Agriculture

ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ, ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ: ರೈತರಿಗೆ ಪ್ರಧಾನಿ ಮೋದಿ ಭರವಸೆ
ಕೃಷಿ ಬೆಳೆಗಳ ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ, ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಪ್ರಧಾನಿ ಮೋದಿ ರೈತರಿಗೆ ಭರವಸೆ ನೀಡಿದ್ದಾರೆ.

ಕೃಷಿ, ಕೃಷಿಯೇತರ ಕ್ಷೇತ್ರಕ್ಕೆ 39,300 ಕೋಟಿ ರೂ. ಸಾಲ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಈ ವರ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಕೃಷಿ, ಕೃಷಿಯೇತರ ಕ್ಷೇತ್ರಕ್ಕೆ 39 ಸಾವಿರದ 300 ಕೋಟಿ ಸಾಲವನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಕೊರೋನಾ ಕಾಲದಲ್ಲಿ ಹೆಚ್ಚಿದ ಕೃಷಿ ಚಟುವಟಿಕೆ: ರಾಜ್ಯದಲ್ಲಿ ಅಧಿಕ ಫಸಲಿನ ನಿರೀಕ್ಷೆ
ಕೊರೋನಾ ಲಾಕ್ ಡೌನ್ ಕೆಲವರ ಪಾಲಿಗೆ ಶಾಪವಾಗಿದ್ದರೇ ಮತ್ತೆ ಕೆಲವರ ಪಾಲಿಗೆ ವರವಾಗಿದೆ, ಮುಂಗಾರು ಉತ್ತಮವಾಗಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ಮುಳುಗಿದ್ದಾರೆ, ಖಾರೀಫ್ ಋತುವಿನಲ್ಲಿ ಕೃಷಿ ಚಟುವಟಿಕೆಗಳು ಸಕ್ರಿಯವಾಗಿವೆ.

ಕೊರೋನಾ ಎಫೆಕ್ಟ್: 'ರೈತರು ಬೇಕಾಗಿದ್ದಾರೆ'; ಕೃಷಿ ಕ್ಷೇತ್ರದತ್ತ ಹೊರಳುತ್ತಿದೆ ಜನರ ಆಸಕ್ತಿ!
ಪ್ರತಿ ಸಮಸ್ಯೆಯೊಳಗೆ ಒಂದು ಅವಕಾಶವಿರುತ್ತದೆ ಎನ್ನುತ್ತಾರೆ. ಕೋವಿಡ್-19 ಲಾಕ್ ಡೌನ್ ಹಲವರಿಗೆ ಹಲವು ರೀತಿಯಲ್ಲಿ ಕಷ್ಟಗಳನ್ನು ತಂದೊಡ್ಡಿರಬಹುದು. ಆದರೆ ಇದು ಕೆಲವರ ಬಾಳಲ್ಲಿ ಹೊಸ ಅವಕಾಶಕ್ಕೆ, ಹೊಸ ಚಿಂತನೆಗೆ ದಾರಿ ಮಾಡಿಕೊಟ್ಟಿದೆ. ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಇದು ಸಾಕಷ್ಟು ಅವಕಾಶಗಳನ್ನು ಹೊಸದಾಗಿ ಸೃಷ್ಟಿಮಾಡುತ್ತಿದೆ.

ಲಾಕ್ ಡೌನ್: ಕೃಷಿ ಯಂತ್ರೋಪಕರಣ ಅಂಗಡಿಗಳಿಗೆ ವಿನಾಯಿತಿ
ಕೊರೋನಾ ವೈರಸ್ ಲಾಕ್ ಡೌನ್ ಮಧ್ಯೆ ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ರಾಜ್ಯದಲ್ಲಿ ಕೃಷಿ ಯಂತ್ರೋಪಕರಣಗಳ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ.

21 ಲಾಕ್ ಡೌನ್ ಅವಧಿಯಲ್ಲಿ ಕೆಲವು ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಸಡಿಲಿಕೆ
ಕೊರೊನಾ ವೈರಾಣು ಸೋಂಕು ನಿಗ್ರಹ ಸಂಬಂಧ ದೇಶಾದ್ಯಂತ 21 ದಿನಗಳ ಲಾಕ್ ಡೌನ ಸಂದರ್ಭದಲ್ಲಿ ಕೆಲವು ಕೃಷಿ ಚಟುವಟಿಕೆಗಳಿಗೆ ವಿನಾಯಿತಿ ನೀಡಿ ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಮಾರ್ಗಸೂಚಿ ಪ್ರಕಟಿಸಿದೆ.

ರಾಜ್ಯ ಬಜೆಟ್ 2020: ನೆರೆ ಪರಿಹಾರಕ್ಕೆ ಆದ್ಯತೆ, ಸಾವಯವ ಕೃಷಿಗೆ ಪ್ರೋತ್ಸಾಹ ಎಂದ ಸಿಎಂ
7ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು ರೈತ ಪರ ಬಜೆಟ್ ಮಂಡಿಸುವುದಾಗಿ ಘೋಷಣೆ ಮಾಡಿದ್ದು, ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವುದಾಗಿ ಹೇಳಿದ್ದಾರೆ.

ರಾಜ್ಯ ಬಜೆಟ್: ಆರ್ಥಿಕ ಕೊರತೆ ನಡುವಲ್ಲೂ ರಾಜ್ಯದ ಸಂಪೂರ್ಣ ಅಭಿವೃದ್ಧಿಯತ್ತ ಸಿಎಂ ಚಿತ್ತ
ರಾಜ್ಯ ಬಜೆಟ್ ಮಂಡನೆಗೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿಯಿದ್ದು, ಕೈಗಾರಿಕಿಯಿಂದ ಕೃಷಿಯವರೆಗೂ ಎಲ್ಲಾ ವಲಯಗಳೂ ಸೇರಿದಂತೆ ರಾಜ್ಯದ ಸಂಪೂರ್ಣ ಅಭಿವೃದ್ಧಿಯತ್ತ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗಮನ ಹರಿಸಿದ್ದಾರೆ.

ಕೃಷಿಗೆ ವಿದ್ಯುತ್ ಸಂಪರ್ಕ ಕಲ್ಪಿಸದ ಚೆಸ್ಕಾಂ ಸಿಬ್ಬಂದಿ.. ವಿಷದ ಬಾಟಲಿ ಹಿಡಿದು ರೈತ ಕುಟುಂಬ ಹೈಡ್ರಾಮಾ!
ನಾಲ್ಕು ತಿಂಗಳಿಂದ ಜಮೀನಿಗೆ ವಿದ್ಯುತ್ ಸಂಪರ್ಕ ಇಲ್ಲದಿದ್ದರಿಂದ ನೀರು ಹಾಯಿಸಲಾಗದೇ ಎರಡು ಎಕರೆ ಅರಿಶಿಣ ಫಸಲು ಒಣಗಿದೆ. ಚೆಸ್ಕಾಂ ಸಿಬ್ಬಂದಿಗೆ ಲಂಚ ನೀಡಿದರೂ ಸಂಪರ್ಕ ಮಾತ್ರ ಕೊಡದೇ ಸತಾಯಿಸುತ್ತಿದ್ದಾರೆ. ಸಮಸ್ಯೆಗೆ ಪರಿಹರಿಸದಿದ್ದರೇ ವಿಷ ಸೇವಿಸುವುದಾಗಿ ಪಟ್ಟು ಹಿಡಿದು ಕುಳಿತರು.

