ಕೆಜಿ ಲೇಔಟ್ ಗೆ ನಿರ್ವಹಣಾ ಶುಲ್ಕವಿಲ್ಲ: ಬಿಡಿಎ
ನಾಡಪ್ರಭು ಕೆಂಪೇಗೌಡ ಲೇ ಔಟ್ ಮೇಲೆ ವಿಧಿಸಲಾಗಿದ್ದ ನಿರ್ವಹಣಾ ಶುಲ್ಕವನ್ನು ಹಿಂತೆಗೆದುಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಂಗಳವಾರ ನಿರ್ಧರಿಸಿದೆ ಎಂದು ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಮಂಗಳವಾರ ತಿಳಿಸಿದ್ದಾರೆ.

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಲೇ ಔಟ್ ಮೇಲೆ ವಿಧಿಸಲಾಗಿದ್ದ ನಿರ್ವಹಣಾ ಶುಲ್ಕವನ್ನು ಹಿಂತೆಗೆದುಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಂಗಳವಾರ ನಿರ್ಧರಿಸಿದೆ ಎಂದು ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಮಂಗಳವಾರ ತಿಳಿಸಿದ್ದಾರೆ.
ಹಾಲಿ ವಿತ್ತೀಯ ವರ್ಷದಲ್ಲಿ ಐದು ಹೊಸ ಲೇಔಟ್ ಗಳಿಗೆ ತಿಂಗಳಿಗೆ 100 ರಿಂದ 300 ರೂ.ಗಳ ಶುಲ್ಕವನ್ನು ವಿಧಿಸಲಾಗಿದೆ. ಇದಕ್ಕಾಗಿ ಈ ವರ್ಷದ ಆಸ್ತಿ ತೆರಿಗೆ ಮಸೂದೆಯೊಂದಿಗೆ ಹೊಸ ನಿರ್ವಹಣಾ ಶುಲ್ಕ ವಿಧಿಸಲಾಗಿತ್ತು. ಇದು ಅಲ್ಲಿನ ಅಪೂರ್ಣ ಮೂಲಸೌಕರ್ಯಗಳನ್ನು ಉಲ್ಲೇಖಿಸಿದ ಕೆಜಿ ಲೇ ಔಟ್ ಹಂಚಿಕೆದಾರರಲ್ಲಿ ಹೆಚ್ಚಿನ ಅಸಮಾಧಾನವನ್ನು ಉಂಟುಮಾಡಿತ್ತು.
ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊಸ ಶಾಕ್ ನೀಡಿದ್ದು, ಇತ್ತೀಚೆಗೆ ಅಭಿವೃದ್ಧಿಪಡಿಸಿದ ಮತ್ತು ಮುಂಬರುವ ಲೇಔಟ್ ಗಳಿಗೆ ನೂತನ ನಿರ್ವಹಣಾ ಶುಲ್ಕ ವಿಧಿಸಿತ್ತು. ಹಾಲಿ ವಿತ್ತೀಯ ವರ್ಷದಿಂದಲೇ ನೂತನ ನಿರ್ವಹಣಾ ವೆಚ್ಚ ಜಾರಿಗೆ ಬರುವಂತೆ ಇತ್ತೀಚೆಗೆ ಅಭಿವೃದ್ಧಿಪಡಿಸಿದ ಮತ್ತು ಮುಂಬರುವ ಲೇ ಔಟ್ ಗಳಿಗೆ ನಿರ್ವಹಣಾ ಶುಲ್ಕವಿಧಿಸಿದೆ. ಮೂಲಗಳ ಈ ಶುಲ್ಕವು 100 ರಿಂದ 300 ರೂ. ಗಳಷ್ಟಿದ್ದು, ಆಸ್ತಿ ಆಯಾಮಗಳನ್ನು ಅವಲಂಬಿಸಿ ಈ ದರ ಬದಲಾವಣೆಯಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು.
ಫ್ಲ್ಯಾಟ್‌ಗಳು ಮತ್ತು ಸೈಟ್ ಗಳ ಮಾಲೀಕರು ಈ ನಿರ್ವಹಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವಾರ್ಷಿಕವಾಗಿ ವಿಧಿಸಲಾಗುವ ಆಸ್ತಿ ತೆರಿಗೆ ಶುಲ್ಕಗಳೊಂದಿಗೆ ಬಿಲ್ಲಿಂಗ್ ಅನ್ನು ವಾರ್ಷಿಕವಾಗಿ ಮಾಡಲಾಗುವುದು ಎಂದು ಇತ್ತೀಚೆಗೆ ಹೊರಡಿಸಲಾದ ಮಸೂದೆಯಲ್ಲಿ ಜಾರಿಗೆ ತರಲಾಗಿದೆ. ಬೀದಿ ದೀಪಗಳು, ಕಸ ನಿರ್ವಹಣೆ ಮತ್ತು ಇತರೆ ನಿರ್ವಹಣಾ ಚಟುವಟಿಕೆಗಳಿಗೆ ವಿಧಿಸಲಾಗುವ ಸೆಸ್ ಅನ್ನು ಈ ಶುಲ್ಕದಲ್ಲಿ ಬಳಸಲಾಗುತ್ತದೆ. ಇದು ನಾಡಪ್ರಭು ಕೆಂಪೇಗೌಡ, ಅರ್ಕಾವತಿ, ಸರ್ ಎಂ ವಿಶ್ವೇಶ್ವರಯ್ಯ, ಬನಶಂಕರಿ VIನೇ ಹಂತ ಮತ್ತು ಅಂಜನಾಪುರದ ಬಿಡಿಎ ಲೇಔಟ್ ಗಳಿಗೆ ಅನ್ವಯವಾಗುತ್ತದೆ ಎಂದು ಹೇಳಲಾಗಿತ್ತು.
ಬೆಂಗಳೂರಿನ ಅನೇಕ ಲೇಔಟ್ಗಳಲ್ಲಿ ಬಿಬಿಎಂಪಿ ಮತ್ತು ಬಿಡಿಎ ರಸ್ತೆ, ಫುಟ್ಪಾತ್, ಪೈಪ್ಲೈನ್ಗಳು, ನೈಮರ್ಲ್ಯಸುಧಾರಣೆ ಮತ್ತು ಪಾರ್ಕ್ಗಳನ್ನೇ ನಿರ್ಮಿಸಿಲ್ಲ. ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯಗಳನ್ನೇ ನೀಡಿಲ್ಲ. ಅಷ್ಟರಲ್ಲಿ ತೆರಿಗೆಯನ್ನು ಈ ಪ್ರಮಾಣದಲ್ಲಿ ಏರಿಸಿರುವುದು, ನಿರ್ವಹಣಾ ಶುಲ್ಕವನ್ನು ಹೆಚ್ಚಿಸಿರುವುದು ಅನೇಕ ಸೈಟ್ ಮಾಲೀಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಸೈಟ್ ಮಾಲೀಕರು ಬಿಡಿಎ ರೇರಾ ಮತ್ತು ರಾಜ್ಯ ಸರ್ಕಾರಕ್ಕೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ಈಗ ಕೊರೋನಾ ಲಾಕ್ಡೌನ್ ತೆಗೆಯಲಾಗುತ್ತಿದ್ದು, ಜನ ಜೀವನ, ವ್ಯಾಪಾರ-ವಹಿವಾಟು ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ, ಅಷ್ಟರಲ್ಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಸ್ತಿ ತೆರಿಗೆಯನ್ನು ದ್ವಿಪಟ್ಟು ಹೆಚ್ಚು ಮಾಡಿರುವುದು ನಗರದ ಆಸ್ತಿ ಮಾಲೀಕರ ಪಾಲಿಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


