ಇಂದು ಬಸವಣ್ಣ ಜಯಂತಿ: ಸಮಾಜ ಸುಧಾರಕನ ಪ್ರತಿಮೆಯ ಬಾಯಿಗೆ ಮಾಸ್ಕ್ ತೊಡಿಸಿ ಜಾಗೃತಿ ಮೂಡಿಸಲು ಹೊಸಮಠ ಸ್ವಾಮೀಜಿ ಪ್ರಯತ್ನ
12ನೇ ಶತಮಾನದ ಕ್ರಾಂತಿಕಾರಿ ಸಮಾಜ ಸುಧಾರಕ ಜಗಜ್ಯೋತಿ ಬಸವೇಶ್ವರರ ಜಯಂತಿ ಇಂದು. ೧೨ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಆಂದೋಲನ ಚರಿತ್ರಾರ್ಹವಾಗಿ ಇಂದಿಗೂ ಪ್ರಸ್ತುತ.ಬಸವಣ್ಣನವರ ವಚನಗಳು ಇಂದಿಗೂ ಜನರ ನಾಲಗೆಯಲ್ಲಿ ನಲಿಯುತ್ತಿರುತ್ತದೆ.

ಮೈಸೂರು: 12ನೇ ಶತಮಾನದ ಕ್ರಾಂತಿಕಾರಿ ಸಮಾಜ ಸುಧಾರಕ ಜಗಜ್ಯೋತಿ ಬಸವೇಶ್ವರರ ಜಯಂತಿ ಇಂದು. ೧೨ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಆಂದೋಲನ ಚರಿತ್ರಾರ್ಹವಾಗಿ ಇಂದಿಗೂ ಪ್ರಸ್ತುತ.ಬಸವಣ್ಣನವರ ವಚನಗಳು ಇಂದಿಗೂ ಜನರ ನಾಲಗೆಯಲ್ಲಿ ನಲಿಯುತ್ತಿರುತ್ತದೆ.
ಸಮಾಜದಲ್ಲಿನ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ, ಸ್ತ್ರೀ ಶೋಷಣೆ, ಮೌಢ್ಯ, ವರ್ಣಬೇಧ, ವರ್ಗಬೇಧಗಳ ತಾರತಮ್ಯದಿಂದ ತತ್ತರಿಸಿ ಹೋಗಿದ್ದ ಮಾನವ ಸಮುದಾಯಕ್ಕೆ ದಯೆ, ಪ್ರೀತಿ, ಅನುಕಂಪದ ಮಾನವೀಯ ಸ್ಪರ್ಷವನ್ನು ನೀಡಿದವರು ಬಸವಣ್ಣನವರು.
ಈ ಬಾರಿ ಬಸವಣ್ಣ ಜಯಂತಿ ದಿನ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸರ್ಕಾರಿ ಕಾರ್ಯಕ್ರಮಗಳಿಲ್ಲ. ಜನರು ಗುಂಪು ಸೇರಿ ಆಚರಣೆಗಳಿಲ್ಲ. ಎಲ್ಲ ಕಡೆಯೂ ಭಯ, ಆತಂಕದ ವಾತಾವರಣವಿದೆ. ಜನರು ಬಾಯಿ, ಮೂಗಿಗೆ ಮಾಸ್ಕ್ ಹಾಕದೆ ಹೊರಗೆ ಹೋಗುವಂತೆಯೇ ಇಲ್ಲ.
ಈ ಪರಿಸ್ಥಿತಿಯಲ್ಲಿ ಬಸವಣ್ಣನವರ ಮೂರ್ತಿಗೆ ಹೂವು-ಹಾರ ಹಾಕಿ ಗೌರವ ಸಲ್ಲಿಸಿದ ನಂತರ ಬಾಯಿಗೆ ಮಾಸ್ಕ್ ಹಾಕಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮೈಸೂರಿನಲ್ಲಿಂದು ಹೊಸಮಠದ ಶ್ರೀಗಳಾದ ಚಿದಾನಂದ ಸ್ವಾಮೀಜಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


