ಸಿನಿಮಾ ಸುದ್ದಿ

ಶಿವಣ್ಣ-ಅರ್ಜುನ್ ಜನ್ಯ ಚಿತ್ರಕ್ಕೆ '45' ಎಂದು ಶೀರ್ಷಿಕೆ!

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರ ಜೋಡಿ ನೂತನ ಚಿತ್ರಕ್ಕೆ 45 ಎಂದು ಶೀರ್ಷಿಕೆಯನ್ನಿಡಲಾಗಿದೆ.

ಶಿವಣ್ಣ-ಅರ್ಜುನ್ ಜನ್ಯ ಚಿತ್ರಕ್ಕೆ '45' ಎಂದು ಶೀರ್ಷಿಕೆ!
ಶಿವಣ್ಣ
Published On :

ಬೆಂಗಳೂರು: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರ ಜೋಡಿ ನೂತನ ಚಿತ್ರಕ್ಕೆ 45 ಎಂದು ಶೀರ್ಷಿಕೆಯನ್ನಿಡಲಾಗಿದೆ. 

ಹೌದು.. ಅರ್ಜುನ್ ಜನ್ಯ-ಶಿವರಾಜ್‌ಕುಮಾರ್ ನೂತನ ಚಿತ್ರಕ್ಕೆ 45 ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ರಮೇಶ್ ರೆಡ್ಡಿ ಅವರ ನಿರ್ಮಾಣವಿದ್ದು, ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿದ್ದ ಅರ್ಜುನ್ ಜನ್ಯ ತಮ್ಮ ಚೊಚ್ಚಲ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರವು ಪ್ರಸ್ತುತ ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದು, ಜುಲೈ 12 ರಂದು ಶಿವರಾಜಕುಮಾರ್ ಅವರ 60 ನೇ ಹುಟ್ಟುಹಬ್ಬದಂದು ಶೀರ್ಷಿಕೆ ಪೋಸ್ಟರ್ ಜೊತೆಗೆ ಪ್ಯಾನ್ ಇಂಡಿಯಾ ಬಿಡುಗಡೆ ಯೋಜನೆಯ ಬಗ್ಗೆ ಅಧಿಕೃತ ಘೋಷಣೆ ಮಾಡಲು ಚಿತ್ರತಂಡ ಯೋಜಿಸುತ್ತಿದೆ. 

ಚಿತ್ರದ ಕಥಾವಸ್ತುವಿನ ಬಗ್ಗೆ ಕುತೂಹಲ ಕೆರಳಿದ್ದು, ಬಾಲ್ಯದಿಂದಲೂ ನಾನು ಮಣಿರತ್ನಂ ಅವರ ಚಿತ್ರಗಳ ಅಭಿಮಾನಿಯಾಗಿದ್ದೆ, ಅದು ನನ್ನನ್ನು ಕಾಡುತ್ತಿತ್ತು. ಸಿನಿಮಾ ನಿರ್ಮಾಪಕನಾಗಬೇಕು ಎಂಬ ನನ್ನ ಬಹುದಿನದ ಆಸೆ ಕೊನೆಗೂ ಸರಿಯಾದ ದಾರಿಯಲ್ಲಿ ಸಾಗಿದ್ದು, ಒಂದು ಕುತೂಹಲಕಾರಿ ವಿಷಯ ಸಿಕ್ಕಾಗ ಶಿವಣ್ಣ ಒಪ್ಪಿಗೆ ಸೂಚಿಸಿದರು ಎಂದು ಅರ್ಜುನ್ ಜನ್ಯ ಹೇಳಿದ್ದಾರೆ.

ಅರ್ಜುನ್ ಅವರು ಈ ಹಿಂದೆ ಶಿವಣ್ಣ ಮತ್ತು ರಮೇಶ್ ರೆಡ್ಡಿ ಅವರೊಂದಿಗೆ ಚಿತ್ರ ಮಾಡುವ ಕುರಿತು ಉತ್ಸಾಹ ವ್ಯಕ್ತಪಡಿಸಿದ್ದರು ಮತ್ತು ಅದನ್ನು 'ದೇವರ ಆಶೀರ್ವಾದ' ಎಂದು ಕರೆದಿದ್ದರು. ಈ ಚಿತ್ರದ ತಾರಾಗಣ ಮತ್ತು ತಂಡದ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಇನ್ನು ಪ್ರಸ್ತುತ ಎ ಹರ್ಷ ನಿರ್ದೇಶನದ ಮತ್ತು ತಮ್ಮ 125 ನೇ ಚಿತ್ರ ವೇದಾ ಚಿತ್ರದ ಚಿತ್ರೀಕರಣದಲ್ಲಿರುವ ಶಿವರಾಜ್‌ಕುಮಾರ್‌ಗೆ ಇದಲ್ಲದೆ ಮತ್ತೊಂದಷ್ಟು ಚಿತ್ರಗಳಲ್ಲಿ ತೊಡಹಿಸಿಕೊಂಡಿದ್ದಾರೆ. ಅಂತೆಯೇ ಇನ್ನೂ ಹೆಸರಿಸದ ಪ್ರಾಜೆಕ್ಟ್ ಮತ್ತು ಶ್ರೀನಿ ಅವರ ಮುಂಬರುವ ಚಿತ್ರ, ಘೋಸ್ಟ್‌ಗಾಗಿ ಸಚಿನ್ ರವಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.