Asaduddin Owaisi

'ಸೋತಿದ್ದಕ್ಕೆ ಇವಿಎಂ ಹೊಣೆ ಮಾಡಬೇಡಿ, ಫಲಿತಾಂಶ ಕೊಟ್ಟಿದ್ದು ಜನರ ಮನಸಲ್ಲಿರುವ ಚಿಪ್; 80-20 ಅನುಪಾತ ಕಾರ್ಯ ನಿರ್ವಹಿಸಿದೆ': ಒವೈಸಿ
ಉತ್ತರಪ್ರದೇಶ ಚುನಾವಣಾ ಫಲಿತಾಂಶಕ್ಕೆ ಇವಿಎಂ ಅನ್ನು ಹೊಣೆ ಮಾಡಬೇಡಿ, ಫಲಿತಾಂಶ ಕೊಟ್ಟಿದ್ದು ಇವಿಎಂ ಚಿಪ್ ಅಲ್ಲ.. ಬದಲಿಗೆ ಜನರ ಮನಸಲ್ಲಿರುವ ಚಿಪ್ ಎಂದು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

'ಯೋಗಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಅಸಾದುದ್ದೀನ್ ಓವೈಸಿ ಜನಿವಾರ ಧರಿಸಿ ರಾಮನಾಮ ಜಪಿಸುತ್ತಾರೆ'
ಮುಂದಿನ ಅವಧಿಗೆ ಕೂಡ ಯೋಗಿ ಆದಿತ್ಯನಾಥ್ ಸರ್ಕಾರ ಅಧಿಕಾರಕ್ಕೆ ಬಂದರೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಜನಿವಾರ ಧರಿಸಿ ಶ್ರೀರಾಮನಾಮ ಜಪ ಪ್ರಾರಂಭ ಮಾಡುತ್ತಾರೆ ಎಂದು ಉತ್ತರ ಪ್ರದೇಶದ ಪಂಚಾಯಿತಿ ರಾಜ್ ಸಚಿವ ಭೂಪೇಂದ್ರ ಸಿಂಗ್ ಚೌಧರಿ ಹೇಳಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಸ್ಥಳಗಳ ಮರುನಾಮಕರಣದ ಜ್ವರದಿಂದ ಬಳಲುತ್ತಿದ್ದಾರೆ: ಓವೈಸಿ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ಥಳಗಳನ್ನು ಮರುನಾಮಕರಣ ಮಾಡುವ ಜ್ವರದಿಂದ ಬಳಲುತ್ತಿದ್ದಾರೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.

ಈ ರಾಹುಲ್ ಗಾಂಧಿ ಅಂದರೆ ಯಾರು? ನನಗೆ ಆತನ ಪರಿಚಯವಿಲ್ಲ: ಅಸಾದುದ್ದೀನ್ ಓವೈಸಿ
ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಶುಕ್ರವಾರ ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಮುಂಬರುವ ದಿನಗಳಲ್ಲಿ ಪಕ್ಷವು ಒಡೆದು ಹೋಗುತ್ತದೆ ಎಂದಿದ್ದಾರೆ.

ಗಡಿಯಲ್ಲಿ ನಮ್ಮ ಸೈನಿಕರು ಸಾಯುತ್ತಿದ್ದಾರೆ, ನೀವು ಟಿ20 ಆಡುತ್ತೀರಾ?: ಅಸಾದುದ್ದೀನ್ ಓವೈಸಿ
ನಮ್ಮ ಸೈನಿಕರು ಮೃತಪಟ್ಟಿದ್ದಾರೆ. ಮತ್ತೆ ನೀವು ಟಿ20 ಆಡುತ್ತೀರಾ? ಪಾಕಿಸ್ತಾನವು ಕಾಶ್ಮೀರದಲ್ಲಿ ಭಾರತದ ಜನರ ಜೀವಗಳೊಂದಿಗೆ ಪ್ರತಿ ದಿನವೂ 20-20 ಆಡುತ್ತಿದೆ' ಎಂದು ದೂರಿದ್ದಾರೆ.

ಓವೈಸಿ ಮನೆ ಮೇಲೆ ದಾಳಿ ಪ್ರಕರಣ ಸಂಬಂಧ ಐದು ಮಂದಿ ಬಂಧನ: ದೆಹಲಿ ಪೊಲೀಸ್
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮನೆ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 5 ಮಂದಿಯನ್ನು ಬಂಧಿಸಿದ್ದಾರೆ.

ಕೋವಿಡ್-19 ನಿಯಮ ಉಲ್ಲಂಘನೆ, ಕೋಮು ಸಾಮರಸ್ಯಕ್ಕೆ ಧಕ್ಕೆ: ಅಸಾದುದ್ದೀನ್ ಓವೈಸಿ ವಿರುದ್ಧ ಉತ್ತರ ಪ್ರದೇಶದಲ್ಲಿ ಕೇಸ್
ಉತ್ತರ ಪ್ರದೇಶದಲ್ಲಿ ಪ್ರಚಾರ ರ್ಯಾಲಿಯಲ್ಲಿ ಭಾಷಣ ಮಾಡಿದ್ದ ಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ವಿರುದ್ಧ ಪ್ರಕರಣ ದಾಖಲಾಗಿದೆ.

ಕೋವಿಡ್ ನಿಯಮ ಉಲ್ಲಂಘನೆ: ಓವೈಸಿ ಸೇರಿ 300 ಜನರ ವಿರುದ್ಧ ಪ್ರಕರಣ ದಾಖಲು
ಕೋವಿಡ್-19 ನಿಯಮ ಉಲ್ಲಂಘಿಸಿ ಚುನಾವಣಾ ಪ್ರಚಾರ ಮಾಡಿದ ಆರೋಪದಡಿ ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಸೇರಿ 300ಕ್ಕೂ ಹೆಚ್ಚು ಬೆಂಬಲಿಗರ ವಿರುದ್ಧ ಬೆಳಗಾವಿಯ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಓವೈಸಿಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸುವುದು ಉತ್ತಮ: ಶೋಭಾ ಕರಂದ್ಲಾಜೆ
ಅಫ್ಘಾನಿಸ್ತಾನ ಬಿಕ್ಕಟ್ಟು ಕುರಿತಂತೆ ಮೋದಿ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

