ambulance

ಬೆಡ್ ಗಳ ಕೊರತೆ; ಪ್ರವೇಶ ನಿರಾಕರಿಸಿದ 8 ಆಸ್ಪತ್ರೆಗಳು, 13 ಗಂಟೆ ಅಲೆದಾಡಿ ಆ್ಯಂಬುಲೆನ್ಸ್ ನಲ್ಲೇ ಪ್ರಾಣಬಿಟ್ಟ ಗರ್ಭಿಣಿ ಮಹಿಳೆ
ದೇಶಾದ್ಯಂತ ಮಾರಕ ಕೊರೋನಾ ವೈರಸ್ ಹಿನ್ನಲೆಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಎದುರಾಗಿದ್ದು, ಇದೇ ಸಮಸ್ಯೆ ಇದೀಗ ಉತ್ತರ ಪ್ರದೇಶದಲ್ಲಿ ಗರ್ಭಿಣಿ ಮಹಿಳೆಯ ಸಾವಿಗೆ ಕಾರಣವಾಗಿದೆ.

ಆಂಬ್ಯುಲೆನ್ಸ್ ಸಿಕ್ಕದೆ 7 ಕಿ.ಮೀ ದೂರ ನಡೆದು ಆಸ್ಪತ್ರೆ ತಲುಪಿದ ಕೊರೋನಾ ರೋಗಿ!
ಕೋವಿಡ್ 19 ರೋಗಿಯು ತನ್ನ ಮನೆಯಿಂದ ಥಾಣೆ ಜಿಲ್ಲೆಯ ಡೊಂಬಿವಿಲ್ಲಿ ಯಲ್ಲಿರುವ ನಿಗದಿತ ಕೋವಿಡ್ ಆಸ್ಪತ್ರೆಗೆ ತಲುಪಲು ಸುಮಾರು 7 ಕಿ.ಮೀ ದೂರ ನಡೆದು ಹೋಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರೋಗಿಯನ್ನು ಕರೆತರಲು ಯಾವುದೇ ಆಂಬ್ಯುಲೆನ್ಸ್ ಲಭ್ಯವಿಲ್ಲದೆ ಹಿನ್ನೆಲೆ ಆತ ನಡೆದೇ ಆಸ್ಪತ್ರೆ ತಲುಪಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಂಹಗಳ ಹಿಂಡಿನ ನಡುವೆ ಆಂಬುಲೆನ್ಸ್ ನಲ್ಲಿ ಮಹಿಳೆಗೆ ಹೆರಿಗೆ!
ಸಿಂಹಗಳ ಹಿಂಡು ಸುತ್ತುವರಿದ ಆಂಬುಲೆನ್ಸ್ ನಲ್ಲಿ ಮಹಿಳೆಗೆ ಹೆರಿಗೆಯಾಗಿರುವ ವಿಲಕ್ಷಣ ಘಟನೆ ಗುಜರಾತ್ ನ ಗಿರ್ ಸೋಮನಾಥ್ ನಲ್ಲಿ ವರದಿಯಾಗಿದೆ.

ಲಾಕ್ ಡೌನ್ ಮಧ್ಯೆ ಅಂಬ್ಯುಲೆನ್ಸ್ ನ್ನೇ ತನ್ನ ಮನೆಯನ್ನಾಗಿ ಮಾಡಿಕೊಂಡ ಯುವಕ! ಜನರಿಗೆ ಉಚಿತ ಸೇವೆ
ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಅಂಬ್ಯುಲೆನ್ಸ್ ನ್ನೇ ತನ್ನ ಮನೆಯನ್ನಾಗಿ ಮಾಡಿಕೊಂಡ ಯುವಕನೊಬ್ಬ, ಗರ್ಭಿಣಿಯರು, ವೃದ್ಧರನ್ನು ಗ್ರಾಮೀಣ ಪ್ರದೇಶಗಳಿಂದ ಪಟ್ಟಣದಲ್ಲಿರುವ ಆರೈಕೆಯ ಆಸ್ಪತ್ರೆಗಳಿಗೆ ಉಚಿತವಾಗಿ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಕರ್ನಾಟಕ ಪ್ರವೇಶಕ್ಕೆ ನಿರಾಕರಣೆ: 70ರ ವೃದ್ಧೆ ಸಾವು, ಆ್ಯಂಬುಲೆನ್ಸ್ ನಲ್ಲೆ ಹೆರಿಗೆ
ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಮೊಮ್ಮಗಳ ಮನೆಯಲ್ಲಿದ್ದ ಬಂಟ್ವಾಳ ನಿವಾಸಿ ಮಹಿಳೆಯೊಬ್ಬರನ್ನು ಚಿಕಿತ್ಸೆಗಾಗಿ ಕರೆತಂದಿದ್ದ ಆಂಬುಲೆನ್ಸ್‌ಗೆ ಶನಿವಾರ ಪೊಲೀಸರು ರಾಜ್ಯದ ಗಡಿ ಪ್ರವೇಶಿಸಲು ತಡೆಯೊಡ್ಡಿದ್ದು, ವಾಪಸ್ ತೆರಳಿದ್ದ ರೋಗಿ ಅಲ್ಲಿಯೇ ಮೃತಪಟ್ಟಿದ್ದಾರೆ

ಕೇರಳ- ಕರ್ನಾಟಕ ಗಡಿ ಬಂದ್: ಅಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ!
ಗರ್ಭಿಣಿ ಮಹಿಳೆಯಿದ್ದ ಅಂಬ್ಯುಲೆನ್ಸ್ ನ್ನು ಮಂಗಳೂರಿನತ್ತ ಬರಲು ಪೊಲೀಸರು ಬಿಡದ ಕಾರಣ ಬಿಹಾರದಿಂದ ವಲಸೆ ಬಂದಿದ್ದ ಗರ್ಭೀಣಿ ಅಂಬ್ಯುಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಗಡಿಯಲ್ಲಿ ರಸ್ತೆಯನ್ನು ಬಂದ್ ಮಾಡಲಾಗಿದೆ.

ಬೆಂಗಳೂರು: ಜೀವ ಉಳಿಸಬೇಕಿದ್ದ ಆ್ಯಂಬುಲೆನ್ಸ್ ಓನ್ ವೇಯಲ್ಲಿ ಬಂದು ಡಿಕ್ಕಿ, ಬೈಕ್ ಸವಾರರಿಬ್ಬರ ದುರ್ಮರಣ!
ಆ್ಯಂಬುಲೆನ್ಸ್ ಒಂದು ಓನ್ ವೇಯಲ್ಲಿ ವೇಗವಾಗಿ ಬರುತ್ತಿದ್ದಾಗ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಸಮಯಕ್ಕೆ ಸರಿಯಾಗಿ ಬಾರದ ಆ್ಯಂಬುಲೆನ್ಸ್: ಗರ್ಭಿಣಿ ನಟಿ, ಮಗು ಸಾವು!
ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬಾರದ ಹಿನ್ನಲೆಯಲ್ಲಿ ಖ್ಯಾತ ನಟಿ ಮತ್ತು ಆಕೆಯ ನವಜಾತ ಶಿಶು ಸಾವನ್ನಪ್ಪಿರುವ ಧಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಪ್ರವಾಹಪೀಡಿತ ಸೇತುವೆಯಲ್ಲಿ ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಧೈರ್ಯ ಮೆರೆದ ಬಾಲಕ
ಕೃಷ್ಣಾ ನದಿ ನೀರಿನ ಪ್ರವಾಹದಿಂದ ಮುಳುಗಿ ಹೋಗಿದ್ದ ಸೇತುವೆ ಮೇಲೆ ಕಷ್ಟಪಟ್ಟು ನಡೆದಾಡುತ್ತಾ ಬಾಲಕನೊಬ್ಬ ಆಂಬ್ಯುಲೆನ್ಸ್ ಗೆ ದಾರಿ ತೋರಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು ಬಾಲಕನ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

