ambulance

ಲಾರಿಗೆ ಆ್ಯಂಬುಲೆನ್ಸ್ ಡಿಕ್ಕಿ: ಸ್ಟಾಫ್ ನರ್ಸ್ ಸಾವು
ಗರ್ಭಿಣಿ ಮಹಿಳೆಯನ್ನು ಕರೆ ತರಲು ತೆರಳುತ್ತಿದ್ದ 108 ಆ್ಯಂಬುಲೆನ್ಸ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕರ್ತವ್ಯ ನಿರತ ಸ್ಟಾಫ್ ನರ್ಸ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಲಿಂಗಸುಗೂರ ತಾಲೂಕಿನ ಸರ್ಜಾಪುರ ಬಳಿ ಗುರುವಾರ ಮಧ್ಯರಾತ್ರಿ ಸಂಭವಿಸಿದೆ.

ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಆ್ಯಂಬುಲೆನ್ಸ್ ಸಿಬ್ಬಂದಿಗಳ ಜವಾಬ್ದಾರಿ: ಬಿಬಿಎಂಪಿ
ಕೊರೋನಾ ಸೋಂಕು ತಗುಲಿರುವ ಹಾಗೂ ತಗುಲಿರದ ರೋಗಿಗಳು ಆಸ್ಪತ್ರೆಗೆ ದಾಖಲಾಗಿರುವ ಕುರಿತು ಖಚಿತಪಡಿಸಿಕೊಳ್ಳುವುದು ಆ್ಯಂಬುಲೆನ್ಸ್ ಸಿಬ್ಬಂದಿಗಳ ಕರ್ತವ್ಯ ಎಂದು ಬಿಬಿಎಂಪಿ ಶುಕ್ರವಾರ ಹೇಳಿದೆ.

ಬೆಳಗಾವಿ: ಆ್ಯಂಬುಲೆನ್ಸ್'ಗೆ ಬೆಂಕಿ ಹಚ್ಚಿ ಬಂಧನಕ್ಕೊಳಗಾಗಿದ್ದ 22 ಮಂದಿ ಪೈಕಿ 13 ಮಂದಿಯಲ್ಲಿ ಕೊರೋನಾ!
ನಗರದ ಜಿಲ್ಲಾಸ್ಪತ್ರೆ (ಬಿಮ್ಸ್) ಆವರಣದಲ್ಲಿ ಜು.21ರಂದು ಆ್ಯಂಬುಲೆನ್ಸ್'ಗೆ ಬೆಂಕಿ ಹಚ್ಚಿ ಹಾಗೂ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ 22 ಮಂದಿ ಆರೋಪಿಗಳ ಪೈಕಿ 13 ಮಂದಿಯಲ್ಲಿ ಕೊರೋನಾ ದೃಢಪಟ್ಟಿದೆ.

ಸೋಂಕಿತ ವ್ಯಕ್ತಿ ಸಾವು: ಬಿಮ್ಸ್ ಆಸ್ಪತ್ರೆಯಲ್ಲಿ ದಾಂಧಲೆ, ಆ್ಯಂಬುಲೆನ್ಸ್'ಗೆ ಬೆಂಕಿ ಹಚ್ಚಿ ಆಕ್ರೋಶ
ಕೊರೋನಾ ಸೋಂಕಿನಿಂದ ಅಥಣಿ ಮೂಲದವರೆನ್ನಲಾದ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಕುಟುಂಬಸ್ಥರು ಬೆಳಗಾವಿ ಜಿಲ್ಲಾ ಆಸ್ಪತ್ರೆ (ಬಿಮ್ಸ್) ಆವರಣದಲ್ಲಿ ನಿಲ್ಲಿಸಿದ್ದ ಆ್ಯಂಬುಲೆನ್ಸ್'ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬುಧವಾರ ನಡೆದಿದೆ.

ಸ್ಥಳೀಯ ಸಂಘಟನೆಯ ಮಾದರಿ ಕಾರ್ಯ: ಕನಕಪುರ ರಸ್ತೆ ನಿವಾಸಿಗಳ ಯೋಗಕ್ಷೇಮಕ್ಕಾಗಿ ಆಂಬುಲೆನ್ಸ್ ಸೇವೆ
ಕೋವಿಡ್ ಸೋಂಕು ತಗುಲಿದ ಹಾಗೂ ಕೋವಿಡ್ ಶಂಕಿತಮತ್ತು ಕೋವಿಡ್ ಅಲ್ಲದ ರೋಗಿಗಳ ಸಾವಿಗೆ ಕಾರಣವಾಗುವ ಆಂಬುಲೆನ್ಸ್‌ಗಳ ಕೊರತೆಯ ಭಯಾನಕ ಕಥೆಗಳನ್ನು ಕೇಳಿದ ನಂತರ, ‘ಚೇಂಜ್ ಮೇಕರ್ಸ್ ಆಫ್ ಕನಕಪುರ ’ 3,700 ಕುಟುಂಬಗಳನ್ನು ಪೊರೆಯಲು ತಾನು ಪ್ರತ್ಯೇಕ ಆಂಬ್ಯುಲೆನ್ಸ್ ಅನ್ನು ಬಾಡಿಗೆಗೆ ಪಡೆದಿದೆ.

ಬೆಂಗಳೂರು: 3700 ಕುಟುಂಬಗಳಿಗಾಗಿ ಕಾದು ನಿಂತಿವೆ ಬಾಡಿಗೆ ಆ್ಯಂಬುಲೆನ್ಸ್!
ನಗರದಲ್ಲಿ ಆ್ಯಂಬುಲೆನ್ಸ್‌ಗಳ ಕೊರತೆಯು ರೋಗಿಗಳ ಸಾವಿಗೆ ಕಾರಣವಾದ ಅಮಾನವೀಯ ಘಟನೆಗಳು ಜನತೆಯನ್ನು ಕಂಗಾಲಾಗಿಸಿತ್ತು. ಇನ್ನು ಮುಂದೆ ಹೀಗೆ ಆಗಬಾರದಂದೆ ನಿವಾಸಿಗಳ ಕಲ್ಯಾಣ ಸಂಘಗಳ(ಆರ್‌ಡಬ್ಲ್ಯುಎ) ಗುಂಪೊಂದು 3700 ಕುಟುಂಬಗಳಿಗೆ ಪೂರೈಸಲು ಆಂಬ್ಯುಲೆನ್ಸ್ ಬಾಡಿಗೆಗೆ ಪಡೆದಿದೆ.

ಆ್ಯಂಬುಲೆನ್ಸ್'ಗೆ ಕಾದು ರಸ್ತೆಯಲ್ಲೇ ಪ್ರಾಣಬಿಟ್ಟ ವ್ಯಕ್ತಿ: 3 ಗಂಟೆಗಳ ಕಾಲ ಮಳೆಯಲ್ಲೇ ನೆನೆದ ಸೋಂಕಿತನ ಮೃತದೇಹ!
ಕೊರೋನಾ ಸೋಂಕು ದೃಢಪಟ್ಟ ವ್ಯಕ್ತಿ ಆಸ್ಪತ್ರೆಗೆ ಸೇರಲು ಬೆಳಿಗ್ಗೆಯೇ ಕರೆ ಮಾಡಿದರೂ ಸಂಜೆ ನಾಲ್ಕು ಗಂಟೆಯಾದರೂ ಬಾರದ ಆ್ಯಂಬುಲೆನ್ಸ್, ಸೋಂಕಿತ ಉಸಿರಾಡಲು ಆಗದೇ ಮೃತಪಟ್ಟ ನಾಲ್ಕು ತಾಸಿನ ಬಳಿಕ ಶವ ತೆಗೆದುಕೊಂಡು ಹೋಗಲು ಬಂದ ಮನಕಲುಕುವ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಆ್ಯಂಬುಲೆನ್ಸ್ ಗಾಗಿ ರಸ್ತೆಯಲ್ಲಿ 5 ತಾಸು ಕಾದು ನಿಂತ ಕೊರೋನಾ ಪೀಡಿತ ಪೊಲೀಸರು!
ಕೊರೋನಾ ಪಾಸಿಟಿವ್ ಬಂದಿದ್ದ ಗೃಹ ರಕ್ಷಕ ದಳದ ಐವರು ಪೊಲೀಸರು ಆಂಬುಲೆನ್ಸ್ ಗಾಗಿ ಬರೋಬ್ಬರಿ 5 ಗಂಟೆಗಳ ಕಾಲ ರಸ್ತೆಯಲ್ಲಿಯೇ ಕಾದು ನಿಂತಿದ್ದ ಘಟನೆ ಮಂಗಳೂರಿನ ಉಲ್ಲಾಳ ನಿಲ್ದಾಣದಲ್ಲಿ ನಡೆದಿದೆ.

ರಾಜ್ಯಸಭೆ ಚುನಾವಣೆಗೆ ಮತ ಹಾಕಲು ಆಸ್ಪತ್ರೆಯಿಂದ ಮತಗಟ್ಟೆಗೆ ಬಂದ ಗುಜರಾತ್ ಶಾಸಕ!
ರಾಜ್ಯಸಭಾ ಚುನಾವಣೆಗೆ ಗುಜರಾತ್ ನ ಮಟರ್ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೇಸರಿಸಿಂಗ್ ಜೆಸಂಗ್‌ಭಾಯ್ ಸೋಲಂಕಿ ಆಂಬ್ಯುಲೆನ್ಸ್ ನಲ್ಲಿ ಬಂದು ಮತ ಚಲಾಯಿಸಿದ ಘಟನೆ ನಡೆದಿದೆ.

