ಕೆಜಿಎಫ್-2 ಬಳಿಕ ಸ್ಯಾಂಡಲ್ ವುಡ್ ಗೆ ಮತ್ತೆ 'ಅಧೀರ'; ಪ್ರೇಮ್-ಧ್ರುವ ಸರ್ಜಾ ಚಿತ್ರಕ್ಕೆ ಸಂಜಯ್ ದತ್ ವಿಲನ್?
ಕೆಜಿಎಫ್-2 ಚಿತ್ರದ 'ಅಧೀರ' ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ಬರಲಿದ್ದು, ಪ್ರೇಮ್-ಧ್ರುವ ಸರ್ಜಾ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲ್ಲಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ಕೆಜಿಎಫ್-2 ಚಿತ್ರದ 'ಅಧೀರ' ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ಬರಲಿದ್ದು, ಪ್ರೇಮ್-ಧ್ರುವ ಸರ್ಜಾ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲ್ಲಿದ್ದಾರೆ ಎನ್ನಲಾಗಿದೆ.
‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ಸಂಜಯ್ ದತ್ ಅವರ ಲುಕ್ ಗಮನ ಸೆಳೆದಿತ್ತು. ಅಧೀರನ ಗೆಟಪ್ ಜನರಿಗೆ ಇಷ್ಟ ಆಗಿತ್ತು. ಹಾಗಾಗಿ ಮುಂಬರುವ ಸಿನಿಮಾಗಳಲ್ಲೂ ಅವರನ್ನು ಡಿಫರೆಂಟ್ ಆಗಿ ತೋರಿಸಲು ಪ್ಲ್ಯಾನ್ ಮಾಡಲಾಗುತ್ತಿದೆ. ಹಿಂದೆಂದೂ ಕಾಣಿಸಿಕೊಂಡಿರದ ರೀತಿಯಲ್ಲಿ ಅವರು ಹೊಸ ಚಿತ್ರದಲ್ಲಿ ಅಬ್ಬರಿಸಲಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ನಿರ್ದೇಶನದ ಬಹು ನಿರೀಕ್ಷಿತ ಹೊಸ ಪ್ಯಾನ್ ಇಂಡಿಯಾ ಸಿನಿಮಾಗೆ ಸಂಜಯ್ ದತ್ ರನ್ನು ಕರೆತರುವುದು ಬಹುತೇಕ ಖಚಿತವಾಗಿದೆ. ಸಂಜಯ್ ದತ್ ಧ್ರುವ ಸರ್ಜಾ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದ್ದು, ಕೆಜಿಎಫ್ ಬಳಿಕ ಮತ್ತೊಮ್ಮೆ ಕನ್ನಡ ಸಿನಿಮಾ ಮಾಡೋ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಸಂಜಯ್ ದತ್ ಚಿತ್ರ ಕಥೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸ್ಕ್ರಿಪ್ಟ್ ಅನ್ನು ಇಷ್ಟಪಟ್ಟಿದ್ದಾರೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರದಲ್ಲೇ ಸಂಜಯ್ ದತ್ ಚಿತ್ರಕ್ಕೆ ಅನುಮೋದನೆ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ನಿರ್ದೇಶಕ ಪ್ರೇಮ್ ಅಧಿಕೃತವಾಗಿ ಮಾಹಿತಿ ನೀಡಿಲ್ಲ.
ಧ್ರುವ-ಪ್ರೇಮ್ ಕಾಂಬಿನೇಷನ್ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡಿದೆ. ಏಪ್ರಿಲ್ನಲ್ಲಿ ಚಿತ್ರ ಅಧಿಕೃತವಾಗಿ ಪ್ರಾರಂಭವಾಗಿದ್ದು, ಅರ್ಜುನ್ ಜನ್ಯ ಅವರ ಹಾಡಿನ ರೆಕಾರ್ಡಿಂಗ್ ಮುಗಿದಿದೆ. ಪ್ಯಾನ್-ಇಂಡಿಯನ್ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿವೆ.
ಇದನ್ನೂ ಓದಿ: ನಟ ರಮೇಶ್ ಅರವಿಂದ್ ಸೇರಿ ಮೂವರಿಗೆ ರಾಣಿ ಚೆನ್ನಮ್ಮ ವಿ.ವಿಯಿಂದ ಗೌರವ ಡಾಕ್ಟರೇಟ್: ನಾಳೆ ಪ್ರದಾನ
ಏತನ್ಮಧ್ಯೆ, ಚಿತ್ರದ ತಾರಾಗಣವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿರುವ ನಿರ್ದೇಶಕ ಪ್ರೇಮ್ ಅಕ್ಟೋಬರ್ ಮೊದಲ ವಾರದಲ್ಲಿ ಟೈಟಲ್ ಟೀಸರ್ ಅನ್ನು ಅನಾವರಣಗೊಳಿಸಲು ಸಿದ್ಧರಾಗಿದ್ದಾರೆ. ಚಿತ್ರದ ಕಥೆಯು 1968 ಮತ್ತು 1978 ರ ನಡುವೆ ನಡೆಯುತ್ತದೆ ಮತ್ತು ನೈಜ ಘಟನೆಯನ್ನು ಆಧರಿಸಿದೆ. ಆ ಕಾಲದ ಬೆಂಗಳೂರು ನಗರದ ದೈತ್ಯಾಕಾರದ ಸೆಟ್ಗಳನ್ನು ನಿರ್ಮಿಸಲು ಚಿತ್ರತಂಡ ಯೋಜಿಸಿದೆ.
ಪ್ರಸ್ತುತ ಎಪಿ ಅರ್ಜುನ್ ಅವರ ಮಾರ್ಟಿನ್ ಚಿತ್ರದ ಸೆಟ್ನಲ್ಲಿರುವ ಧ್ರುವ ಸರ್ಜಾ ಅವರು ಅಕ್ಟೋಬರ್ ಅಂತ್ಯದಿಂದ ಪ್ರೇಮ್ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲು ಯೋಜಿಸಿದ್ದಾರೆ. ಚಿತ್ರಕ್ಕೆ ವಿಲಿಯಂ ಡೇವಿಡ್ ಛಾಯಾಗ್ರಹಣವನ್ನು ನಿರ್ವಹಿಸಲಿದ್ದಾರೆ.
ಇದನ್ನೂ ಓದಿ: ಗಾಳಿಪಟ 2 ಚಿತ್ರದ ಶ್ವೇತಾ ಪಾತ್ರಕ್ಕೆ ಜನರು ತೋರಿಸುತ್ತಿರುವ ಪ್ರೀತಿಯಲ್ಲಿ ಮುಳುಗಿದ್ದೇನೆ: ವೈಭವಿ ಶಾಂಡಿಲ್ಯ
ಅಂತೆಯೇ ಸಂಜಯ್ ದತ್ ತಮಿಳು ಚಿತ್ರದಲ್ಲಿ ತೊಡಗಿಸಿಕೊಂಡಿದ್ದು, ‘ವಿಕ್ರಮ್’ ಸಿನಿಮಾ ಮೂಲಕ ಭರ್ಜರಿ ಗೆಲುವು ಕಂಡಿರುವ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ‘ದಳಪತಿ’ ವಿಜಯ್ ಜೊತೆ ಸಿನಿಮಾ ಮಾಡಲಿದ್ದಾರೆ. ಆ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುವಂತೆ ಸಂಜಯ್ ದತ್ ಅವರಿಗೆ ಆಫರ್ ನೀಡಲಾಗಿದ್ದು, ಅದಕ್ಕಾಗಿ ಅವರು ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


