Afghanistan

ವಿಶ್ವಕಪ್: ಮ್ಯಾಕ್ಸ್‌ವೆಲ್ ಅಬ್ಬರದ ದ್ವಿಶತಕ; ಅಫ್ಘಾನ್ ವಿರುದ್ಧ ಆಸೀಸ್ ಗೆ ಭರ್ಜರಿ ಗೆಲುವು
ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ 39ನೇ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅಬ್ಬರದ ದ್ವಿಶತಕದ ನೆರವಿಂದ ಆಸ್ಟ್ರೇಲಿಯಾ, ಅಪ್ಘಾನಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ವಿಶ್ವಕಪ್ ಪೈನಲ್ ಪ್ರವೇಶಿಸಿದೆ.

ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಮೊದಲ ಅಫ್ಘಾನ್ ಬ್ಯಾಟ್ಸ್‌ಮನ್ ಇಬ್ರಾಹಿಂ ಜದ್ರಾನ್! ಇರ್ಫಾನ್ ಪಠಾಣ್ ಹೇಳಿದ್ದು ಹೀಗೆ
ಅಫ್ಘಾನಿಸ್ತಾನದ ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಆ ದೇಶದ ಮೊದಲ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ಪಾತ್ರರಾದರು.

ICC Worldcup 2023: ನೆದರ್ಲ್ಯಾಂಡ್ ತಂಡವನ್ನು ಮಣಿಸಿದ ಅಫ್ಘಾನ್, ಸೆಮಿಫೈನಲ್ ಕನಸು ಜೀವಂತ!
ODI ವಿಶ್ವಕಪ್‌ನ 34ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ನೆದರ್ಲೆಂಡ್ಸ್ ಅನ್ನು 7 ವಿಕೆಟ್‌ಗಳಿಂದ ಸೋಲಿಸಿದೆ.

ವಿಶ್ವಕಪ್-2023: ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನಕ್ಕೆ 7 ವಿಕೆಟ್ ಗಳ ಜಯ, ಸೆಮಿ ಫೈನಲ್ಸ್ ಆಸೆ ಜೀವಂತ
ಪುಣೆಯಲ್ಲಿ ನಡೆದ ಒಡಿಐ ವಿಶ್ವಕಪ್-2023ರ ಪಂದ್ಯದಲ್ಲಿ ಲಂಕಾ ವಿರುದ್ಧ ಆಫ್ಘಾನಿಸ್ತಾನ 7 ವಿಕೆಟ್ ಗಳ ಜಯ ಗಳಿಸಿದೆ.

ಐಸಿಸಿ ವಿಶ್ವಕಪ್ 2023: ಲಂಕಾ ವಿರುದ್ಧದ ಪಂದ್ಯ, ಟಾಸ್ ಗೆದ್ದ ಅಪ್ಘಾನಿಸ್ತಾನ ಬೌಲಿಂಗ್ ಆಯ್ಕೆ
ಐಸಿಸಿ ವಿಶ್ವಕಪ್ 2023ರ 30ನೇ ಪಂದ್ಯ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಅಪ್ಘಾನಿಸ್ತಾನ ಹಾಗೂ ಶ್ರೀಲಂಕಾ ಮುಖಾಮುಖಿಯಾಗಿವೆ. ಸೆಮಿಫೈನಲ್ ಪ್ರವೇಶಿಸಲು ಉಭಯ ತಂಡಗಳಿಗೆ ಈ ಪಂದ್ಯ ನಿರ್ಣಾಯಕವಾಗಿದೆ.

ಐಸಿಸಿ ವಿಶ್ವಕಪ್: ಪಾಕ್ ಗೆ ಮತ್ತೊಂದು ಹೀನಾಯ ಸೋಲು; 8 ವಿಕೆಟ್ ಗಳಿಂದ ಅಪ್ಘಾನ್ ಗೆಲುವು, ಹೊಸ ಇತಿಹಾಸ!
ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನಕ್ಕೆ ಮತ್ತೊಂದು ಹೀನಾಯ ಸೋಲಾಗಿದೆ. ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 22ನೇ ಪಂದ್ಯದಲ್ಲಿ ಅಪ್ಘಾನಿಸ್ತಾನ 8 ವಿಕೆಟ್ ಗಳಿಂದ ಗೆದ್ದು ಬೀಗಿದೆ.

ಐಸಿಸಿ ವಿಶ್ವಕಪ್: ಅಫ್ಘಾನಿಸ್ತಾನ್ ವಿರುದ್ಧ ಟೀಮ್ ಇಂಡಿಯಾಗೆ 8 ವಿಕೆಟ್ ಭರ್ಜರಿ ಜಯ
ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಐಸಿಸಿ ವಿಶ್ವಕಪ್ 2023: ಭಾರತ ಗೆಲ್ಲಲು 273 ರನ್ ಗಳ ಗುರಿ ನೀಡಿದ ಅಪ್ಘಾನಿಸ್ತಾನ!
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ, ಭಾರತ ಗೆಲ್ಲಲು 273 ರನ್ ಗಳ ಗುರಿ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್ ಕಲೆಹಾಕಿತು.

ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಚಿನ್ನದ ಪದಕಕ್ಕಾಗಿ ಭಾರತ-ಅಫ್ಘಾನಿಸ್ತಾನ ನಡುವೆ ಹಣಾಹಣಿ!
ಶನಿವಾರ ನಡೆಯಲಿರುವ ಏಷ್ಯನ್ ಗೇಮ್ಸ್ 2023 ರ ಫೈನಲ್ ಪಂದ್ಯದಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡವು ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.

