Basavanna

108 ಅಡಿ ಎತ್ತರದ ಬೃಹತ್ ಬಸವಣ್ಣನ ಪ್ರತಿಮೆ ಸ್ಥಾಪನೆಗೆ ಶೀಘ್ರದಲ್ಲೇ ನಿರ್ಧಾರ: ಸಿಎಂ ಬೊಮ್ಮಾಯಿ
ಘಟಪ್ರಭಾ ನದಿ ದಡದಲ್ಲಿ 108 ಅಡಿ ಎತ್ತರದ ಬೃಹತ್ ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸುವ ಕುರಿತು ಮಾಹಿತಿ ಪಡೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬುಧವಾರ ಹೇಳಿದರು.

ವಿಧಾನ ಸೌಧ ಮುಂದೆ ಕೆಂಪೇಗೌಡ, ಬಸವೇಶ್ವರ ಪುತ್ಥಳಿಗೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಬೊಮ್ಮಾಯಿ
ವಿಧಾನ ಸೌಧ ಎದುರು ಕೆಂಪೇಗೌಡ, ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಇಂದು ಶುಕ್ರವಾರ ಭೂಮಿ ಪೂಜೆ ನೆರವೇರಿಸಲಾಯಿತು. ಸಿಎಂ ಬೊಮ್ಮಾಯಿ ಗುದ್ದಲಿ ಪೂಜೆ ನೆರವೇರಿಸಿದ್ದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿರ್ಮಲಾನಂದ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ನಂಜಾವಧೂತ ಸ್ವಾಮಿಗಳು ಭಾಗವಹಿಸಿದ್ದರು.

ನಾಟಕ, ಸಾಹಿತ್ಯದ ಮೂಲಕ ಬಸವಣ್ಣ ಜೀವಂತವಾಗಿದ್ದಾರೆ: ಶೋಭಾ ಕರಂದ್ಲಾಜೆ
ಸಮಾಜ ಸುಧಾರಕ ಬಸವಣ್ಣನವರು ಶ್ರೇಣೀಕೃತ ಜಾತಿ ವ್ಯವಸ್ಥೆಯ ಎಲ್ಲ ವರ್ಗದವರಿಗೂ ಸಮಾನ ಗೌರವ ನೀಡಿದ್ದಾರೆ. ಅವರು ಕೇವಲ ವಿವಿಧ ಜಾತಿಗಳನ್ನು ಒಗ್ಗೂಡಿಸದೆ, ಪ್ರತ್ಯೇಕ ವೈದಿಕ ಪದ್ಧತಿಗಳನ್ನು ತಿರಸ್ಕರಿಸುವ ಮೂಲಕ ಮಹಿಳೆಯರನ್ನು ಸಮಾನವಾಗಿ ಪರಿಗಣಿಸಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಭಾನುವಾರ ಹೇಳಿದರು.

ವಿಧಾನಸೌಧದಲ್ಲಿ ಬಸವಣ್ಣ, ಕೆಂಪೇಗೌಡರ ಪ್ರತಿಮೆ ಸ್ಥಾಪನೆ: ಎರಡು ಪ್ರಬಲ ಸಮುದಾಯಗಳ ಓಲೈಕೆಗಾಗಿ ಬಿಜೆಪಿ ಸ್ಟ್ಯಾಚ್ಯು ಪಾಲಿಟಿಕ್ಸ್?
ವಿಧಾನಸೌಧದ ಆವರಣದಲ್ಲಿ ಈಗ ಡಾ.ಬಿ.ಆರ್.ಅಂಬೇಡ್ಕರ್, ಕೆಂಗಲ್ ಹನುಮಂತಯ್ಯ, ಮಹಾತ್ಮ ಗಾಂಧಿ ಮತ್ತಿತರರ ಪ್ರತಿಮೆಗಳಿವೆ. ವಾಸ್ತವವಾಗಿ, 2021 ರಲ್ಲಿ, ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ವಿಧಾನಸೌಧದಲ್ಲಿ ಬಸವಣ್ಣ ಪ್ರತಿಮೆ ಸ್ಥಾಪನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿತು.

ಇಂದು ಬಸವವೇಶ್ವರ ಜಯಂತಿ, ಅಕ್ಷಯ ತೃತೀಯ: ಬಸವಣ್ಣನವರ ತತ್ವಗಳು ಅಕ್ಷಯವಾಗಲಿ
ಮೇ.14, ಹಿಂದೂ ಪಂಚಾಗದ ಪ್ರಕಾರ ಎರಡನೇ ಮಾಸವಾಗಿರುವ ವೈಶಾಖ ಮಾಸದ ಶುಕ್ಲ ಪಕ್ಷದ ತದಿಗೆಯ ದಿನ. ಅಕ್ಷಯ ತೃತೀಯದಂತಹ ಶ್ರೇಷ್ಠ ದಿನ.

ಕೊರೋನಾ ಲಸಿಕೆ ಖರೀದಿಗೆ ಜಾಗತಿಕ ಟೆಂಡರ್: ಮುಖ್ಯಮಂತ್ರಿ ಯಡಿಯೂರಪ್ಪ
ರಾಜ್ಯದಲ್ಲಿರುವ ಕೊರೋನಾ ಲಸಿಕೆ ಕೊರತೆ ಸದ್ಯದಲ್ಲಿಯೇ ಬಗೆಹರಿಯುವ ವಿಶ್ವಾಸವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ.

ಇಂದು ಬಸವಣ್ಣ ಜಯಂತಿ: ಸಮಾಜ ಸುಧಾರಕನ ಪ್ರತಿಮೆಯ ಬಾಯಿಗೆ ಮಾಸ್ಕ್ ತೊಡಿಸಿ ಜಾಗೃತಿ ಮೂಡಿಸಲು ಹೊಸಮಠ ಸ್ವಾಮೀಜಿ ಪ್ರಯತ್ನ
12ನೇ ಶತಮಾನದ ಕ್ರಾಂತಿಕಾರಿ ಸಮಾಜ ಸುಧಾರಕ ಜಗಜ್ಯೋತಿ ಬಸವೇಶ್ವರರ ಜಯಂತಿ ಇಂದು. ೧೨ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಆಂದೋಲನ ಚರಿತ್ರಾರ್ಹವಾಗಿ ಇಂದಿಗೂ ಪ್ರಸ್ತುತ.ಬಸವಣ್ಣನವರ ವಚನಗಳು ಇಂದಿಗೂ ಜನರ ನಾಲಗೆಯಲ್ಲಿ ನಲಿಯುತ್ತಿರುತ್ತದೆ.

ನೂತನ ಸಂಸತ್ ಭವನ ಶಂಕುಸ್ಥಾಪನೆ: ಬಸವಣ್ಣನವರ ಅನುಭವ ಮಂಟಪ ಉಲ್ಲೇಖಿಸಿ ಕನ್ನಡದಲ್ಲಿ ಮಾತನಾಡಿದ ಪ್ರಧಾನಿ ಮೋದಿ
ನೂತನ ಸಂಸತ್ತು ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ನಂತರ ವೇಳೆ 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಬಗ್ಗೆ ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಮಾತನಾಡಿದ್ದು ಎಲ್ಲರ ಗಮನ ಸೆಳೆದಿದೆ.

ಶರಣರ ಆಶಯವಾಗಿದ್ದ ಸಮಾನತೆ ಇನ್ನೂ ಸಾಕಾರಗೊಂಡಿಲ್ಲ; ಗೋವಿಂದ ಕಾರಜೋಳ
ವಿಶ್ವ ಗುರು ಬಸವಣ್ಣ ಹಾಗೂ ಅವರ ಸಮಕಾಲೀನ ಶರಣರು 900 ವರ್ಷಗಳ ಹಿಂದೆ ಸಾಮಾಜಿಕ ಸಮಾನತೆಗಾಗಿ ಕ್ರಾಂತಿಯನ್ನೇ ಮಾಡಿದ್ದರೂ ಅಸಮಾನತೆ ಇನ್ನೂ ಅಳಿದಿಲ್ಲ. ಸಮಾನತೆ ಬರಲಿಲ್ಲ. ಶರಣರ ಆಶಯವಾಗಿದ್ದ ಸಾಮಾಜಿಕ ಸಮಾನತೆ ಕುರಿತು ಇಂದು ಚಿಂತಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಕರೆ ನೀಡಿದ್ದಾರೆ.

