ಐಸಿಸಿ ವಿಶ್ವಕಪ್: ಪಾಕ್ ಗೆ ಮತ್ತೊಂದು ಹೀನಾಯ ಸೋಲು; 8 ವಿಕೆಟ್ ಗಳಿಂದ ಅಪ್ಘಾನ್ ಗೆಲುವು, ಹೊಸ ಇತಿಹಾಸ!
ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನಕ್ಕೆ ಮತ್ತೊಂದು ಹೀನಾಯ ಸೋಲಾಗಿದೆ. ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 22ನೇ ಪಂದ್ಯದಲ್ಲಿ ಅಪ್ಘಾನಿಸ್ತಾನ 8 ವಿಕೆಟ್ ಗಳಿಂದ ಗೆದ್ದು ಬೀಗಿದೆ.

ಚೆನ್ನೈ: ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನಕ್ಕೆ ಮತ್ತೊಂದು ಹೀನಾಯ ಸೋಲಾಗಿದೆ. ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 22ನೇ ಪಂದ್ಯದಲ್ಲಿ ಅಪ್ಘಾನಿಸ್ತಾನ 8 ವಿಕೆಟ್ ಗಳಿಂದ ಗೆದ್ದು ಬೀಗಿದೆ. ಇದು ಪಾಕಿಸ್ತಾನ ವಿರುದ್ಧ 8 ಪಂದ್ಯಗಳಲ್ಲಿ ಅಪ್ಘಾನಿಸ್ತಾನಕ್ಕೆ ಮೊದಲ ಏಕದಿನ ಗೆಲುವು ಆಗಿದೆ. ಈ ಮೂಲಕ ಹೊಸ ಇತಿಹಾಸ ಬರೆದಿದೆ.
ಹೌದು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತು. ಪಾಕ್ ಪರ ಅಬ್ದುಲ್ ಶಫೀಕ್ 58, ನಾಯಕ ಬಾಬರ್ ಅಜಾಮ್ 74, ಶದಾಬ್ ಖಾನ್ ಹಾಗೂ ಇಫ್ತೀಕರ್ ಅಹ್ಮದ್ ತಲಾ 40 ರನ್ ಗಳಿಸಿದದ್ದು ಹೊರತುಪಡಿಸದರೆ ಉಳಿದ ಯಾವುದೇ ಆಟಗಾರರು ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದರಿಂದಾಗಿ ಅಪ್ಘಾನಿಸ್ತಾನ ಗೆಲ್ಲಲು 283 ರನ್ ಗಳ ಗುರಿ ನೀಡಿತು.
ಪಾಕ್ ನೀಡಿದ ಗುರಿ ಬೆನ್ನಟ್ಟಿದ್ದ ಅಪ್ಘಾನಿಸ್ತಾನದ ಮೂವರು ಆರಂಭಿಕ ಆಟಗಾರರು ಆಕರ್ಷಕ ಅರ್ಧಶತಕ ಬಾರಿಸಿದರು. ರಹಮನುಲ್ಲಾ ಗುರ್ಬಾಜ್ 65, ಇಬ್ರಾಹಿಂ ಜಾರ್ಡನ್ 87 ,ರಹಮತ್ ಶಾ 77 ರನ್ ಗಳಿಸಿದರೆ ಹಸಮತ್ ಉಲ್ಲಾ ಶಹೀದ್ 48 ರನ್ ಗಳಿಸಿದರು ಪರಿಣಾವಾಗಿ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 2ವಿಕೆಟ್ ನಷ್ಟಕ್ಕೆ 286 ರನ್ ಗಳಿಸುವ ಅಪ್ಘಾನಿಸ್ತಾನ ಗೆಲುವಿನ ನಗೆ ಬೀರಿತು. ಈ ಮೂಲಕ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


