ಕೃಷಿಗೆ ವಿದ್ಯುತ್ ಸಂಪರ್ಕ ಕಲ್ಪಿಸದ ಚೆಸ್ಕಾಂ ಸಿಬ್ಬಂದಿ.. ವಿಷದ ಬಾಟಲಿ ಹಿಡಿದು ರೈತ ಕುಟುಂಬ ಹೈಡ್ರಾಮಾ!
ನಾಲ್ಕು ತಿಂಗಳಿಂದ ಜಮೀನಿಗೆ ವಿದ್ಯುತ್ ಸಂಪರ್ಕ ಇಲ್ಲದಿದ್ದರಿಂದ ನೀರು ಹಾಯಿಸಲಾಗದೇ ಎರಡು ಎಕರೆ ಅರಿಶಿಣ ಫಸಲು ಒಣಗಿದೆ. ಚೆಸ್ಕಾಂ ಸಿಬ್ಬಂದಿಗೆ ಲಂಚ ನೀಡಿದರೂ ಸಂಪರ್ಕ ಮಾತ್ರ ಕೊಡದೇ ಸತಾಯಿಸುತ್ತಿದ್ದಾರೆ. ಸಮಸ್ಯೆಗೆ ಪರಿಹರಿಸದಿದ್ದರೇ ವಿಷ ಸೇವಿಸುವುದಾಗಿ ಪಟ್ಟು ಹಿಡಿದು ಕುಳಿತರು.

ಚಾಮರಾಜನಗರ: ಎಷ್ಟೇ ಮನವಿ ಮಾಡಿದರೂ ಜಮೀನಿಗೆ ವಿದ್ಯುತ್ ಸಂಪರ್ಕ ನೀಡದಿದ್ದರಿಂದ ಬೇಸತ್ತ ರೈತನ ಕುಟುಂಬವೊಂದು ವಿಷದ ಬಾಟಲಿ ಹಿಡಿದು ಆತಂಕ ಸೃಷ್ಟಿಸಿದ ಘಟನೆ ಹನೂರಿನಲ್ಲಿ ನಡೆದಿದೆ.
ಹನೂರು ತಾಲೂಕಿನ ಬೈಲೂರು ಗ್ರಾಪಂ ವ್ಯಾಪ್ತಿಯ ಹೊಸದೊಡ್ಡಿ ಗ್ರಾಮದ ಪ್ರಭುಸ್ವಾಮಿ ಎಂಬ ರೈತ ವಿಷದ ಬಾಟಲಿಯೊಂದಿಗೆ ತನ್ನ ಇಡೀ ಕುಟುಂಬ ಕರೆತಂದು ಚೆಸ್ಕಾಂ ಕಚೇರಿ ಮುಂದೆ ತಮ್ಮ ಅಳಲು ತೋಡಿಕೊಂಡರು. ನಾಲ್ಕು ತಿಂಗಳಿಂದ ಜಮೀನಿಗೆ ವಿದ್ಯುತ್ ಸಂಪರ್ಕ ಇಲ್ಲದಿದ್ದರಿಂದ ನೀರು ಹಾಯಿಸಲಾಗದೇ ಎರಡು ಎಕರೆ ಅರಿಶಿಣ ಫಸಲು ಒಣಗಿದೆ. ಚೆಸ್ಕಾಂ ಸಿಬ್ಬಂದಿಗೆ ಲಂಚ ನೀಡಿದರೂ ಸಂಪರ್ಕ ಮಾತ್ರ ಕೊಡದೇ ಸತಾಯಿಸುತ್ತಿದ್ದಾರೆ. ಸಮಸ್ಯೆಗೆ ಪರಿಹರಿಸದಿದ್ದರೇ ವಿಷ ಸೇವಿಸುವುದಾಗಿ ಪಟ್ಟು ಹಿಡಿದು ಕುಳಿತರು.ವಿಷದ ಬಾಟಲಿ ಹಿಡಿದು ಕಚೇರಿಗೆ ಬಂದ ರೈತ ಕುಟುಂಬ.
ಕೊನೆಗೆ ಸ್ಥಳಕ್ಕೆ ಆಗಮಿಸಿದ ಜ್ಯೂನಿಯರ್ ಎಂಜಿನಿಯರ್ ನೌಷಾದ್ ಪಾಷಾ, ಪಕ್ಕದ ಜಮೀನಿನ ಮಾಲೀಕರಿಗೂ ಪ್ರಭುಸ್ವಾಮಿ ಅವರ ನಡುವೆ ವ್ಯಾಜ್ಯ ಇರುವುದರಿಂದ ಸಂಪರ್ಕ ನೀಡಲು ವಿಳಂಬವಾಗಿದೆ. ನಾಳೆ ಪೊಲೀಸರ ಸಮ್ಮುಖದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ರೈತನ ಕುಟುಂಬ ಪ್ರತಿಭಟನೆ ವಾಪಸ್ ಪಡೆದು ಹಿಂದಿರುಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


