Ayodhya

ಭವಿಷ್ಯದ ಅಯೋಧ್ಯೆಯ ಹೊಸ ಮಸೀದಿ ಹೀಗಿರಲಿದೆ...
ಬಾಬ್ರಿ ಮಸೀದಿಗೆ ಬದಲಿಯಾಗಿ ಅಯೋಧ್ಯೆಯ ದನ್ನೀಪುರದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮಸೀದಿಯ ನೀಲನಕ್ಷೆಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.

ಅಯೋಧ್ಯೆ: ಗಣರಾಜ್ಯೋತ್ಸವ ದಿನ ಮಸೀದಿ ನಿರ್ಮಾಣಕ್ಕೆ ಶಂಕುಸ್ಥಾಪನೆ, ಈ ವಾರ ನೀಲಿನಕ್ಷೆ ಬಿಡುಗಡೆ
ಬಾಬ್ರಿ ಮಸೀದಿಗೆ ಬದಲಿಯಾಗಿ ನಿರ್ಮಾಣಗೊಳ್ಳಲಿರುವ ಮಸೀದಿಗೆ ನೀಲನಕ್ಷೆ ಸಿದ್ಧವಾಗುತ್ತಿದ್ದು ಇದೇ ಶನಿವಾರ ಅನಾವರಣಗೊಳ್ಳಲಿದೆ. ಮಸೀದಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮುಂದಿನ ತಿಂಗಳು ಜನವರಿಯ ಗಣರಾಜ್ಯೋತ್ಸವ ದಿನ ನೆರವೇರಲಿದೆ ಎಂದು ಮಸೀದಿ ನಿರ್ಮಾಣದ ಟ್ರಸ್ಟ್ ತಿಳಿಸಿದೆ.

ರಾಮ ಮಂದಿರಕ್ಕೆ ವನ್ಯಜೀವಿ ಅಭಯಾರಣ್ಯದಲ್ಲಿ ಮರಳುಗಲ್ಲಿನ ಕಾನೂನುಬದ್ಧ ಗಣಿಗಾರಿಕೆಗೆ ರಾಜಸ್ಥಾನ ಅವಕಾಶ!
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಗತ್ಯವಿರುವ ಗುಲಾಬಿ ಬಣ್ಣದ ಕಲ್ಲುಗಳ ಗಣಿಗಾರಿಕೆಗೆ ರಾಜಸ್ತಾನ ಕಾನೂನುಬದ್ಧ ಗಣಿಗಾರಿಕೆಗೆ ಅವಕಾಶ ನೀಡಿದೆ.

6 ಲಕ್ಷ ಮಣ್ಣಿನ ಹಣತೆ ದೀಪಗಳನ್ನು ಹಚ್ಚುವ ಮೂಲಕ ಅಯೋಧ್ಯೆಯಲ್ಲಿ ಮತ್ತೆ ವಿಶ್ವ ದಾಖಲೆ ಸ್ಥಾಪನೆ
ಪುರಾತನ ನಗರಿ ಅಯೋಧ್ಯೆಯಲ್ಲಿ ದೀಪೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಸರಯು ನದಿಯ ದಡದಲ್ಲಿ ಲಕ್ಷಾಂತರ ಮಣ್ಣಿನ ಹಣತೆ ದೀಪಗಳನ್ನು ಬೆಳಗಿಸುವುದರ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಲಾಗಿದೆ.

ಅಯೋಧ್ಯೆ ದೀಪೋತ್ಸವ: ಕೋವಿಡ್-19 ಹಿನ್ನೆಲೆಯಲ್ಲಿ ಪ್ರದರ್ಶನ ಒಂದು ದಿನಕ್ಕೆ ಸೀಮಿತ
ರಾವಣನನ್ನು ಸೋಲಿಸಿದ ನಂತರ ಶ್ರೀರಾಮ ವಿಜಯಿಯಾಗಿ ವಾಪಸ್ ಆಗಿದ್ದರ ನೆನಪಿನಲ್ಲಿ ಅಯೋಧ್ಯೆಯಲ್ಲಿ ಆಚರಿಸಲಾಗುವ ಬಹುನಿರೀಕ್ಷಿತ ದೀಪೋತ್ಸವ ಕಾರ್ಯಕ್ರಮವನ್ನು ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ.

ಅಯೋಧ್ಯೆ ರಾಮಮಂದಿರ ನಿರ್ಮಾಣ: ಖ್ಯಾತ ವಾಸ್ತುಶಿಲ್ಪಿ, ಸಂತರಿಂದ ಸಲಹೆ ಕೋರಿದ ಟ್ರಸ್ಟ್
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಶಾದ್ಯಂತ ವಾಸ್ತುಶಿಲ್ಪಿಗಳು ಮತ್ತು ಸಂತರ ಸಲಹೆಗಳನ್ನು ಆಹ್ವಾನಿಸಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಭಾನುವಾರ ತಿಳಿಸಿದ್ದಾರೆ.

ಈ ಬಾರಿ ಅಯೋಧ್ಯೆಯಲ್ಲಿ ನಡೆಯುವುದಿಲ್ಲ ರಾಮ್ ಲೀಲಾ, ವರ್ಚ್ಯುಯಲ್ ದೀಪೋತ್ಸವಕ್ಕೆ ತಯಾರಿ
ಅಯೋಧ್ಯೆ ಆಡಳಿತ ಈ ಬಾರಿ ಅಯೋಧ್ಯೆಯಲ್ಲಿ ರಾಮ್ ಲೀಲಾ ನಡೆಸುವುದಕ್ಕೆ ಕೋವಿಡ್-19 ಹಿನ್ನೆಲೆಯಲ್ಲಿ ನಿರಾಕರಿಸಿದೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಿ: ಇಕ್ಬಾಲ್ ಅನ್ಸಾರಿ ಮನವಿ
ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಘೋಷಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಜಮೀನು ವಿವಾದದಲ್ಲಿ ಮುಸ್ಲಿಂ ಕಡೆಯಿಂದ ಪ್ರಮುಖ ಕಕ್ಷಿದಾರರಾದ ಇಸ್ಬಾಲ್ ಅನ್ಸಾರಿ ಗುರುವಾರ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸುವಂತೆ ಮನವಿ ಮಾಡುವುದರ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.

ಅಯೋಧ್ಯೆವಿಮಾನ ನಿಲ್ದಾಣಕ್ಕೆ ಭಗವಾನ್ ಶ್ರೀರಾಮನ ಹೆಸರು
ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ವಿಮಾನ ನಿಲ್ದಾಣಕ್ಕೆ ಭಗವಾನ್ ಶ್ರೀರಾಮನ ಹೆಸರು ಇರಿಸಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನಿಸಿದೆ. ಈ ವಿಮಾನ ನಿಲ್ದಾಣವನ್ನು 2021 ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲು ಗುರಿ ಇರಿಸಿಕೊಂಡಿದೆ.

