ಚೀನಾ ಪರ ಟ್ವೀಟ್: 1.7 ಲಕ್ಷ ಟ್ವಿಟರ್ ಖಾತೆಗಳನ್ನೇ ರದ್ದು ಮಾಡಿದ ಟ್ವಿಟರ್
ಚೀನಾ ಸರ್ಕಾರದ ಪರವಾಗಿ ಟ್ವೀಟ್ ಮಾಡುತ್ತಿದ್ದ ಬರೋಬ್ಬರಿ 1.7 ಲಕ್ಷ ಟ್ವಿಟರ್ ಖಾತೆಗಳನ್ನು ಟ್ವಿಟರ್ ಸಂಸ್ಥೆ ರದ್ದುಪಡಿಸಿದೆ.

ನವದೆಹಲಿ: ಚೀನಾ ಸರ್ಕಾರದ ಪರವಾಗಿ ಟ್ವೀಟ್ ಮಾಡುತ್ತಿದ್ದ ಬರೋಬ್ಬರಿ 1.7 ಲಕ್ಷ ಟ್ವಿಟರ್ ಖಾತೆಗಳನ್ನು ಟ್ವಿಟರ್ ಸಂಸ್ಥೆ ರದ್ದುಪಡಿಸಿದೆ.
ಚೀನಾದ ಕಮ್ಯುನಿಸ್ಟ್ ಪಕ್ಷದ ಪರವಾಗಿ ಭೌಗೋಳಿಕ ರಾಜಕೀಯ ಕುರಿತು ಟ್ವೀಟ್ ಮಾಡುತ್ತಿದ್ದ ಖಾತೆಗಳನ್ನು ರದ್ದುಪಡಿಸಲಾಗಿದೆ. ಈ ಖಾತೆಗಳು ಪ್ಲಾಟ್'ಫಾರ್ಮ್'ನ ನೀತಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಖಾತೆಗಳನ್ನು ರದ್ದುಪಡಿಸಲಾಗಿದೆ ಎಂದು ಟ್ವಿಟರ್ ತಿಳಿಸಿದೆ.
ರದ್ದುಪಡಿಸಲಾಗಿರುವ ಈ ಎಲ್ಲಾ 1.7 ಲಕ್ಷ ಖಾತೆಗಳಲ್ಲಿ ಚೀನಿ ಭಾಷೆಗಳಲ್ಲಿ ಟ್ವೀಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಚೀನಾದಲ್ಲಿ ಟ್ವಿಟರ್ ನ್ನು ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಆದರೂ ಅಲ್ಲಿನ ಹಲವರು ವಿಪಿಎನ್ ಬಳಸಿ ಟ್ವಿಟರ್ ಬಳಕೆ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


