ದೇಶ

ಶಶಿಕಲಾ, ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ಅಪಹರಣ ದೂರು ದಾಖಲಿಸಿದ ಎಐಎಡಿಎಂಕೆ ಶಾಸಕ!

ಪರಪ್ಪನ ಅಗ್ರಹಾರ ಜೈಲಿನತ್ತ ಮುಖ ಮಾಡಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಅವರ ವಿರುದ್ಧ ಅಪಹರಣ ದೂರು ದಾಖಲಾಗಿದ್ದು, ಸ್ವತಃ ಎಐಎಡಿಎಂಕೆಯ ಶಾಸಕ ಶರವಣನ್ ಶಶಿಕಲಾ ಮತ್ತು ಪಳನಿ ಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ.

ಶಶಿಕಲಾ, ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ಅಪಹರಣ ದೂರು ದಾಖಲಿಸಿದ ಎಐಎಡಿಎಂಕೆ ಶಾಸಕ!
ಸಂಗ್ರಹ ಚಿತ್ರ
Published On :

ಚೆನ್ನೈ: ಪರಪ್ಪನ ಅಗ್ರಹಾರ ಜೈಲಿನತ್ತ ಮುಖ ಮಾಡಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಅವರ ವಿರುದ್ಧ ಅಪಹರಣ ದೂರು ದಾಖಲಾಗಿದ್ದು, ಸ್ವತಃ ಎಐಎಡಿಎಂಕೆಯ ಶಾಸಕ ಶರವಣನ್ ಶಶಿಕಲಾ ಮತ್ತು  ಪಳನಿ ಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ.

ಎಐಎಡಿಎಂಕೆ ಪಕ್ಷದ ಮಧುರೈ ಕ್ಷೇತ್ರದ ಶಾಸಕ ಎಸ್ ಶರವಣನ್ ಅವರು ಕೂವತ್ತೂರು ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದು, ಈ ಸಂಬಂದ ಶಶಿಕಲಾ ಮತ್ತು ಎಡಪಾಡಿ ಕೆ ಪಳನಿ ಸ್ವಾಮಿ ವಿರುದ್ಧ ಎಫ್ ಐಆರ್  ಕೂಡ ದಾಖಲಾಗಿದೆ ಎಂದು ತಿಳಿದುಬಂದಿದೆ.

ದೂರಿನಲ್ಲಿ, ವಿಕೆ ಶಶಿಕಲಾ ಮತ್ತು ಎಡಪಾಡಿ ಪಳನಿ ಸ್ವಾಮಿ ಅವರು ತಮ್ಮ ಬೆಂಬಲಿಗರ ನೆರವಿನಿಂದ ಬಲವಂತವಾಗಿ ನನ್ನನ್ನು ಕಾಂಚಿಪುರಂನ ಕೊವತ್ತೂರಿನಲ್ಲಿರುವ ಗೋಲ್ಡನ್ ಬೇ ರೆಸಾರ್ಟ್ ಗೆ ಎಳೆದೊಯ್ದಿದ್ದರು. ಅಲ್ಲಿ ತಮ್ಮನ್ನು  ಬಲವಂತವಾಗಿ ಕೂಡಿ ಹಾಕಲಾಗಿತ್ತು. ತಪ್ಪಿಸಿಕೊಳ್ಳಲು ಯತ್ನಿಸಿದಂತೆ ಗೂಂಡಾಗಳ ಮೂಲಕ ಬೆದರಿಕೆ ಹಾಕಲಾಗಿತ್ತು. ರೆಸಾರ್ಟ್ ಗೆ ತೆರಳುತ್ತಿದ್ದಂತೆಯೇ ನಮ್ಮ ಮೊಬೈಲ್ ಗಳನ್ನು ಕಸಿಯಲಾಗಿತ್ತು. ಅಲ್ಲಿ ಏನಾಗುತ್ತಿದೆ ಎಂಬುದೇ  ಕ್ಷಣಕಾಲ ತಿಳಿಯಲಿಲ್ಲ. ಬಳಿಕ ತಮ್ಮನ್ನು ಬಲವಂತವಾಗಿ ಒತ್ತೆಯಾಳುಗಳಾಗಿ ಇಟ್ಟುಕೊಳ್ಳಲಾಗಿದೆ ಎಂಬುದು ತಿಳಿಯಿತು. ಇದಾದ ಬಳಿಕ ಎಲ್ಲರ ಗಮನ ಬೇರೆಡೆ ಇದ್ದಾಗ ನಾನು ಟಿಶರ್ಟ್ ಮತ್ತು ಶಾರ್ಟ್ಸ್ ನಲ್ಲೇ ರೆಸಾರ್ಟ್ ಗೋಡೆ  ಹಾರಿ ಅಲ್ಲಿಂದ ತಪ್ಪಿಸಿಕೊಂಡು ನಮ್ಮ ಮುಖ್ಯಮಂತ್ರಿಗಳ ಮನೆಗೆ ದೌಡಾಯಿಸಿದೆ ಎಂದು ಶರವಣನ್ ಆರೋಪಿಸಿದ್ದಾರೆ.

ಶಾಸಕ ಶರವಣನ್ ನೀಡಿರುವ ದೂರಿನ ಅನ್ವಯ ಇದೀಗ ಕೊವತ್ತೂರು ಠಾಣೆ ಪೊಲೀಸರು ವಿಕೆ ಶಶಿಕಲಾ ಮತ್ತು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಎಡಪ್ಪಾಡಿ ಪಳನಿ ಸ್ವಾಮಿ ವಿರುದ್ಧ ಐಪಿಸಿ ಸೆಕ್ಷನ್ 342, 343, 353, 365,  506/1ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ಎಫ್ ಐಆರ್ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.