assembly election

ವಿಧಾನಸಭೆ ಚುನಾವಣೆ: ಕರ್ನಾಟಕಕ್ಕೆ ಬಂದು 'ಟಿಫಿನ್ ಬಾಕ್ಸ್ ಬೈಠಕ್' ತೆರೆದ ಜೆ ಪಿ ನಡ್ಡಾ; ಬಿಜೆಪಿಯ ತಂತ್ರವೇನು?
ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಕರ್ನಾಟಕಕ್ಕೆ ಆಗಮಿಸಿದ್ದಾರೆ. ನಿನ್ನೆ ಪ್ರವಾಸ ಆರಂಭಿಸಿದ ಅವರು ಮೊದಲಿಗೆ 'ಟಿಫನ್ ಬಾಕ್ಸ್ ಬೈಠಕ್' ಮೂಲಕ ತಮ್ಮ ಚುನಾವಣಾ ತಂತ್ರಗಾರಿಕೆ ಪ್ರವಾಸವನ್ನು ಆರಂಭಿಸಿದರು.

2023ರ ವಿಧಾನಸಭೆ ಚುನಾವಣೆಗಾಗಿ 300 ಕೋಟಿ ರು. : ಅತಿವೃಷ್ಟಿ ಹಾನಿಯ ಮೂಲಸೌಕರ್ಯಕ್ಕೆ 124 ಕೋಟಿ!
2023ರ ವಿಧಾನಸಭೆ ಚುನಾವಣೆ ಸಿದ್ಧತೆಗಾಗಿ ರಾಜ್ಯ ಸರ್ಕಾರ 300 ಕೋಟಿ ರು. ವೆಚ್ಚ ಮಾಡಲು ನಿರ್ಧರಿಸಿದೆ. ಈ ನಿಧಿಯು ರಾಜ್ಯ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದ ಎರಡನೇ ಕಂತಿನ ಪೂರಕ ಅಂದಾಜುಗಳ ಒಂದು ಭಾಗವಾಗಿದೆ.

ವಿಧಾನಸಭೆ ಚುನಾವಣೆ: ಪ್ರತಿ ಕ್ಷೇತ್ರಕ್ಕೆ 3 ಅಭ್ಯರ್ಥಿಗಳ ಆಯ್ಕೆ ; ಗೆಲ್ಲುವ ಅಭ್ಯರ್ಥಿಗಳಿಗೆ ಮಾನದಂಡ- ಕಾಂಗ್ರೆಸ್ ಹೊಸ ಲೆಕ್ಕಾಚಾರ!
2023ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆಪಿಸಿಸಿ ಕೆಲವೊಂದು ಮಾನದಂಡಗಳನ್ನು ನಿಗದಿ ಪಡಿಸಿದೆ.

ಬಿಜೆಪಿ ಶಾಸಕ ಪ್ರೀತಂ ಗೌಡ ಮಣಿಸಲು ಜೆಡಿಎಸ್ ರಣತಂತ್ರ: ಹಾಸನ ವಿಧಾನಸಭೆ ಕ್ಷೇತ್ರದಿಂದ ಭವಾನಿ ರೇವಣ್ಣ ಸ್ಪರ್ಧಿಸಲು ಗ್ರೀನ್ ಸಿಗ್ನಲ್?
ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ 2023ರ ವಿಧಾನಸಭಾ ಚುನಾವಣೆಗೆ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬೊಮ್ಮಾಯಿ ನಾಯಕತ್ವವನ್ನು ಸಂಪೂರ್ಣವಾಗಿ ಒಪ್ಪದ ಲಿಂಗಾಯತ ಸಮುದಾಯ; ಕಾಂಗ್ರೆಸ್ ಗಿಂತ ಕೇಸರಿ ಬ್ರಿಗೇಡ್ ಗೆ ಬಿಎಸ್ ವೈ ಹೆಚ್ಚು ಅಪಾಯಕಾರಿ!
ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಲು ಮತ್ತು ಬೆಂಬಲವನ್ನು ಹೆಚ್ಚಿಸಲು ಬಿಜೆಪಿ ಸಂಕಲ್ಪ ಯಾತ್ರೆಯನ್ನು ಆಯೋಜಿಸಿದೆ.

ಹೇಗಪ್ಪ ನಿಖಿಲ್ ನನ್ನು ದಡ ಸೇರಿಸೋದು ಎಂಬ ಚಿಂತೆ ನನಗಿಲ್ಲ,: ನನಗೆ ರಾಜಕೀಯವಾಗಿ ಜನ್ಮ ಕೊಟ್ಟ ಜನರಿಂದಲೇ ತಿರ್ಮಾನ: ಎಚ್ ಡಿಕೆ
ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯವನ್ನು ನನಗೆ ರಾಜಕೀಯವಾಗಿ ಜನ್ಮ ಕೊಟ್ಟ ಜನರೇ ತಿರ್ಮಾನ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಹುಣಸೂರು, ಚಾಮುಂಡೇಶ್ವರಿ, ಮದ್ದೂರಿನಲ್ಲಿ ಹರಿಯುತ್ತಿದೆ ಹಣದ ಮಹಾಪೂರ: 'ಉಚಿತ'ಗಳ ಆಫರ್ ಭರಪೂರ; ಟಿಕೆಟ್ ಆಕಾಂಕ್ಷಿಗಳಿಂದ ತೀರ್ಥಯಾತ್ರೆ!
ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಹಲವು ಕ್ಷೇತ್ರಗಳಲ್ಲಿ ಉಚಿತ ಕೊಡುಗೆಗಳ ಮಹಾಪೂರವೇ ತೆರೆದುಕೊಂಡಿದೆ. ಕನ್ನಡ ರಾಜ್ಯೋತ್ಸವ ಆಚರಿಸಲು ಆಟೋರಿಕ್ಷಾ ಚಾಲಕರು 30 ರಿಂದ 50 ಸಾವಿರ ರೂ. ನಗದು ದೇಣಿಗೆ ಪಡೆಯುತ್ತಿದ್ದಾರೆ.

2023ರ ವಿಧಾನಸಭೆ ಚುನಾವಣೆಗೆ ಹೊಸಬರಿಗೆ ಟಿಕೆಟ್: ಹೈಕಮಾಂಡ್ ನಿರ್ಧಾರಕ್ಕೆ ಬೇಸತ್ತ ಹಾಸನ ಕಾಂಗ್ರೆಸ್ ನಾಯಕರು!
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿರುಸಿನ ರಾಜಕೀಯ ಚಟುವಟಿಕೆಗಳಿಗೆ ಸಾಕ್ಷಿಯಾಗಿರುವ ಹಾಸನ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಬಹಿರಂಗವಾಗಿದೆ.

'ವಯಸ್ಸಾಯ್ತು ಮನೆಯಲ್ಲಿರಿ, ಕಿರಿಯರಿಗೆ ಅವಕಾಶ ಕೊಡಿ': ಚುನಾವಣೆಯಲ್ಲಿ ಸ್ಪರ್ಧಿಸದಂತೆ ಹಿರಿಯ ನಾಯಕರ ಮನವೊಲಿಕೆ! ಬೊಮ್ಮಾಯಿ ಸಂಪುಟದ ಹಲವರಿಗೆ ಕೊಕ್!
ಇನ್ನು ಕೆಲವು ಬಿಜೆಪಿ ಶಾಸಕರು ಕೂಡ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಆರೋಗ್ಯ ಸೇರಿದಂತೆ ನಾನಾ ಕಾರಣಗಳಿಂದ ಸ್ಪರ್ಧಿಸುವುದಿಲ್ಲ ಎಂದು ಕೆಲವು ಹಿರಿಯ ನಾಯಕರು ಹೇಳಿದ್ದಾರೆ.

