮೂಲಕ ತೀವ್ರ ಹೊಡೆತ ನೀಡಿತ್ತು.

ಬೆಂಗಳೂರು: ಬಿಡಿಎ, ಬಿಬಿಎಂಪಿ, ಕೆಐಎಡಿಬಿಬಿ ಅಕ್ರಮಗಳ ತನಿಖೆಗೆ ಟಾಸ್ಕ್ ಫೋರ್ಸ್ ರಚನೆ?
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಂತಹ ವಿವಿಧ ಏಜೆನ್ಸಿಗಳಲ್ಲಿನ ಹಗರಣಗಳ ತನಿಖೆಗೆ ಕಾರ್ಯಪಡೆ ರಚಿಸುವುದನ್ನು ಪರಿಗಣಿಸುವುದಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ ವಿಧಾನ ಪರಿಷತ್ತಿಗೆ ತಿಳಿಸಿದರು.

