ಬಾಗಲಕೋಟೆ: ಭೀಕರ ಅಪಘಾತ, ಲಾರಿಯಡಿ ಸಿಕ್ಕು ಮೂವರು ದಾರುಣ ಸಾವು
ರಸ್ತೆ ಬದಿಯ ಪಾನ್ ಶಾಪ್ ಮುಂದೆ ನಿಂತವರ ಮೇಲೆ ಲಾರಿಯೊಂದು ನಿಗ್ಗಿದ ಪರಿಣಾಮ ಲಾರಿಗೆ ಸಿಕ್ಕು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರಿನ ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬಾಗಲಕೋಟೆ: ರಸ್ತೆ ಬದಿಯ ಪಾನ್ ಶಾಪ್ ಮುಂದೆ ನಿಂತವರ ಮೇಲೆ ಲಾರಿಯೊಂದು ನಿಗ್ಗಿದ ಪರಿಣಾಮ ಲಾರಿಗೆ ಸಿಕ್ಕು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರಿನ ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಮಹಾನಂದ ಕರಿ(೧೬) ಸುರೇಬಾನ, ಲಕ್ಷö್ಮಣ ವಿಠ್ಠಲ ಸಾವಜಿ(೩೫) ಕೆರೂರ, ಪೂಜಾರ ಅರ್ಜುನ ಹಳಪೇಟೆ( ೨೨) ನರಗುಂದ ಎಂದು ಗುರುತಿಸಲಾಗಿದೆ. ಮಂಜುಳಾ ಜವಳಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿ ಅತಿಯಾದ ವೇಗದಿಂದ ಕೂಡಿದ್ದು ಚಾಲಕನ ನಿಯಂತ್ರಣ ತಪ್ಪಿದೆ ಈ ವೇಳೆ ಲಾರಿ ರಸ್ತೆಯ ಬದಿಗಿದ್ದ ಪಾನ್ ಶಾಪ್ ನತ್ತ ನುಗ್ಗಿ ಅಲ್ಲಿ ಚಹಾ ಸೇವಿಸುತ್ತಿದ್ದವರಿಗೆ ಗುದ್ದಿದೆ. ಪರಿಣಾಮ ಮೂವರು ಸಾವನ್ನಪ್ಪಿ ಇನ್ನೂ
ಆರು ಮಂದಿ ಗಾಯಗೊಂಡಿದ್ದಾರೆ.
ಘಟನೆ ಸಂಬಂಧ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


