ರಾಜ್ಯ

ಬೆಂಗಳೂರು: 3700 ಕುಟುಂಬಗಳಿಗಾಗಿ ಕಾದು ನಿಂತಿವೆ ಬಾಡಿಗೆ ಆ್ಯಂಬುಲೆನ್ಸ್‌!

ನಗರದಲ್ಲಿ ಆ್ಯಂಬುಲೆನ್ಸ್‌ಗಳ ಕೊರತೆಯು ರೋಗಿಗಳ ಸಾವಿಗೆ ಕಾರಣವಾದ ಅಮಾನವೀಯ ಘಟನೆಗಳು ಜನತೆಯನ್ನು ಕಂಗಾಲಾಗಿಸಿತ್ತು. ಇನ್ನು ಮುಂದೆ ಹೀಗೆ ಆಗಬಾರದಂದೆ ನಿವಾಸಿಗಳ ಕಲ್ಯಾಣ ಸಂಘಗಳ(ಆರ್‌ಡಬ್ಲ್ಯುಎ) ಗುಂಪೊಂದು 3700 ಕುಟುಂಬಗಳಿಗೆ ಪೂರೈಸಲು ಆಂಬ್ಯುಲೆನ್ಸ್ ಬಾಡಿಗೆಗೆ ಪಡೆದಿದೆ.

ಬೆಂಗಳೂರು: 3700 ಕುಟುಂಬಗಳಿಗಾಗಿ ಕಾದು ನಿಂತಿವೆ ಬಾಡಿಗೆ ಆ್ಯಂಬುಲೆನ್ಸ್‌!
ಆ್ಯಂಬುಲೆನ್ಸ್
Published On :

ಬೆಂಗಳೂರು: ನಗರದಲ್ಲಿ ಆ್ಯಂಬುಲೆನ್ಸ್‌ಗಳ ಕೊರತೆಯು ರೋಗಿಗಳ ಸಾವಿಗೆ ಕಾರಣವಾದ ಅಮಾನವೀಯ ಘಟನೆಗಳು ಜನತೆಯನ್ನು ಕಂಗಾಲಾಗಿಸಿತ್ತು. ಇನ್ನು ಮುಂದೆ ಹೀಗೆ ಆಗಬಾರದಂದೆ ನಿವಾಸಿಗಳ ಕಲ್ಯಾಣ ಸಂಘಗಳ(ಆರ್‌ಡಬ್ಲ್ಯುಎ) ಗುಂಪೊಂದು 3700 ಕುಟುಂಬಗಳಿಗೆ ಪೂರೈಸಲು ಆಂಬ್ಯುಲೆನ್ಸ್ ಬಾಡಿಗೆಗೆ ಪಡೆದಿದೆ.

ಐಸಿಯೂ ತರಬೇತಿ ಪಡೆದ ನರ್ಸ್ ಮತ್ತು ಆಂಬ್ಯುಲೆನ್ಸ್ ಚಾಲಕರು ಸರ್ವಸನ್ನದ್ಧ ಸ್ಥಿತಿಯಲ್ಲಿದ್ದು ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಕನಕಪುರ ರಸ್ತೆಯಲ್ಲಿ ಆಂಬ್ಯುಲೆನ್ಸ್ ಗಳನ್ನು ನಿಲ್ಲಿಸಲಾಗಿದೆ. ಇನ್ನು ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳೂ 60 ರುಪಾಯಿ ನಿಗದಿ ಮಾಡಲಾಗಿದೆ. 

ಆಂಬುಲೆನ್ಸ್ ಒಂದು ಗಂಟೆ ತಡವಾಗಿ ಬಂದಿದ್ದರಿಂದ ನಿವಾಸಿಯೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದರು. ಇನ್ನೊಂದೆಡೆ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಎಂಬುವರಿಗೆ ತಕ್ಷಣಕ್ಕೆ ಆ್ಯಂಬುಲೆನ್ಸ್ ಸಿಕ್ಕಿರಲಿಲ್ಲ. ಕಾರಣ ಎಲ್ಲಾ ಆಸ್ಪತ್ರೆಗಳು ಅದು COVID-19 ಎಂದು ಭಯಪಟ್ಟಿದ್ದರು. ಅಂತಿಮವಾಗಿ, ಕುಟುಂಬವು ಅವರನ್ನು ಕಾರಿನಲ್ಲಿ ಕರೆದೊಯ್ಯಬೇಕಾಗಿತ್ತು, ಅಲ್ಲಿ ಅವರನ್ನು ಕೋವಿಡ್ ಪರೀಕ್ಷೆ ನಡೆಸಿ ನೆಗೆಟಿವ್ ಎಂದು ವರದಿ ಬಂದ ಮೇಲೆ ಅವರಿಗೆ ಆಂಜಿಯೋಪ್ಲ್ಯಾಸ್ಟಿಗಾಗಿ ದಾಖಲಿಸಿಕೊಳ್ಳಲಾಗಿತ್ತು ಎಂದು RWA ಫೆಡರೇಶನ್ ಸದಸ್ಯ ಅಬ್ದುಲ್ ಅಲೀಮ್ ಹೇಳಿದರು.

ರೋಗಿಗಳಿಗೆ ಆಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕರೂ ಅತಿಯಾದ ವೆಚ್ಚವನ್ನು ವಿಧಿಸುತ್ತಿದ್ದಾರೆ ಎಂಬ ಸುದ್ದಿಗಳು ಬಿತ್ತರಗೊಂಡ ನಂತರ ಅಪಾರ್ಟ್ಮೆಂಟ್ ನಿವಾಸಿಗಳು ಸೇರಿದಂತೆ ನಿವಾಸಿಗಳು ತುರ್ತು ಪರಿಸ್ಥಿತಿಗಾಗಿ ಸಜ್ಜಾಗಲು ನಿರ್ಧರಿಸಿದರು.

ಇದಕ್ಕೆ ತಿಂಗಳಿಗೆ ಒಟ್ಟು 2 ಲಕ್ಷ ರೂ. ವೆಚ್ಚವಾಗಲಿದೆ. ಆಂಬ್ಯುಲೆನ್ಸ್‌ನಲ್ಲಿ ವೆಂಟಿಲೇಟರ್, ಅಂಬು ಬ್ಯಾಗ್, ಸಕ್ಷನ್ ಉಪಕರಣ, ಬೈನ್ ಸರ್ಕ್ಯೂಟ್, ಪಿಪಿಇ ಕಿಟ್‌ಗಳು, ಕಾರ್ಡಿಯಾಕ್ ಮಾನಿಟರ್, ಇನ್ಫ್ಯೂಷನ್ ಪಂಪ್ ಮತ್ತು ಜೆಕೆ ಆಂಬ್ಯುಲೆನ್ಸ್ ಸೇವೆ ಒದಗಿಸುವ ಆಮ್ಲಜನಕ ಸಿಲಿಂಡರ್ ಅಳವಡಿಸಲಾಗಿದೆ.

ಬಾಡಿಗೆ ಆ್ಯಂಬುಲೆನ್ಸ್ ಗಳನ್ನು ಸಾರಕ್ಕಿ ಸಿಗ್ನಲ್‌ನಿಂದ ನೈಸ್ ರಸ್ತೆ ಜಂಕ್ಷನ್ ವರೆಗಿನ ನಿವಾಸಿಗಳಿಗೆ  ಪೂರೈಸಲಾಗುತ್ತದೆ. ಮೂರು 8 ಗಂಟೆಗಳ ಪಾಳಿಯಲ್ಲಿ ಮೂವರು ನರ್ಸ್ ಮತ್ತು 12 ಗಂಟೆಗಳ ಪಾಳಿಯಲ್ಲಿ 2 ಚಾಲಕರು ಕಾರ್ಯ ನಿರ್ವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.