BDA

ಕೆಜಿ ಲೇಔಟ್ ಗೆ ನಿರ್ವಹಣಾ ಶುಲ್ಕವಿಲ್ಲ: ಬಿಡಿಎ
ನಾಡಪ್ರಭು ಕೆಂಪೇಗೌಡ ಲೇ ಔಟ್ ಮೇಲೆ ವಿಧಿಸಲಾಗಿದ್ದ ನಿರ್ವಹಣಾ ಶುಲ್ಕವನ್ನು ಹಿಂತೆಗೆದುಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಂಗಳವಾರ ನಿರ್ಧರಿಸಿದೆ ಎಂದು ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಮಂಗಳವಾರ ತಿಳಿಸಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಳಕೆಯಾಗದೇ ಉಳಿದಿದೆ 11,580 ಎಕರೆ ಭೂಮಿ: ಬಿಡಿಎ ಆಡಿಟ್ ನಿಂದ ಮಾಹಿತಿ!
ದೇಶದ ಸಿಲಿಕ್ಯಾನ್ ವ್ಯಾಲಿ ಎಂದೇ ಖ್ಯಾತಿ ಗಳಿಸಿರುವ ಬೆಂಗಳೂರಿನಲ್ಲಿ ಸುಮಾರು 11,580 ಎಕರೆ ಭೂಮಿ ಬಳಕೆಯಾಗದೇ ಖಾಲಿ ಉಳಿದಿದೆ ಎಂಬ ಮಹತ್ವದ ಮಾಹಿತಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಲಭ್ಯವಾಗಿದೆ.

ಬಿಡಿಎ ಶಾಕ್: ಹೊಸ ಲೇಔಟ್ ಗಳಿಗೆ ನಿರ್ವಹಣಾ ಶುಲ್ಕ ಜಾರಿ!
ಸೈಟ್ ಮತ್ತು ಲೇ ಔಟ್ ಮಾಲೀಕರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊಸ ಶಾಕ್ ನೀಡಿದ್ದು, ಇತ್ತೀಚೆಗೆ ಅಭಿವೃದ್ಧಿಪಡಿಸಿದ ಮತ್ತು ಮುಂಬರುವ ಲೇಔಟ್ ಗಳಿಗೆ ನೂತನ ನಿರ್ವಹಣಾ ಶುಲ್ಕ ವಿಧಿಸಿದೆ.

ಬಿಡಿಎಗೆ ಪ್ರತ್ಯೇಕ ಪೊಲೀಸ್ ಠಾಣೆ: ಸಿಎಂ ಯಡಿಯೂರಪ್ಪ ಭರವಸೆ
ಬಿಡಿಎ ಬಹುದಿನಗಳ ಕೋರಿಕೆಯಂತೆ ಬಿಡಿಎಗೆ ಪ್ರತ್ಯೇಕ ಪೊಲೀಸ್ ಠಾಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಗಳವಾರ ಭರವಸೆ ನೀಡಿದ್ದಾರೆ.

ಕೊನೆಗೂ ಒಲಿದ 'ಅರ್ಕಾವತಿ' ಭೂತಾಯಿ: ಭೂಮಿ ಸಮೀಕ್ಷೆ ಮಾಡಿದ ಬಿಡಿಎ, 700 ನಿವೇಶನ ಹಂಚಿಕೆಗೆ ಸಿದ್ದ
ಅರ್ಕಾವತಿ ಲೇ ಔಟ್ ನ ಭೂಮಿಯ ಸಮೀಕ್ಷೆ ಮಾಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇದೇ ಮೊದಲ ಬಾರಿಗೆ ನಿವೇಶನಗಳ ವಿವರಗಳನ್ನು ಬಹಿರಂಗಪಡಿಸಿದ್ದು ಹಂಚಿಕೆದಾರರಿಗೆ ನೀಡಲು ಸಿದ್ದವಾಗಿದೆ. ಕಳೆದ ಮಂಗಳವಾರ ಬಿಡಿಎಯ ವೆಬ್ ಸೈಟ್ ನಲ್ಲಿ ಅರ್ಕಾವತಿ ಲೇ ಔಟ್ ನ ಸೈಟ್ ಗಳ ವಿವರಗಳನ್ನು ಬಹಿರಂಗಪಡಿಸಲಾಗಿದೆ.

ಶಿವರಾಮ ಕಾರಂತ ಲೇಔಟ್ ನಿವಾಸಿಗಳಿಗೆ ಸುಪ್ರೀಂ ರಿಲೀಫ್: ಈಗ ಬಿಡಿಎ ಎದುರು ಭಾರಿ ಸರತಿ ಸಾಲು!
ಶಿವರಾಮ ಕಾರಂತ ಲೇಔಟ್ ನಲ್ಲಿ ನಿವೇಶನ ಖರೀದಿಸಿರುವವರು ಹಾಗೂ ಮನೆ ನಿರ್ಮಿಸಿರುವವರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದ ಬೆನ್ನಲ್ಲೇ ಸಾರ್ವಜನಿಕರು ಬಿಡಿಎ ಕಚೇರಿ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ!

ಬಿಡಿಎ ಹಗರಣ: 11 ಅಧಿಕಾರಿಗಳಿಗೆ ನೋಟಿಸ್ ಜಾರಿ
ಬನಶಂಕರಿ ಮೂರನೇ ಹಂತದ ಹೊಸಕೆರೆ ಹಳ್ಳಿ ಗ್ರಾಮದಲ್ಲಿ ಫಲಾನುಭವಿಗಳಲ್ಲದವರಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿ ಪ್ರಾಧಿಕಾರಕ್ಕೆ ಕೋಟ್ಯಾಂತರ ರುಪಾಯಿ ವಂಚಿಸಿದ ಆರೋಪದಡಿ 11 ಮಂದಿ ಅಧಿಕಾರಿ, ಸಿಬ್ಬಂದಿಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ.ಮಹದೇವ ನೋಟಿಸ್ ಜಾರಿಗೊಳಿಸಿದ್ದಾರೆ.

ಇನ್ನು ಮುಂದೆ ಬಿಡಿಎ ಬಡಾವಣೆಗಳಲ್ಲಿ ಉದ್ಯಾನಕ್ಕೆ ಬದಲಾಗಿ 'ಕಿರು ಅರಣ್ಯ': ಎಸ್.ಆರ್. ವಿಶ್ವನಾಥ್
ಹಸಿರೀಕರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೂಪಿಸಿರುವ ವಿಷನ್ 2022 ಗೆ ಪೂರಕವಾಗಿ ಇನ್ನು ಮುಂದೆ ಬಿಡಿಎ ತನ್ನ ಸ್ವಂತ ಬಡಾವಣೆಗಳು ಮತ್ತು ಬಿಡಿಎ ಅನುಮೋದಿತ ಬಡಾವಣೆಗಳಲ್ಲಿ ಕಿರು ಅರಣ್ಯ ಬೆಳೆಸುವುದನ್ನು ಕಡ್ಡಾಯಗೊಳಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಶಿವರಾಮ ಕಾರಂತ್ ಲೇಔಟ್ ನಿವಾಸಿಗಳ ಹಿತಾಸಕ್ತಿ ಕಾಪಾಡಿದ ಸುಪ್ರೀಂ ಕೋರ್ಟ್!
650 ಎಕರೆ ಪ್ರದೇಶದಲ್ಲಿ ಬಿಡಿಎ ಗುರುತಿಸಿದ ಡಾ. ಕೆ ಶಿವರಾಮ ಕಾರಂತ್ ಲೇಔಟ್ ನಲ್ಲಿ ನಿರ್ಮಿಸಲಾಗಿರುವ ಮನೆಗಳ ಮಾಲಿಕರಿಗೆ ಸುಪ್ರೀಂ ಕೋರ್ಟ್ ಆದೇಶದಿಂದ ರಿಲೀಫ್ ದೊರೆತಿದೆ.

