ದೇಶ

ಮೂರು ರಾಜಧಾನಿಗಳು ಆದೇಶ ಹಿಂಪಡೆದ ಬಳಿಕ ಮತ್ತೊಂದು ಸರ್ಕಾರಿ ಆದೇಶ ಹಿಂದಕ್ಕೆ ಪಡೆದ ಜಗನ್ ಸರ್ಕಾರ

ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿಗಳು ಎಂಬ ಆದೇಶವನ್ನು ಜಾರಿಮಾಡಿದ್ದ ಆಂಧ್ರ ಸರ್ಕಾರ ಮತ್ತೆ ವಾಪಾಸ್ ಪಡೆದುಕೊಂಡಿದ್ದೂ ತಿಳಿದ ವಿಚಾರವೇ ಆಗಿದೆ. ಆದರೆ ಈಗ ಮತ್ತೊಂದು ಸರ್ಕಾರಿ ಆದೇಶವನ್ನು ಹಿಂದಕ್ಕೆ ಪಡೆದಿದೆ.

ಮೂರು ರಾಜಧಾನಿಗಳು ಆದೇಶ ಹಿಂಪಡೆದ ಬಳಿಕ ಮತ್ತೊಂದು ಸರ್ಕಾರಿ ಆದೇಶ ಹಿಂದಕ್ಕೆ ಪಡೆದ ಜಗನ್ ಸರ್ಕಾರ
ಜಗನ್ ರೆಡ್ಡಿ
Published On :

ಹೈದರಾಬಾದ್: ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿಗಳು ಎಂಬ ಆದೇಶವನ್ನು ಜಾರಿಮಾಡಿದ್ದ ಆಂಧ್ರ ಸರ್ಕಾರ ಮತ್ತೆ ವಾಪಾಸ್ ಪಡೆದುಕೊಂಡಿದ್ದೂ ತಿಳಿದ ವಿಚಾರವೇ ಆಗಿದೆ. ಆದರೆ ಈಗ ಮತ್ತೊಂದು ಸರ್ಕಾರಿ ಆದೇಶವನ್ನು ಹಿಂದಕ್ಕೆ ಪಡೆದಿದೆ. 

ಆಂಧ್ರಪ್ರದೇಶ ಎಪಿ ವಾರ್ಡ್ ಮಹಿಳಾ ಕಾರ್ಯದರ್ಶಿಗಳನ್ನು ಮಹಿಳಾ ಪೊಲೀಸರೆಂದು ನೇಮಕ ಮಾಡಲಾಗುವುದೆಂದು ಆದೇಶಿಸಿದ್ದ ಸರ್ಕಾರಿ ಆದೇಶ ಸಂಖ್ಯೆ 59, ಸರ್ಕಾರ ತಡೆಹಿಡಿದಿದೆ. ಅವರನ್ನು ಯಾವ ರೀತಿ ಬಳಸಿಕೊಳ್ಳಬೇಕೆಂದು ಆಲೋಚಿಸಿ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರ್ಕಾರಿ ನ್ಯಾಯವಾದಿ ಆಂಧ್ರಪ್ರದೇಶ ಹೈಕೋರ್ಟ್ ತಿಳಿಸಿದ್ದಾರೆ. 

ಸರ್ಕಾರಿ ಆದೇಶ ಸಂಖ್ಯೆ 59ರ ಮೇಲೆ ದಾಖಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈ ಕೋರ್ಟ್, ಈ ಸಂದರ್ಭದಲ್ಲಿ ಸರ್ಕಾರದ ತೀರ್ಮಾನವನ್ನು ನ್ಯಾಯವಾದಿಗಳು ಹೈಕೋರ್ಟ್ ದೃಷ್ಟಿಗೆ ತಂದರೂ ಸಂಪೂರ್ಣ ವಿವರಗಳೊಂದಿಗೆ ಮತ್ತೆ ಅಫಿಡವಿಟ್ ದಾಖಲು ಮಾಡಲಾಗುವುದೆಂದು ತಿಳಿಸಿದರು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯ ಪೀಠ ಮುಂದಿನ ವಾರಕ್ಕೆ ಮುಂದೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.