Ayodhya

ಅಯೋಧ್ಯೆಯಲ್ಲಿ ವಾಲ್ಮೀಕಿ ದೇವಾಲಯ ಸ್ಥಾಪನೆಯಿಂದ ಸೂಕ್ತ ಗೌರವ ಸಲ್ಲಿಸಿದಂತಾಗುತ್ತದೆ: ಪ್ರಸನ್ನಾನಂದ ಸ್ವಾಮೀಜಿ
ಅಯೋಧ್ಯೆಯಲ್ಲಿ ವಾಲ್ಮೀಕಿ ದೇವಾಲಯ ಸ್ಥಾಪನೆಯಿಂದ ಮಹರ್ಷಿಗಳಿಗೆ ಸೂಕ್ತ ಗೌರವ ಸಲ್ಲಿಸಿದಂತಾಗುತ್ತದೆ ಎಂದು ವಾಲ್ಮೀಕಿ ಗುರುಪೀಠದಪ್ರಸನ್ನಾನಂದ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.

ಅಯೋಧ್ಯೆ ರಾಮ ಮಂದಿರಕ್ಕೆ ಕಬ್ಬಿಣದ ಬದಲಿಗೆ ತಾಮ್ರದ ಶೀಟ್ ಬಳಕೆ!
ಅಯೋಧ್ಯೆ ರಾಮ ಮಂದಿರಕ್ಕೆ ಕಬ್ಬಿಣದ ಬದಲಿಗೆ ಭಕ್ತರು ನೀಡುವ ತಾಮ್ರದ ಶೀಟ್ ಗಳನ್ನು ಬಳಸಲಾಗುವುದು ಎಂದು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮತ್ತು ವಿಹೆಚ್ ಪಿ ಮುಖಂಡ ಚಂಪತ್ ರೈ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಲ್ಲುಗಳನ್ನು ಮಾತ್ರ ಬಳಸಲಾಗುವುದು:ಟ್ರಸ್ಟ್ ಅಧಿಕಾರಿಗಳು
ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕೇವಲ ಕಲ್ಲುಗಳನ್ನುಮಾತ್ರ ಬಳಸಿ ನಿರ್ಮಿಸಲಾಗುವುದು. ಇದರಿಂದ ಸಾವಿರ ವರ್ಷಕ್ಕೂ ಅಧಿಕ ಕಾಲ ಗಟ್ಟಿಯಾಗಿ ಉಳಿಯುತ್ತದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದಾರೆ.

ಅಯೋಧ್ಯೆಯ ಮಸೀದಿಗೆ ಧನ್ನಿಪುರ ಗ್ರಾಮದ ನಾಮಕರಣ
ಮಸೀದಿ ನಿರ್ಮಾಣಕ್ಕಾಗಿ ಸುಪ್ರೀಂಕೋರ್ಟ್ ಮಂಜೂರು ಮಾಡಿರುವ ಐದು ಎಕರೆ ಭೂಮಿಯಲ್ಲಿ ಕಾಂಪೌಂಡ್ ಮತ್ತು ಗಡಿ ಗುರುತಿಸುವಿಕೆ ಕೆಲಸ ಆರಂಭಗೊಂಡಿದೆ.

ಕಾಂಗ್ರೆಸ್ನವರು ಅತ್ತೂ ಕರೆದು ಐತಿಹಾಸಿಕ ಕ್ಷಣದ ಭಾಗವಾಗಲು ಪ್ರಯತ್ನಿಸುತ್ತಿದ್ದಾರೆ: ಸದಾನಂದಗೌಡ ಟೀಕಾಪ್ರಹಾರ
ಅಯೋಧ್ಯೆಯಲ್ಲಿ ಬುಧವಾರ ಆಯೋಜಿಸಿರುವ ರಾಮಮಂದಿರ ನಿರ್ಮಾಣದ ಭೂಮಿಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಲಿ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಶುಭ ಹಾರೈಸಿದ್ದಾರೆ.

ರಾಮಮಂದಿರ ಭೂಮಿ ಪೂಜೆಯ ಪ್ರಸಾದವನ್ನು ಮೊದಲು ಪಡೆದವರು ಯಾರು ಗೊತ್ತಾ?
ರಾಮಮಂದಿರ ಭೂಮಿಪೂಜೆ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಳುಹಿಸಿದ ಪ್ರಸಾದವನ್ನು ದಲಿತ ಕುಟುಂಬವೊಂದು ಮೊದಲು ಪಡೆದಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.

ರಾಮಮಂದಿರ ಕೆಡವಿ ಮತ್ತೆ ಮಸೀದಿ ಕಟ್ಟುತ್ತೇವೆ: ಮುಸ್ಲಿಂ ಸಂಘಟನೆ
ಕೋಟ್ಯಾಂತರ ಹಿಂದುಗಳ ಕನಸಾಗಿದ್ದ ರಾಮಮಂದಿರ ನಿರ್ಮಾಣಕ್ಕೆ ನಿನ್ನೆಯಷ್ಟೇ ಭೂಮಿಪೂಜೆ ನೆರವೇರಿಸಲಾಗಿದ್ದು ಇದರ ನಡುವೆ ಮುಸ್ಲಿಂ ಸಂಘಟನೆಯೊಂದು ರಾಮ ಮಂದಿರ ಕೆಡವಿ ಮತ್ತೆ ಮಸೀದಿ ಕಟ್ಟುತ್ತೇವೆ ಎಂದು ಪ್ರಚೋದನಕಾರಿ ಟ್ವೀಟ್ ಮಾಡಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಸಂವಿಧಾನ ಆಶಯಕ್ಕೆ ವಿರುದ್ಧವಾಗಿದೆ: ಸೀತಾರಾಮ್ ಯೆಚೂರಿ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಡೆದ ಭೂಮಿಪೂಜೆ ಪಕ್ಷಪಾತದ, ರಾಜಕೀಯ ಉದ್ದೇಶಗಳಿಗೆ ಜನರ ಧಾರ್ಮಿಕ ಭಾವನೆಗಳ ಬೆತ್ತಲೆ ಶೋಷಣೆಯಾಗಿದ್ದು, ಇದು ಭಾರತೀಯ ಸಂವಿಧಾನದ ತತ್ವ, ಆಶಯ, ನಂಬಿಕೆ, ಉತ್ಸಾಹಗಳನ್ನು ಉಲ್ಲಂಘಿಸುತ್ತದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.

ಆಸ್ಪತ್ರೆಯಿಂದಲೇ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ವೀಕ್ಷಿಸಿದ ಯಡಿಯೂರಪ್ಪ
ಕೊರೋನಾ ಪಾಸಿಟಿವ್ ನಿಂದಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಸ್ಪತ್ರೆಯಿಂದಲೇ ಅಯೋಧ್ಯೆ ಭೂಮಿಪೂಜೆಯನ್ನು ವೀಕ್ಷಣೆ ಮಾಡಿದರು.

