ಆಂಧ್ರ ಪ್ರದೇಶ: ಕಲ್ಲಿನಿಂದ ಜಜ್ಜಿ ವೈಎಸ್ಆರ್ಸಿ ಎಂಎಲ್ಸಿ ಸಹೋದರನ ಹತ್ಯೆ!
ಆಂಧ್ರ ಪ್ರದೇಶದ ವೈಎಸ್ ಆರ್ ಸಿ ಎಂಎಲ್ ಸಿ ಪೋತುಲ ಸುನೀತಾ ಅವರ ಸಹೋದರ ಪೂಜಾರಿ ರಾಮುಡು ಆಲಿಯಾಸ್ ಭೀಮಣ್ಣ ಅವರನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ.

ಕರ್ನೂಲ್: ಆಂಧ್ರ ಪ್ರದೇಶದ ವೈಎಸ್ ಆರ್ ಸಿ ಎಂಎಲ್ ಸಿ ಪೋತುಲ ಸುನೀತಾ ಅವರ ಸಹೋದರ ಪೂಜಾರಿ ರಾಮುಡು ಆಲಿಯಾಸ್ ಭೀಮಣ್ಣ ಅವರನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ. ಕರ್ನೂಲ್ ಜಿಲ್ಲೆಯ ತುಗ್ಗಲಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ ಎಸ್ ಪೆಂಡೇಕಲ್ ಗ್ರಾಮದಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಮಾನಸಿಕ ಅಸ್ವಸ್ಥರಾಗಿದ್ದ 57 ವರ್ಷದ ಫುಟ್ ಪಾತ್ ಮೇಲೆ ಮಲಗಿದ್ದ ವೇಳೆ ಅವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ.
ಶನಿವಾರ ರಾತ್ರಿ 11.00 ಗಂಟೆ ಸುಮಾರಿನಲ್ಲಿ ರೈಲ್ವೆ ಜಂಕ್ಷನ್ನಲ್ಲಿ ರಾಮುಡು ಅವರ ಮೃತದೇಹ ಪತ್ತೆಯಾಗಿತ್ತು. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ರಾಮುಡು ಅವರ ಕಿರಿಯ ಸಹೋದರ ಪೂಜಾರಿ ಲೆನಿನ್, ಹತ್ಯೆಯಾದ ರಾಮುಡು ಅವಿವಾಹಿತರಾಗಿದ್ದರು ಮತ್ತು ಸುಮಾರು 30 ವರ್ಷಗಳ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ-ಲೆನಿನಿಸ್ಟ್)ದ ಪ್ರಮುಖ ಕಾರ್ಯಕರ್ತರಾಗಿದ್ದರು. 1984-85ರಲ್ಲಿ ರಾಡಿಕಲ್ ಸ್ಟೂಡೆಂಟ್ಸ್ ಯೂನಿಯನ್ (RSU) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ನಂತರ ನಕ್ಸಲರ ಗುಂಪಿಗೆ ಸೇರಿಕೊಂಡು, ಭುವನಾಸಿ ದಳದ ಕಮಾಂಡರ್ ಆಗಿ ನೇಮಕಗೊಂಡಿದ್ದರು ಎಂದು ತಿಳಿಸಿದರು.
1991ರಲ್ಲಿ ನಕ್ಸಲ ಕಾರ್ಯಾಚರಣೆಯಿಂದ ಅಸಮಾಧಾನಗೊಂಡಿದ್ದ ರಾಮುಡು ಪೊಲೀಸರ ಮುಂದೆ ಶರಣಾಗಿದ್ದರು. ಆಗಿನ ಜಿಲ್ಲಾ ಎಸ್ಪಿ ಮಹೇಂದರ್ ರೆಡ್ಡಿ ಅವರ ಮುಂದೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದರು. ನಂತರ, ರಾಮುಡು ಮಾನಸಿಕವಾಗಿ ಅಸ್ವಸ್ಥರಾದರು ಮತ್ತು ಕಳೆದ ಕೆಲವು ವರ್ಷಗಳಿಂದ ದೂರವಿದ್ದರು. ಏಕಾಂಗಿಯಾಗಿ ಇರುತ್ತಿದ್ದರು, ಯಾರೊಂದಿಗೂ ಮಾತನಾಡುತ್ತಿರಲಿಲ್ಲ ಎಂದು ಲೆನಿನ್ ವಿವರಿಸಿದರು.
ರಾಮುಡು ಅವರಿಗೆ ಯಾವುದೇ ಶತ್ರುಗಳಿಲ್ಲರಲಿಲ್ಲ. ಕೊಲೆಗೆ ಕಾರಣ ನಿಗೂಢವಾಗಿಯೇ ಉಳಿದಿದ್ದು, ಇದು ರಾಜಕೀಯ ಸೇಡಿನ ಪ್ರಕರಣವಲ್ಲ ಎಂದು ತುಗ್ಗಲಿ ಠಾಣೆ ಸಬ್ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಸ್ಪಷ್ಟಪಡಿಸಿದ್ದಾರೆ. ಭಿಕ್ಷುಕರು ಅಥವಾ ಮತ್ತೋರ್ವ ಮಾನಸಿಕ ಅಸ್ವಸ್ಥ ರಾಮುಡು ಅವರನ್ನು ಕೊಂದಿರಬಹುದು ಎಂದು ಶಂಕಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


