ಗರ್ಭಿಣಿ ಅತ್ತಿಗೆ ಅಂತಲೂ ನೋಡದೆ ಪತಿಯ ತಮ್ಮಂದಿರಿಂದ ಕಿರುಕುಳ, ಮನನೊಂದು ಗೃಹಿಣಿ ಆತ್ಮಹತ್ಯೆ!
ಮದುವೆಯಾಗಿ ಒಂದು ವರ್ಷದಲ್ಲೇ ತಾನು ತಾಯಿಯಾಗುತ್ತಿರುವ ಖುಷಿ ಅನುಭವಿಸಬೇಕಿದ್ದ ಗೃಹಿಣಿಯೊಬ್ಬರು ಗಂಡ ಮತ್ತು ಆತನ ಸಹೋದರರ ಕಿರುಕುಳದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೈದರಾಬಾದ್: ಮದುವೆಯಾಗಿ ಒಂದು ವರ್ಷದಲ್ಲೇ ತಾನು ತಾಯಿಯಾಗುತ್ತಿರುವ ಖುಷಿ ಅನುಭವಿಸಬೇಕಿದ್ದ ಗೃಹಿಣಿಯೊಬ್ಬರು ಗಂಡ ಮತ್ತು ಆತನ ಸಹೋದರರ ಕಿರುಕುಳದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರದಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಗೃಹಿಣಿಯನ್ನು ಆರ್ಷಿಯಾ ಎಂದು ಗುರುತಿಸಲಾಗಿದೆ. ಆರ್ಷಿಯಾ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಆಕೆಯನ್ನು 2019ರ ನವೆಂಬರ್ ನಲ್ಲಿ ಹಿಂದೂಪುರದ ಆರ್ಟಿಸಿ ಕಾಲೋನಿಯ ಸಾಫ್ಟ್ ವೇರ್ ಉದ್ಯೋಗಿ ನೂರುಲ್ಲಾಗೆ ಮದುವೆ ಮಾಡಿಕೊಟ್ಟಿದ್ದರು.
ಮಗಳು ಸುಖವಾಗಿರಲೆಂದು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದು ಅಲ್ಲದೆ 5 ಲಕ್ಷ ವರದಕ್ಷಿಣ ಮತ್ತು ಅರ್ಧ ಕೆಜಿ ಚಿನ್ನಾಭರಣವನ್ನು ಸಹ ನೀಡಿದ್ದರು. ಆದರೆ ಇಷ್ಟಕ್ಕೆ ತೃಪ್ತಿಯಾಗ ನೂರುಲ್ಲಾ ವರದಕ್ಷಿಣೆ ಮತ್ತು ಕಾರು ತರುವಂತೆ ಕಿರುಕುಳ ನೀಡುತ್ತಿದ್ದರು. ಇದೇ ಅಲ್ಲದೆ ಅಣ್ಣ ಜೊತೆ ಸೇರಿ ಸಹೋದರರು ಸಹ ಕಿರುಕುಳ ನೀಡಲು ತೊಡಗಿದರು.

ಇನ್ನು ಅರ್ಷಿಯಾ ಗರ್ಭೀಣಿ ಎಂದು ತಿಳಿದ ಮೇಲೆ ನುರೂಲ್ಲಾ ಅನುಮಾನಿಸಲು ಪ್ರಾರಂಭಿಸಿದ್ದಾನೆ. ಇದರಿಂದ ನಿತ್ಯ ಮನೆಯಲ್ಲಿ ಜಗಳವಾಗುತ್ತಿತ್ತು. ಇದರಿಂದ ನೊಂದ ಆರ್ಷಿಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸುದ್ದಿ ತಿಳಿದ ಆರ್ಷಿಯಾ ಪೋಷಕರು ಅಳಿಯ ನೂರುಲ್ಲನ ವಿರುದ್ಧ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


