Bagalakote

ಇಳಕಲ್ ನಲ್ಲಿ ಕೋಮು ಸಂಘರ್ಷ: 8 ಮಂದಿ ಬಂಧನ
ಖಾಸಗಿ ಟ್ಯೂಷನ್ ಒಂದರಲ್ಲಿ ಸೋಮವಾರ ಸಂಜೆ ತಲೆಗೆ ಟೋಪಿ ಧರಿಸಿದ್ದ ಸ್ನೇಹಿತನನ್ನು 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಬಾಲಕನೊಬ್ಬ ಲೇವಡಿ ಮಾಡಿದ ನಂತರ ಇಳಕಲ್ ನಲ್ಲಿ ಎರಡು ಧಾರ್ಮಿಕ ಗುಂಪುಗಳ ಸದಸ್ಯರ ನಡುವೆ ಸಂಘರ್ಷವೇರ್ಪಟ್ಟಿತ್ತು.

ಬಾಗಲಕೋಟೆ: ಒಂದೇ ಕುಟುಂಬದ ಮೂವರು ನೀರು ಪಾಲು
ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಬಾದಾಮಿ ತಾಲೂಕಿನ ಶಿವಯೋಗಿ ಮಂದಿರದ ಬಳಿ ನಡೆದಿದೆ. ಮೃತರನ್ನು ವಿಶ್ವನಾಥ್ ಮಾವಿನ ಮರದ (40), ಪತ್ನಿ ಶ್ರಿದೇವಿ ಮಾವಿನಮರದ (32) ಹಾಗೂ ಮಗಳು ನಂದಿನಿ (12) ಎಂದು ಗುರುತಿಸಲಾಗಿದೆ.

ಬಾಗಲಕೋಟೆ: ಬಿಜೆಪಿ ಶಾಸಕ ಸಿದ್ದು ಸವದಿ ರಾಜಿನಾಮೆಗೆ ಆಗ್ರಹಿಸಿ ಕೆಪಿಸಿಸಿ ಪ್ರತಿಭಟನೆ
ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳೆ ಬಿಜೆಪಿ ಶಾಸಕ ಸಿದ್ದು ಸವದಿಯಿಂದ ತಳ್ಳಾಟಕ್ಕೆ ಒಳಗಾಗಿದ್ದ ಮಹಿಳಾ ಸದಸ್ಯೆ ಚಾಂದಿನಿ ನಾಯ್ಕ್ ಆವರಿಗೆ ಗರ್ಭಪಾತವಾಗಿದ್ದು, ಇದೀಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಪ್ರತಿಭಟನೆ ನಡೆಸಲು ಮುಂದಾಗಿದೆ.

ಬಾಗಲಕೋಟೆ: ನಿರೀಕ್ಷೆಯಂತೆ ಬಿಟಿಡಿಎ ಅಧ್ಯಕ್ಷ ಸ್ಥಾನ ಶಾಸಕ ಚರಂತಿಮಠ ಪಾಲು
ಆಲಮಟ್ಟಿ ಜಲಾಶಯದ ಹಿನ್ನೀರು ಬಾಧಿತ ಬಾಗಲಕೋಟೆ ನಗರದ ಮುಳುಗಡೆ ಸಂತ್ರಸ್ತರ ಬದುಕಿನ ಆಶಾಕಿರಣವಾಗಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ನಿರೀಕ್ಷೆಯಂತೆ ಶಾಸಕ ವೀರಣ್ಣ ಚರಂತಿಮಠ ನೇಮಕಗೊಂಡಿದ್ದಾರೆ.

ಬಾಗಲಕೋಟೆ: ಕಾಟನ್ ಸೀರೆ ಖ್ಯಾತಿಯ ನಾಡಿಗೂ ನಂಟು ಬೆಳೆಸಿದ ಕೊರೋನಾ
ದೇಶದಾದ್ಯಂತ ಕಾಟನ್ ಸೀರೆ ಉತ್ಪಾದನೆಗೆ ಹೆಸರಾದ ಜಿಲ್ಲೆಯ ರಬಕವಿ-ಬನಹಟ್ಟಿ ನಗರಕ್ಕೂ ಮಹಾಮಾರಿ ಕೊರೋನಾ ವ್ಯಾಪಿಸಿದ್ದು, ಬನಹಟ್ಟಿಯಲ್ಲಿ ಇಪ್ಪತ್ತರ ಹರೆಯದ ಯುವಕನಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ಬಾಗಲಕೋಟೆ: ಕೋವಿಡ್ ಸೋಂಕಿತ ವ್ಯಕ್ತಿಯ ತಾಯಿ ಹೃದಯಾಘಾತದಿಂದ ಸಾವು
ಕೋವಿಡ್ ಸೋಂಕಿತ ವ್ಯಕ್ತಿಯ ತಾಯಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಮಖಂಡಿಯಲ್ಲಿ ಶನಿವಾರ ರಾತ್ರಿ ನಡೆದಿದೆ

ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ
ಮಹಾಮಾರಿ ಕೊರೋನಾ ಜಿಲ್ಲೆಯಲ್ಲೂ ತನ್ನ ವಿರಾಟರೂಪ ದರ್ಶನವನ್ನು ಮುಂದುವರಿಸಿದೆ. ಈಗಾಗಲೇ ತನ್ನ ಅಟ್ಟಹಾಸಕ್ಕೆ ವೃದ್ದರೊಬ್ಬರನ್ನು ಬಲಿ ತೆಗೆದುಕೊಂಡಿರುವ ಕೊರೋನಾ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಾರಂಭಿಸಿದೆ

ಬಾಗಲಕೋಟೆ: ಹೆಚ್ಚುತ್ತಲೇ ಇದೆ ಬೇರೆಡೆಯಿಂದ ತವರಿಗೆ ಬರುವವರ ಸಂಖ್ಯೆ
ಮಹಾರಾಷ್ಟ, ಗೋವಾ, ಕೇರಳ ಮತ್ತು ಬೆಂಗಳೂರಿನಿಂದ ಬಹುದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕ ವರ್ಗ ಬಾಗಲಕೋಟೆ ಜಿಲ್ಲೆಯ ಕಡೆಗೆ ಆಗಮಿಸುತ್ತಿದೆ. ಗೋವಾ, ಕೇರಳ, ಮಹಾರಾಷ್ಟ ಮತ್ತು ಬೆಂಗಳೂರಿನಿಂದ ಆಗಮಿಸುತ್ತಿರುವ ಕಾರ್ಮಿಕರು ಕೇವಲ ಬಾಗಲಕೋಟೆ ಜಿಲ್ಲೆಗಷ್ಟೆ ಸೇರಿದವರಾಗಿರದೇ ಇತರ ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಗೆ ಹೊರಟವರು ಇದ್ದಾರೆ.

ಬಾಗಲಕೋಟೆ: ಭೀಕರ ಅಪಘಾತ, ಲಾರಿಯಡಿ ಸಿಕ್ಕು ಮೂವರು ದಾರುಣ ಸಾವು
ರಸ್ತೆ ಬದಿಯ ಪಾನ್ ಶಾಪ್ ಮುಂದೆ ನಿಂತವರ ಮೇಲೆ ಲಾರಿಯೊಂದು ನಿಗ್ಗಿದ ಪರಿಣಾಮ ಲಾರಿಗೆ ಸಿಕ್ಕು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರಿನ ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

