Arjun Janya

ಶಿವರಾಜಕುಮಾರ್- ಉಪೇಂದ್ರ ಅಭಿನಯದ '45' ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ!
ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಈಗಾಗಲೇ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ನಟಿಸುತ್ತಿದ್ದಾರೆ. ಈಗ ಬಂದಿರುವ ಹೊಸ ಅಪ್ ಡೇಟ್ ಎಂದರೆ ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಕೂಡ ನಟಿಸುತ್ತಿದ್ದಾರೆ.

ತೆರೆಯ ಮೇಲೆ ಕಮಾಲ್ ಮಾಡಲು ಬರುತ್ತಿದೆ 'ಪ್ರೀತ್ಸೆ' ಜೋಡಿ: '45' ಸಿನಿಮಾದಲ್ಲಿ ಶಿವಣ್ಣ-ಉಪೇಂದ್ರ ಮೋಡಿ!
ಅರ್ಜುನ್ ಜನ್ಯ ನಿರ್ದೇಶನದಲ್ಲಿ, ಶಿವರಾಜಕುಮಾರ್ ಅಭಿನಯದ ಚಿತ್ರಕ್ಕೆ ‘45’ ಎಂಬ ಟೈಟಲ್ ಇಡಲಾಗಿದೆ. ಈಗ ಈ ಚಿತ್ರಕ್ಕೆ ಉಪೇಂದ್ರ ಸೇರ್ಪಡೆಯಾಗಿದ್ದು, ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಕೆಜಿಎಫ್-2 ಬಳಿಕ ಸ್ಯಾಂಡಲ್ ವುಡ್ ಗೆ ಮತ್ತೆ 'ಅಧೀರ'; ಪ್ರೇಮ್-ಧ್ರುವ ಸರ್ಜಾ ಚಿತ್ರಕ್ಕೆ ಸಂಜಯ್ ದತ್ ವಿಲನ್?
ಕೆಜಿಎಫ್-2 ಚಿತ್ರದ 'ಅಧೀರ' ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ಬರಲಿದ್ದು, ಪ್ರೇಮ್-ಧ್ರುವ ಸರ್ಜಾ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲ್ಲಿದ್ದಾರೆ ಎನ್ನಲಾಗಿದೆ.

ಗಾಳಿಪಟ 2 ಚಿತ್ರದ 'ದೇವ್ಲೆ ದೇವ್ಲೆ' ಹಾಡು ಹಿಟ್ ಲಿಸ್ಟ್ ಗೆ ಸೇರ್ಪಡೆ!
ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರದ ಮೂರನೇ ಹಾಡು ಬಿಡುಗಡೆಯಾದ ಕೆಲವೇ ದಿನಗಳ ಅಂತರದಲ್ಲಿ ಹಿಟ್ ಲಿಸ್ಟ್ ಸೇರಿದೆ.

ಶಿವಣ್ಣ-ಅರ್ಜುನ್ ಜನ್ಯ ಚಿತ್ರಕ್ಕೆ '45' ಎಂದು ಶೀರ್ಷಿಕೆ!
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರ ಜೋಡಿ ನೂತನ ಚಿತ್ರಕ್ಕೆ 45 ಎಂದು ಶೀರ್ಷಿಕೆಯನ್ನಿಡಲಾಗಿದೆ.

ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣನಿಗೆ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಆ್ಯಕ್ಷನ್ ಕಟ್!
ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಸಂಗೀತ ಸಂಯೋಜಕರಲ್ಲಿ ಒಬ್ಬರಾದ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ಶಿವರಾಜಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ.

ರೈಡರ್ ನಾಯಕ ನಿಖಿಲ್ ಕುಮಾರಸ್ವಾಮಿ ಓರ್ವ ಜೆಂಟಲ್ ಮ್ಯಾನ್: ಚಿತ್ರತಂಡದ ಕುರಿತು ನಾಯಕಿ ಕಶ್ಮೀರಾ ಪ್ರಶಂಸೆ
ನಿಖಿಲ್ ಕುಮಾರಸ್ವಾಮಿ ನಾಯಕತ್ವದ ರೊಮ್ಯಾಂಟಿಕ್ ಎಂಟರ್ಟೇನರ್ ಸಿನಿಮಾ ರೈಡರ್, ವಿಜಯ್ ಕುಮಾರ್ ಕೊಂಡ ನಿರ್ದೇಶನದಲ್ಲಿ ಮೂಡಿಬಂದಿದ್ದು ಡಿಸೆಂಬರ್ 24ರಂದು ತೆರೆಕಾಣುತ್ತಿದೆ.

ಪುನೀತ್ ಅಭಿಮಾನಿಗಳಿಗೆ ಕನೆಕ್ಟ್ ಆಗುವ ಮನೋಜ್ಞ ಕ್ಲೈಮ್ಯಾಕ್ಸ್: ಭಜರಂಗಿ2 ಚಿತ್ರವಿಮರ್ಶೆ
ನಮಗೆ ಗೊತ್ತಿಲ್ಲದ ಅದೆಷ್ಟೋ ಸಂಗತಿಗಳು ಈ ಭೂಮಿ ಮೇಲಿದೆ ಎನ್ನುವ ಅರ್ಥದ ಸಾಲುಗಳಿಂದ ತೆರೆದುಕೊಳ್ಳುವ ಎ. ಹರ್ಷ ನಿರ್ದೇಶನದ ಭಜರಂಗಿ2 ಸಿನಿಮಾ ನಾನಾ ವಿಧಗಳಲ್ಲಿ ಪುನೀತ್ ಅಭಿಮಾನಿಗಳಿಗೆ ಕನೆಕ್ಟ್ ಆಗುತ್ತಿದೆ. ಚಿತ್ರದ ಕಡೆಯಲ್ಲಿ ಬರುವ ಹಲವು ದೃಶ್ಯಗಳು, ಸಂಭಾಷಣೆಗಳು, ಪುನೀತ್ ಅಭಿಮಾನಿಗಳಿಗೆ ಸಾಂತ್ವನ ಹೇಳುವಂತಿರುವುದು ಕಾಕತಾಳೀಯ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸೋದರ ಕೊರೋನಾದಿಂದ ನಿಧನ
ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಎರಡನೇ ಅಲೆ ರಣಕೇಕೆ ಹಾಕುತ್ತಿದೆ. ಕೇವಲ ಜನ ಸಾಮಾನ್ಯರಲ್ಲದೆ, ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಕೂಡ ತಮ್ಮವರನ್ನು ಕಳೆದುಕೊಂಡ ದುಖಃದಲ್ಲಿದ್ದಾರೆ. ಇದೀಗ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸೋದರ ಕೂಡ ಕೊರೋನಾದಿಂದ ಸಾವನ್ನಪ್ಪಿದ್ದಾರೆ.

