ರಾಜ್ಯ

ಶರಣರ ಆಶಯವಾಗಿದ್ದ ಸಮಾನತೆ ಇನ್ನೂ ಸಾಕಾರಗೊಂಡಿಲ್ಲ; ಗೋವಿಂದ ಕಾರಜೋಳ

ವಿಶ್ವ ಗುರು ಬಸವಣ್ಣ ಹಾಗೂ ಅವರ ಸಮಕಾಲೀನ ಶರಣರು 900 ವರ್ಷಗಳ ಹಿಂದೆ ಸಾಮಾಜಿಕ ಸಮಾನತೆಗಾಗಿ ಕ್ರಾಂತಿಯನ್ನೇ ಮಾಡಿದ್ದರೂ‌ ಅಸಮಾನತೆ ಇನ್ನೂ ಅಳಿದಿಲ್ಲ. ಸಮಾನತೆ ಬರಲಿಲ್ಲ. ಶರಣರ ಆಶಯವಾಗಿದ್ದ ಸಾಮಾಜಿಕ ಸಮಾನತೆ ಕುರಿತು ಇಂದು ಚಿಂತಿಸಬೇಕು‌ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಕರೆ ನೀಡಿದ್ದಾರೆ.

ಶರಣರ ಆಶಯವಾಗಿದ್ದ ಸಮಾನತೆ ಇನ್ನೂ ಸಾಕಾರಗೊಂಡಿಲ್ಲ; ಗೋವಿಂದ ಕಾರಜೋಳ
ಗೋವಿಂದ ಕಾರಜೋಳ
Published On :

ಬೆಂಗಳೂರು: ವಿಶ್ವ ಗುರು ಬಸವಣ್ಣ ಹಾಗೂ ಅವರ ಸಮಕಾಲೀನ ಶರಣರು 900 ವರ್ಷಗಳ ಹಿಂದೆ ಸಾಮಾಜಿಕ ಸಮಾನತೆಗಾಗಿ ಕ್ರಾಂತಿಯನ್ನೇ ಮಾಡಿದ್ದರೂ‌ ಅಸಮಾನತೆ ಇನ್ನೂ ಅಳಿದಿಲ್ಲ. ಸಮಾನತೆ ಬರಲಿಲ್ಲ. ಶರಣರ ಆಶಯವಾಗಿದ್ದ ಸಾಮಾಜಿಕ ಸಮಾನತೆ ಕುರಿತು ಇಂದು ಚಿಂತಿಸಬೇಕು‌ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಕರೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಏರ್ಪಡಿಸಿರುವ ಶಿವಯೋಗ ಸಂಭ್ರಮ ಅಸಂಖ್ಯ ಪ್ರಮಥರ ಗಣಮೇಳ ಸರ್ವಶರಣರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಶರಣರು ಜಾತ್ಯತೀತ ಸುಂದರ ಸಮಾಜ ನಿರ್ಮಾಣಕ್ಕೆ ಹೋರಾಟ ನಡೆಸಿದ್ದಾರೆ. ಅನೇಕ ಮಾನವ ಹಕ್ಕುಗಳಿಗಾಗಿ ಪ್ರತಿಪಾದಿಸಿದ್ದಾರೆ. ಶೋಷಿತರು, ಕಾಯಕ ಯೋಗಿಗಳ ಏಳಿಗೆಗಾಗಿ ಶ್ರಮಿಸಿದ್ದಾರೆ ಎಂದರು.

ಜಾತಿ ಮತ್ತು ಧರ್ಮ ದ ಹೆಸರಿನಲ್ಲಿ ಶೋಷಣೆಯ ವಿರುದ್ಧ ಬಂಡಾಯ ವೆದ್ದು, ಕ್ರಾಂತಿ ಮಾಡಿದ್ದಾರೆ. ಜಾತ್ಯತೀತ ಮಾನವ ಧರ್ಮ ಉದಯಕ್ಕೆ ಶ್ರಮಿಸಿದ್ದಾರೆ. ಅದೇ ಶ್ರೇಷ್ಠ ವಾದ ಧರ್ಮ ಬಸವ ಧರ್ಮ. ಅವರು ಪ್ರತಿ ಪಾದಿಸಿದಂತಹ ಅನೇಕ ಮಾನವ ಹಕ್ಕುಗಳು ಕಾಯ್ದೆಯ ರೂಪದಲ್ಲಿ ಅನುಷ್ಠಾನ ವಾಗುತ್ತಿವೆ ಎಂದು ಹೇಳಿದರು.

ಮೊಟ್ಟ ಮೊದಲಿಗೆ ಸಂಸತ್ ಸ್ವರೂಪದ ಅನುಭವ ಮಂಟಪ ಆಯೋಜಿಸಿ, ಮಾನವ ಹಕ್ಕು, ಸಮಾನತೆಗೆ , ಸಾಮಾಜಿಕ ಪಿಡುಗಳ ಕುರಿತು ಚರ್ಚಿಸಿ, ನಿರ್ಣಯ ಕೈಗೊಂಡಿದ್ದು , ಅದೇ ಮಾದರಿಯಲ್ಲಿ ಸಂಸತ್ ನಲ್ಲಿ‌ ಚರ್ಚೆಗಳಾಗಿ ನಿರ್ಣಯಗಳಾಗುತ್ತಿವೆ‌. ಶರಣರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು‌ ಶರಣರ ಆಶಯದಂತೆ ಸುಂದರ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು‌ ಅವರು ಕರೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.