ರಾಮ ಮಂದಿರಕ್ಕೆ ವನ್ಯಜೀವಿ ಅಭಯಾರಣ್ಯದಲ್ಲಿ ಮರಳುಗಲ್ಲಿನ ಕಾನೂನುಬದ್ಧ ಗಣಿಗಾರಿಕೆಗೆ ರಾಜಸ್ಥಾನ ಅವಕಾಶ!
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಗತ್ಯವಿರುವ ಗುಲಾಬಿ ಬಣ್ಣದ ಕಲ್ಲುಗಳ ಗಣಿಗಾರಿಕೆಗೆ ರಾಜಸ್ತಾನ ಕಾನೂನುಬದ್ಧ ಗಣಿಗಾರಿಕೆಗೆ ಅವಕಾಶ ನೀಡಿದೆ.

ಜೈಪುರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಗತ್ಯವಿರುವ ಗುಲಾಬಿ ಬಣ್ಣದ ಕಲ್ಲುಗಳ ಗಣಿಗಾರಿಕೆಗೆ ರಾಜಸ್ತಾನ ಕಾನೂನುಬದ್ಧ ಗಣಿಗಾರಿಕೆಗೆ ಅವಕಾಶ ನೀಡಿದೆ.
ಗಣಿಗಾರಿಕೆಗೆ ಅನುವು ಮಾಡಿಕೊಡಲು ರಾಜಸ್ಥಾನದ ಭಾರತ್ಪುರದ ಜಿಲ್ಲಾಡಳಿತವು ವನ್ಯಜೀವಿ ಅಭಯಾರಣ್ಯದ ಒಂದು ಭಾಗವನ್ನು ಗುರುತಿಸಿದೆ. ಭರತ್ಪುರದ ಬನ್ಸಿ ಪಹಾರ್ಪುರದಲ್ಲಿ ಗಣಿಗಾರಿಕೆ ಮಾಡುವ ಸಾವಿರಾರು ಟನ್ಗಳಷ್ಟು ಗುಲಾಬಿ ಮರಳುಗಲ್ಲು ದೇವಾಲಯ ನಿರ್ಮಾಣಕ್ಕೆ ಅಗತ್ಯವಾಗಿದೆ.
ಈ ಹಿಂದೆ ವಿಶ್ವ ಹಿಂದೂ ಪರಿಷತ್ ಮುಖಂಡರೊಬ್ಬರು ಈ 'ತಾಂತ್ರಿಕ ಸಮಸ್ಯೆ' ತೋರಿಸಿ ರಾಜಸ್ತಾನ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದರು. ಈ ಆರೋಪವನ್ನು ರಾಜಸ್ತಾನ ಸರ್ಕಾರ ನಿರಾಕರಿಸಿತು.
ಭರತ್ಪುರ ಜಿಲ್ಲೆಯ ಬನ್ಸಿ ಪಹಾರ್ಪುರದಲ್ಲಿ ಅರಣ್ಯ ಮತ್ತು ವನ್ಯಜೀವಿ ಕಾಯ್ದೆಗೆ ಸಂಬಂಧಿಸಿದಂತೆ ಕೆಲವು ತಾಂತ್ರಿಕ ಸಮಸ್ಯೆಗಳಿದ್ದು, ಇದನ್ನು ನಿವಾರಿಸಲು ರಾಜಸ್ಥಾನ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ವಿಎಚ್ಪಿ ಹಿರಿಯ ಮುಖಂಡ ತ್ರಿಲೋಕಿ ನಾಥ್ ಪಾಂಡೆ ತಿಳಿಸಿದ್ದಾರೆ.
ದೇವಾಲಯದ ಯೋಜನೆಗೆ ಸಂಬಂಧಿಸಿದ ವಾಸ್ತುಶಿಲ್ಪಿ ಅನುಭಾಯಿ ಸೋಮಪುರ, ಈಗಾಗಲೇ ಒಂದು ಲಕ್ಷ ಘನ ಅಡಿ ಕಲ್ಲುಗಳನ್ನು ದಾಸ್ತಾನು ಮಾಡಲಾಗಿದೆ, ಇನ್ನೂ ಎರಡು ಲಕ್ಷ ಘನ ಅಡಿ ಅಗತ್ಯವಿದೆ ಎಂದು ಪಾಂಡೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


