ban

ಚೀನಾ ಪರ ಟ್ವೀಟ್: 1.7 ಲಕ್ಷ ಟ್ವಿಟರ್ ಖಾತೆಗಳನ್ನೇ ರದ್ದು ಮಾಡಿದ ಟ್ವಿಟರ್
ಚೀನಾ ಸರ್ಕಾರದ ಪರವಾಗಿ ಟ್ವೀಟ್ ಮಾಡುತ್ತಿದ್ದ ಬರೋಬ್ಬರಿ 1.7 ಲಕ್ಷ ಟ್ವಿಟರ್ ಖಾತೆಗಳನ್ನು ಟ್ವಿಟರ್ ಸಂಸ್ಥೆ ರದ್ದುಪಡಿಸಿದೆ.

ಭಾರತೀಯ ವಸ್ತು ನಮ್ಮ ಹೆಮ್ಮೆ: ಚೀನಾ ವಸ್ತು ಬಹಿಷ್ಕರಿಸಲು ಶುರುವಾಯ್ತು ಆಂದೋಲನ, ಆಮದು ನಿಲ್ಲಿಸಲು 3000 ವಸ್ತುಗಳ ಪಟ್ಟಿ ಸಿದ್ಧ!
ಚೀನಾದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದ ಸಿದ್ಧ ವಸ್ತುಗಳನ್ನು ಬಹಿಷ್ಕರಿಸಲು ಆಂದೋಲನವೊಂದು ಇದೀಗ ಆರಂಭಗೊಂಡಿದೆ. ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳನ್ನು ಬಹಿಷ್ಕರಿಸಲು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ನಿರ್ಧರಿಸಿದ್ದು, ಈಗಾಗಲೇ ಆಮದು ನಿಲ್ಲಿಸಲು 3000ವಸ್ತುಗಳ ಪಟ್ಟಿಯೊಂದನ್ನು ಸಿದ್ಧಪಡಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಮಹಾರಾಷ್ಟ್ರ, ಗುಜರಾತ್, ತಮಿಳುನಾಡಿನಿಂದ ಬರುವವರಿಗೆ ನಿಷೇಧ: ಅನಿವಾಸಿ ಕನ್ನಡಿಗರ ತೀವ್ರ ವಿರೋಧ
ಮೇ 31 ರವರೆಗೆ ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿನಿಂದ ಬರುವ ಅನಿವಾಸಿ ಕನ್ನಡಿಗರಿಗೆ ರಾಜ್ಯದಲ್ಲಿ ನಿಷೇಧ ಹೇರಲಾಗಿದೆ. ಹೊರ ರಾಜ್ಯದಿಂದ ಬಂದವರಿಂದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ರಾಜ್ಯ ರಾಜ್ಯಗಳ ಒಪ್ಪಂದದ ಮೇರೆಗೆ ಅನಿವಾಸಿ ಕನ್ನಡಿಗರು ರಾಜ್ಯಕ್ಕೆ ಬರುವುದನ್ನು ನಿಷೇಧಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಕೋವಿಡ್-19: ಧಾರ್ಮಿಕ ಸಭೆ ನಿಷೇಧ ಸರಿಯಲ್ಲ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಪಾಕ್ ಮೌಲ್ವಿಗಳು!
ಕೊರೋನಾವೈರಸ್ ಉಲ್ಬಣದಿಂದಾಗಿ ಮಸೀದಿಗಳಲ್ಲಿ ಧಾರ್ಮಿಕ ಸಭೆ ನಿಷೇಧದ ವಿರುದ್ಧ ಸರ್ಕಾರಕ್ಕೆ ಪಾಕ್ ಧರ್ಮಗುರುಗಳು ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳು ಧಾರ್ಮಿಕ ನಿಯಮಗಳನ್ನು ಪಾಲಿಸಬೇಕು, ಮಸೀದಿಗಳಲ್ಲಿ ಅಲ್ಲಾಹುವಿನಿಂದ ಕ್ಷಮೆ ಕೋರಲು ಹೆಚ್ಚಿನ ಸಂಖ್ಯೆಯ ಆರಾಧಕರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಕತ್ತರಿಸಿದ ಹಣ್ಣುಗಳ ಮಾರಾಟಕ್ಕೆ ಅವಕಾಶವಿಲ್ಲ
ನಗರದಲ್ಲಿ ಜನರ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ಎಲ್ಲೆಂದರಲ್ಲಿ ಕತ್ತರಿಸಿಟ್ಟ ಹಣ್ಣು-ತರಕಾರಿ ಮಾರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ನಿಜಾಮುದ್ದೀನ್ ಧಾರ್ಮಿಕ ಸಭೆ ಏರ್ಪಡಿಸಿದ ತಬ್ಲಿಘಿ ಜಮಾತ್ ಸಂಘಟನೆಯನ್ನು ನಿಷೇಧಿಸಿ:ಶಿಯಾ ನಾಯಕರ ಒತ್ತಾಯ
ದೇಶದಲ್ಲಿ ತಬ್ಲಿಘಿ ಜಮಾತ್ ಸಂಘಟನೆಯನ್ನು ನಿಷೇಧ ಮಾಡಬೇಕೆಂಬ ಕೂಗು ಹೆಚ್ಚಾಗುತ್ತಿದ್ದು ಶಿಯಾ ಪಾದ್ರಿಗಳು ಕೂಡ ಅದನ್ನು ಒತ್ತಾಯಿಸುತ್ತಿದ್ದಾರೆ.

ಕೋವಿಡ್-19: ಎಲ್ಲಾ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ನಿಷೇಧ ಏಪ್ರಿಲ್ 14
ಕರೋನವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್(ಸಂಪೂರ್ಣ ಸ್ತಬ್ಧ) ಘೋಷಿಸಿರುವ ನಡುವೆಯೇ ಸರ್ಕಾರ ಗುರುವಾರ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ನಿಷೇಧ ಏಪ್ರಿಲ್ 14 ರವರೆಗೆ ವಿಸ್ತರಿಸಿದೆ.

ಕೊರೋನಾ ಸಾಂಕ್ರಾಮಿಕ ರೋಗ ಎಂದ ಡಬ್ಲ್ಯೂಹೆಚ್ಒ: ಎಲ್ಲಾ ರೀತಿಯ ವೀಸಾ ರದ್ದುಗೊಳಿಸಿದ ಭಾರತ
ಕೊರೋನಾ ವೈರಸ್ ವಿಶ್ವದಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ವೈರಸನ್ನು ಸಾಂಕ್ರಾಮಿಕ ರೋಗವೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದ ಬೆನ್ನಲ್ಲೇ, ಇದೀಗ ಭಾರತ ಸರ್ಕಾರ ಎಲ್ಲಾ ರೀತಿಯ ವೀಸಾಗಳನ್ನು ಅಮಾನತು ಮಾಡಿದೆ.

ಬೆಂಗಳೂರಿನ ರಸ್ತೆ ಬದಿ ಆಹಾರ ಮಾರಾಟಕ್ಕೆ ನಿರ್ಬಂಧ ಹೇರಿದ ರಾಜ್ಯ ಸರ್ಕಾರ
ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ನಗರದಲ್ಲಿ ಕಾಲರಾ ಹಾಗೂ ಇತರೆ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ, ರಸ್ತೆ ಬದಿ ಆಹಾರ ಪದಾರ್ಥ ಮಾರಾಟಕ್ಕೆ ನಿರ್ಬಂಧ ಹೇರಿದೆ.

