Andhra Pradesh

ಜ.16 ರಂದು ಆಂಧ್ರ, ಕೇರಳಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, 4000 ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ
ಪ್ರಧಾನಿ ನರೇಂದ ಮೋದಿ ಜ.16 ರಿಂದ ಎರಡು ದಿನಗಳ ಕಾಲ ಆಂಧ್ರಪ್ರದೇಶ, ಕೇರಳ ಪ್ರವಾಸ ಕೈಗೊಳ್ಳಲಿದ್ದಾರೆ.

ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲು
ಪಕ್ಷದ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಮುಖಂಡರೊಬ್ಬರು ನೀಡಿದ ದೂರಿನ ಮೇರೆಗೆ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ನಾರಾಯಣ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಆಂಧ್ರ ಪ್ರದೇಶ: ಕಲ್ಲಿನಿಂದ ಜಜ್ಜಿ ವೈಎಸ್ಆರ್ಸಿ ಎಂಎಲ್ಸಿ ಸಹೋದರನ ಹತ್ಯೆ!
ಆಂಧ್ರ ಪ್ರದೇಶದ ವೈಎಸ್ ಆರ್ ಸಿ ಎಂಎಲ್ ಸಿ ಪೋತುಲ ಸುನೀತಾ ಅವರ ಸಹೋದರ ಪೂಜಾರಿ ರಾಮುಡು ಆಲಿಯಾಸ್ ಭೀಮಣ್ಣ ಅವರನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ.

ಪಕ್ಷ ಸೇರಿದ ಒಂದೇ ವಾರಕ್ಕೆ YSR Congress ಗೆ ಕ್ರಿಕೆಟಿಗ ಅಂಬಾಟಿ ರಾಯುಡು ರಾಜಿನಾಮೆ; ಕಾರಣ ಗೊತ್ತಾ?
ಇತ್ತೀಚೆಗಷ್ಟೇ ವೈಎಸ್ ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಕ್ರಿಕೆಟಿಗ ಅಂಬಾಟಿ ರಾಯುಡು ರಾಜಕೀಯ ಪ್ರವೇಶ ಮಾಡಿದ ಒಂದೇ ವಾರಕ್ಕೆ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.

ಮಾಜಿ ಸಚಿವ ಶ್ರೀರಾಮುಲು ಸಹೋದರಿ ಜೆ ಶಾಂತಾ YSR ಕಾಂಗ್ರೆಸ್ ಪಕ್ಷ ಸೇರ್ಪಡೆ
ಕರ್ನಾಟಕ ಮಾಜಿ ಸಚಿವ ಶ್ರೀರಾಮುಲು ಸಹೋದರಿ, ಮಾಜಿ ಸಂಸದೆ ಜೆ.ಶಾಂತಾ ಅವರು ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.

ಹೊಸ ವರ್ಷದ ದಿನವೇ ಇತಿಹಾಸ ಬರೆದ ISRO: ಎಕ್ಸ್ಪೋಸ್ಯಾಟ್ ಉಡಾವಣೆ ಯಶಸ್ವಿ
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೊಸ ವರ್ಷದ ಮೊದಲ ದಿನವೇ ಐತಿಹಾಸಿಕ ಉಡಾವಣೆ ಮಾಡಿದ್ದು, ಎಕ್ಸ್ಪೋಸ್ಯಾಟ್ ಉಪಗ್ರಹವನ್ನು ಹೊತ್ತ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಸಿ58 ನೌಕೆ ಯಶಸ್ವಿಯಾಗಿ ನಭಕ್ಕೆ ಹಾರಿದೆ.

ಆಂಧ್ರ ಪ್ರದೇಶದ ವಸತಿ ಯೋಜನೆಯಲ್ಲಿ 35,141 ಕೋಟಿ ರೂ. ವಂಚನೆ: ಪ್ರಧಾನಿಗೆ ಪವನ್ ಕಲ್ಯಾಣ್ ಪತ್ರ
ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರವು ಬಡವರಿಗೆ ಭೂಮಿ ಹಂಚಿಕೆ ಮತ್ತು ಮನೆಗಳನ್ನು ನಿರ್ಮಿಸುವ ನೆಪದಲ್ಲಿ ಭಾರಿ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿ ನಟ-ರಾಜಕಾರಣಿ ಮತ್ತು ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಕುತೂಹಲ ಕೆರಳಿಸಿದ ಡಿಕೆಶಿ-ಚಂದ್ರಬಾಬು ನಾಯ್ಡು ಭೇಟಿ: ಆಂಧ್ರಪ್ರದೇಶದಲ್ಲೂ ಶುರುವಾಯಿತೇ ತಂತ್ರಗಾರಿಕೆ?
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ್ದು, ಇಬ್ಬರ ಈ ಭೇಟಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಅಮೆರಿಕದಲ್ಲಿ ಭೀಕರ ಅಪಘಾತ: ಆಂಧ್ರಪ್ರದೇಶ ಶಾಸಕನ 6 ಮಂದಿ ಸಂಬಂಧಿಕರ ಸಾವು
ಅಮೆರಿಕದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಆಂಧ್ರಪ್ರದೇಶ ಶಾಸಕರೊಬ್ಬರ 6 ಮಂದಿ ಸಂಬಂಧಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

