ಇಳಕಲ್ ನಲ್ಲಿ ಕೋಮು ಸಂಘರ್ಷ: 8 ಮಂದಿ ಬಂಧನ
ಖಾಸಗಿ ಟ್ಯೂಷನ್ ಒಂದರಲ್ಲಿ ಸೋಮವಾರ ಸಂಜೆ ತಲೆಗೆ ಟೋಪಿ ಧರಿಸಿದ್ದ ಸ್ನೇಹಿತನನ್ನು 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಬಾಲಕನೊಬ್ಬ ಲೇವಡಿ ಮಾಡಿದ ನಂತರ ಇಳಕಲ್ ನಲ್ಲಿ ಎರಡು ಧಾರ್ಮಿಕ ಗುಂಪುಗಳ ಸದಸ್ಯರ ನಡುವೆ ಸಂಘರ್ಷವೇರ್ಪಟ್ಟಿತ್ತು.

ಬಾಗಲಕೋಟೆ: ಖಾಸಗಿ ಟ್ಯೂಷನ್ ಒಂದರಲ್ಲಿ ಸೋಮವಾರ ಸಂಜೆ ತಲೆಗೆ ಟೋಪಿ ಧರಿಸಿದ್ದ ಸ್ನೇಹಿತನನ್ನು 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಬಾಲಕನೊಬ್ಬ ಲೇವಡಿ ಮಾಡಿದ ನಂತರ ಇಳಕಲ್ ನಲ್ಲಿ ಎರಡು ಧಾರ್ಮಿಕ ಗುಂಪುಗಳ ಸದಸ್ಯರ ನಡುವೆ ಸಂಘರ್ಷವೇರ್ಪಟ್ಟಿತ್ತು.
ಖಾಸಗಿ ಟ್ಯುಟೋರಿಯಲ್ ವೊಂದರಲ್ಲಿ ತರಗತಿಗೆ ಹಾಜರಾಗಿದ್ದ ಬಾಲಕನೊಬ್ಬ, ತಲೆಗೆ ಟೋಪಿಗೆ ಧರಿಸಿದ್ದ ಮತ್ತೊಬ್ಬ ಸ್ನೇಹಿತನನ್ನು ರೇಗಿಸಿದ್ದಾನೆ. ಇದರಿಂದ ಬೇಸರಗೊಂಡ ಬಾಲಕ ಪಿಎಫ್ ಐ ಸದಸ್ಯರಾಗಿದ್ದ ತನ್ನ ಪೋಷಕರಿಗೆ ದೂರು ನೀಡಿದ್ದಾನೆ. ತದನಂತರ ಅವರು ಮತ್ತೋರ್ವ ಬಾಲಕನನ್ನು ಭೇಟಿಯಾಗಿದ್ದು, ಕಪಾಳ ಮೋಕ್ಷ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಪಾಳ ಮೋಕ್ಷ ವಿಚಾರವನ್ನು ಬಾಲಕ ಹಿಂದೂ ಸಂಘಟನೆ ಸದಸ್ಯರಾಗಿದ್ದ ತನ್ನ ಸ್ನೇಹಿತರಿಗೆ ತಿಳಿಸಿದಾಗ, ಅವರು ಬಂದು, ಮುಸ್ಲಿಂ ಹುಡುಗ ಹಾಗೂ ಆತನ ಸ್ನೇಹಿತರಿಗೆ ಹೊಡೆದಿದ್ದಾರೆ. ಪಿಎಪ್ ಐ ಸದಸ್ಯರು 15 ವರ್ಷದ ಬಾಲಕನ ಸ್ನೇಹಿತ ಮೇಲೆ ಮತ್ತೆ ದಾಳಿ ನಡೆಸಿದಾಗ ಎರಡು ಗುಂಪಿನ ನಡುವೆ ಸಂಘರ್ಷ ವೇರ್ಪಟ್ಟಿದೆ ಎಂದು ಅವರು ಹೇಳಿದ್ದಾರೆ.
ಉಭಯ ಗುಂಪಿನ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ದೂರು ಇಳಕಲ್ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಕ್ಷುಲಕ ಕಾರಣಕ್ಕೆ ಎರಡು ಬಾಲಕರ ನಡುವೆ ನಡೆದ ಸಂಘರ್ಷವನ್ನು ಉಭಯ ಗುಂಪುಗಳು ದುರುಪಯೋಗಪಿಡಿಸಿದ್ದಾರೆ. ಎರಡು ಕಡೆಯಿಂದ ಎರಡು ಕೇಸ್ ದಾಖಲಿಸಿಕೊಂಡಿದ್ದೇವೆ ಎಂದು ಎಸ್ ಪಿ ಜಗಳಸರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


