andra pradesh

ಮೂರು ರಾಜಧಾನಿಗಳು ಆದೇಶ ಹಿಂಪಡೆದ ಬಳಿಕ ಮತ್ತೊಂದು ಸರ್ಕಾರಿ ಆದೇಶ ಹಿಂದಕ್ಕೆ ಪಡೆದ ಜಗನ್ ಸರ್ಕಾರ
ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿಗಳು ಎಂಬ ಆದೇಶವನ್ನು ಜಾರಿಮಾಡಿದ್ದ ಆಂಧ್ರ ಸರ್ಕಾರ ಮತ್ತೆ ವಾಪಾಸ್ ಪಡೆದುಕೊಂಡಿದ್ದೂ ತಿಳಿದ ವಿಚಾರವೇ ಆಗಿದೆ. ಆದರೆ ಈಗ ಮತ್ತೊಂದು ಸರ್ಕಾರಿ ಆದೇಶವನ್ನು ಹಿಂದಕ್ಕೆ ಪಡೆದಿದೆ.

ವಿಶಾಖಪಟ್ಟಣಂನಲ್ಲಿ ಎನ್ಕೌಂಟರ್: ಡಿಸಿಎಂ ಕಮಾಂಡರ್ ಸೇರಿ 6 ನಕ್ಸಲರ ಹತ್ಯೆ
ನಕ್ಸರು ಮತ್ತು ನಕ್ಸಲ್ ನಿಗ್ರಹ ಪಡೆ ನಡುವಿನ ಎನ್ಕೌಂಟರ್ ವೇಳೆ ಆರು ಮಂದಿ ನಕ್ಸಲರು ಹತರಾಗಿದ್ದಾರೆ.

ಆಂಧ್ರದಲ್ಲಿ ಲಾರಿಗೆ ಕಾರು ಡಿಕ್ಕಿ: 5 ತಿಂಗಳ ಮಗು ಸೇರಿ ನಾಲ್ವರು ದುರ್ಮರಣ
ಜಿಲ್ಲೆಯ ಪೆದ್ದಾಪುರಂ ಹೊರವಲಯದಲ್ಲಿ ಜಲ್ಲಿ ಕಲ್ಲು ತುಂಬಿದ್ದ ಲಾರಿಗೆ ನಿಯಂತ್ರಣ ತಪ್ಪಿದ ಕಾರೊಂದು ಡಿಕ್ಕಿ ಹೊಡೆದು ಅದರಲ್ಲಿ ಪ್ರಯಾಣಿಸುತ್ತಿದ್ದ ಐದು ತಿಂಗಳ ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ಐವರು ಗಾಯಗೊಂಡಿರುವ ಘಟನೆ ಗುರುವಾರ ಮುಂಜಾನೆ ಸಂಭವಿಸಿದೆ.

ಆಂಧ್ರಪ್ರದೇಶ: ಹೊಂಡಕ್ಕೆ ಟ್ರಾಕ್ಟರ್ ಟ್ರೈಲರ್ ಉರುಳಿ ಗ್ರಾಮದ ಸರಪಂಚ್ ಸೇರಿ ಐವರ ಸಾವು
ನೆಲ್ಲೂರು ಗ್ರಾಮೀಣ ಮಂಡಲದ ಗೊಲ್ಲಕಂದುಕೂರ್ ಗ್ರಾಮದಲ್ಲಿ ಟ್ರಾಕ್ಟರ್ ಟ್ರೈಲರ್ ಹೊಂಡಕ್ಕೆ ಉರುಳಿ ಅದರಲ್ಲಿ ಪ್ರಯಾಣಿಸುತ್ತಿದ್ದ ಐವರು ಕೃಷಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

ದುರಂತ ಸಂಭವಿಸಿದರೂ ಪಾಠ ಕಲಿಯದ ಅಧಿಕಾರಿಗಳು: ಆಸ್ಪತ್ರೆಗಳಲ್ಲಿ ಮುಂದುವರೆದ ಆಕ್ಸಿಜನ್ ಕೊರತೆ, ಸಂಕಷ್ಟದಲ್ಲಿ ಸೋಂಕಿತರು
ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಸಾವನ್ನಪ್ಪಿದ ದುರಂತ ಸಂಭವಿಸಿದರೂ ಇನ್ನೂ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಮುಂದುವರೆದಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸೋಂಕಿಗೊಳಗಾಗಿರುವ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗರ್ಭಿಣಿ ಅತ್ತಿಗೆ ಅಂತಲೂ ನೋಡದೆ ಪತಿಯ ತಮ್ಮಂದಿರಿಂದ ಕಿರುಕುಳ, ಮನನೊಂದು ಗೃಹಿಣಿ ಆತ್ಮಹತ್ಯೆ!
ಮದುವೆಯಾಗಿ ಒಂದು ವರ್ಷದಲ್ಲೇ ತಾನು ತಾಯಿಯಾಗುತ್ತಿರುವ ಖುಷಿ ಅನುಭವಿಸಬೇಕಿದ್ದ ಗೃಹಿಣಿಯೊಬ್ಬರು ಗಂಡ ಮತ್ತು ಆತನ ಸಹೋದರರ ಕಿರುಕುಳದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆಂಧ್ರಪ್ರದೇಶ:ಡಾಕ್ಟರ್ ಕೈಗಳನ್ನು ಸರಪಳಿಯಿಂದ ಕಟ್ಟಿ, ರಸ್ತೆ ಮೇಲೆ ಎಳೆದಾಡಿ ಹಲ್ಲೆಗೈದ ವೈಜಾಗ್ ಪೊಲೀಸರು
ವೈದ್ಯರಿಗೆ ಎನ್-95 ಮಾಸ್ಕ್ ಕೊರತೆ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದ ಕಾರಣಕ್ಕೆ ಎರಡು ತಿಂಗಳ ಹಿಂದೆ ಸರ್ಕಾರದಿಂದ ಅಮಾನತುಗೊಳಗಾಗಿದ್ದ ಅರವಳಿಕೆ ತಜ್ಞ ವೈದ್ಯರೊಬ್ಬರ ಕೈಗಳನ್ನು ಸರಪಳಿಯಿಂದ ಕಟ್ಟಿ ರಸ್ತೆ ಮೇಲೆ ಎಳೆದಾಡಿ ವಿಶಾಖಪಟ್ಟಣಂ ಪೊಲೀಸರು ಅಮಾನುಷವಾಗಿ ಹಲ್ಲೆ ಗೈದಿರುವ ಘಟನೆ ನಡೆದಿದೆ.

ಆಂಧ್ರ ಪ್ರದೇಶ: ಕೊರೋನಾ ವಿರುದ್ಧ ಹೋರಾಡಿ ಗೆದ್ದ ಮೂರು ವರ್ಷದ ಬಾಲಕಿ
ಸಾಂಕ್ರಾಮಿಕ ಪಿಡುಗಾದ ಕೊರೋನಾ ವೈರಸ್ ಸೋಂಕಿನ ವಿರುದ್ಧ ಮೂರು ವರ್ಷದ ಬಾಲಕಿ ಹೋರಾಡಿ ಜಯ ಸಾಧಿಸಿದ್ದಾಳೆ, ಮೊದಲ ಬಾರಿಗೆ ಪರೀಕ್ಷೆ ಮಾಡಿದಾಗ ಕೊರೋನಾ ಪಾಸಿಟಿವ್ ಪತ್ತೆಯಾಗಿತ್ತು, ಅನಂತರ ಬಾಲಕಿಯನ್ನು ಶಾಂತಿರಾಮ್ ಕೊರೋನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಂಧ್ರ ಪ್ರದೇಶ ಸಮಾಜ ಕಲ್ಯಾಣ ಸಚಿವರ ನಿವಾಸದ ಎದುರು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ!
ಸಮಾಜ ಕಲ್ಯಾಣ ಇಲಾಖೆ ಸಚಿವ ಪಿನಿಪೆ ವಿಶ್ವರೂಪ ಅವರ ನಿವಾಸದ ಹೊರಗೆ 25 ವರ್ಷದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

