AIADMK

ತ.ನಾಡು ವಿಧಾನಸಭೆಯಲ್ಲಿ ಹೈಡ್ರಾಮಾ; ಮತದಾನದ ನಡುವೆಯೇ ಸ್ಟಾಲಿನ್ ಭಾಷಣ
ಕುತೂಹಲ ಕೆರಳಿಸಿರುವ ಪಳನಿ ಸ್ವಾಮಿ ವಿಶ್ವಾಸ ಮತ ಯಾಚನೆ ಸಂಬಂಧ ತಮಿಳುನಾಡು ವಿಶೇಷ ಅಧಿವೇಶನ ಆರಂಭಗೊಂಡಿದ್ದು, ಸಿಎಂ ಪಳನಿ ಸ್ವಾಮಿ ರಾಜ್ಯಪಾಲರ ಸೂಚನೆಯಂತೆ ವಿಶ್ವಾಸ ಮತ ನಿರ್ಣಯ ಮಂಡಿಸಿದ್ದಾರೆ.

ಸಿಎಂ ಪಳನಿ ಸ್ವಾಮಿಗೆ ಅಗ್ನಿ ಪರೀಕ್ಷೆ; ತ.ನಾಡು ರಾಜಕೀಯ ಮೇಲಾಟದ ಫೈನಲ್ ಗೆ ಕ್ಷಣಗಣನೆ
ಮಾಜಿ ಸಿಎಂ ಜಯಲಲಿತಾ ಅವರ ಸಾವು ಮತ್ತು ಶಶಿಕಲಾ ವಿರುದ್ಧ ಪನ್ನೀರ್ ಸೆಲ್ವಂ ಬಂಡಾಯವೇಳುವುದರೊಂದಿಗೆ ಭುಗಿಲೆದ್ದ ತಮಿಳುನಾಡು ರಾಜಕೀಯ ಬಿಕ್ಕಟ್ಟು ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ನೂತನ ಸಿಎಂ ಎಡಪ್ಪಾಡಿ ಪಳನಿ ಸ್ವಾಮಿ ಶನಿವಾರ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ.

ತಮಿಳುನಾಡು: ವಿಶ್ವಾಸ ಮತ ಗೆದ್ದ ಸಿಎಂ ಪಳನಿ ಸ್ವಾಮಿ
ತೀವ್ರ ಕುತೂಹಲ ಕೆರಳಿಸಿದ್ದ ತಮಿಳುನಾಡು ರಾಜಕೀಯ ಬಿಕ್ಕಟ್ಟು ಕೊನೆಗೂ ಅಂತ್ಯ ಕಂಡಿದ್ದು, ನಿರೀಕ್ಷೆಯಂತೆಯೇ ಸಿಎಂ ಪಳನಿ ಸ್ವಾಮಿ ವಿಶ್ವಾಸ ಮತ ಗೆದ್ದಿದ್ದಾರೆ ಎಂದು ತಿಳಿದುಬಂದಿದೆ.

ಅಸಂವಿಧಾನಿಕ ವಿಶ್ವಾಸ ಮತಯಾಚನೆ, ಗುಪ್ತ ಮತದಾನ ನಡೆದಿದ್ದರೆ ಫಲಿತಾಂಶವೇ ಬೇರೆ: ಪನ್ನೀರ್ ಸೆಲ್ವಂ
ಸ್ಪೀಕರ್ ಧನಪಾಲ್ ಅವರು ಅವಿಸಂವಿಧಾನಿಕವಾಗಿ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ನಡೆಸಿದ್ದಾರೆ, ನಮ್ಮ ಬೇಡಿಕೆಯಂತೆ ಗುಪ್ತ ಮತದಾನ ನಡೆದಿದ್ದರೆ ಫಲಿತಾಂಶವೇ ಬೇರೆ ಇರುತ್ತಿತ್ತು ಎಂದು ಪನ್ನೀರ್ ಸೆಲ್ವಂ ಅವರು ಹೇಳಿದ್ದಾರೆ.

ಮತ್ತೆ ಕಲಾಪಕ್ಕೆ ಡಿಎಂಕೆ ಅಡ್ಡಿ, ಕಲಾಪ ಮಧ್ಯಾಹ್ನ 3ಕ್ಕೆ ಮುಂದೂಡಿಕೆ
ಗುಪ್ತಮತದಾನಕ್ಕೆ ಆಗ್ರಹಿಸಿ ಡಿಎಂಕೆ ನಡೆಸುತ್ತಿದ್ದ ಪ್ರತಿಭಟನೆ ಮಿತಮೀರಿದ ಹಿನ್ನಲೆಯಲ್ಲಿ ತಮಿಳುನಾಡು ವಿಧಾನಸಭೆ ಸ್ಪೀಕರ್ ಧನಪಾಲ್ ಅವರು ಡಿಎಂಕೆ ಶಾಸಕರನ್ನು ಹೊರಗಿಟ್ಟು ಮತದಾನ ನಡೆಸಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಬಹುಮತ ಸಾಬೀತಿಗೆ ವೇದಿಕೆ ಸಿದ್ಧ; ಸಿಎಂ ಪಳನಿ ಸ್ವಾಮಿಯಿಂದ ಶಶಿಕಲಾ ಭೇಟಿ ಸಾಧ್ಯತೆ
ಎಐಎಡಿಎಂಕೆ ಬಿಕ್ಕಟ್ಟಿನ ನಡುವೆಯೇ ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದ ಶಶಿಕಲಾ ಭಂಟ ಎಡಪಾಡಿ ಪಳನಿ ಸ್ವಾಮಿ ನಿರೀಕ್ಷೆಯಂತೆಯೇ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಶುಕ್ರವಾರ ಶಶಿಕಲಾ ಅವರನ್ನು ಭೇಟಿ ಮಾಡಿ ಚರ್ಚಿಸುವ ಸಾಧ್ಯತೆ ಇದೆ.

ಎಐಎಡಿಎಂಕೆ ಶಶಿಕಲಾ ಕುಟುಂಬ ತೆಕ್ಕೆಗೆ ಹೋಗಲು ಬಿಡುವುದಿಲ್ಲ: ಪನ್ನೀರ್'ಸೆಲ್ವಂ
ಎಐಎಡಿಎಂಕೆ ಶಶಿಕಲಾ ಕುಟುಂಬ ತೆಕ್ಕೆಗೆ ಹೋಗಲು ಯಾವುದೇ ಕಾರಣಕ್ಕೂ ನಮ್ಮ ಬಣ ಬಿಡುವುದಿಲ್ಲ ಎಂದು ತಮಿಳುನಾಡು ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರು ಗುರುವಾರ ಹೇಳಿದ್ದಾರೆ...

ಶಶಿಕಲಾ, ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ಅಪಹರಣ ದೂರು ದಾಖಲಿಸಿದ ಎಐಎಡಿಎಂಕೆ ಶಾಸಕ!
ಪರಪ್ಪನ ಅಗ್ರಹಾರ ಜೈಲಿನತ್ತ ಮುಖ ಮಾಡಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಅವರ ವಿರುದ್ಧ ಅಪಹರಣ ದೂರು ದಾಖಲಾಗಿದ್ದು, ಸ್ವತಃ ಎಐಎಡಿಎಂಕೆಯ ಶಾಸಕ ಶರವಣನ್ ಶಶಿಕಲಾ ಮತ್ತು ಪಳನಿ ಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ.

ಜಯಲಲಿತಾ ಉಚ್ಛಾಟಿಸಿದ್ದ ತನ್ನ ಕುಟುಂಬದ ಇಬ್ಬರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡ ಶಶಿಕಲಾ
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ...

