Adani

ರೈಲು ಟಿಕೆಟ್ ಬುಕಿಂಗ್ ಪ್ಲ್ಯಾಟ್ ಫಾರ್ಮ್ ಟ್ರೈನ್ ಮ್ಯಾನ್ ನ ಶೇ.30 ರಷ್ಟು ಷೇರು ಖರೀದಿಸಿದ ಅದಾನಿ!
ಅದಾನಿ ಎಂಟರ್ ಪ್ರೈಸಸ್ ಸಂಸ್ಥೆ ರೈಲು ಟಿಕೆಟ್ ಬುಕಿಂಗ್ ವೇದಿಕೆ ಟ್ರೈನ್ ಮ್ಯಾನ್ ನಲ್ಲಿ ಶೇ.30 ರಷ್ಟು ಷೇರುಗಳನ್ನು 3.5 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದೆ.

ವಿಪಕ್ಷಗಳ ಒಗ್ಗಟ್ಟಿನ ಸಲುವಾಗಿ ಅದಾನಿ ವಿರುದ್ಧ ಜೆಪಿಸಿ ತನಿಖೆಗೆ ವಿರೋಧಿಸಲ್ಲ: ಪವಾರ್
ಅದಾನಿ ಸಮೂಹದ ಬಗ್ಗೆ ಎನ್ ಸಿಪಿ ನಾಯಕ ಶರದ್ ಪವಾರ್ ತೆಗೆದುಕೊಳ್ಳುತ್ತಿರುವ ನಿಲುವು ಅಚ್ಚರಿ ಮೂಡಿಸುತ್ತಿದ್ದು, ಈಗ ಶರದ್ ಪವಾರ್ ಕೇವಲ ವಿಪಕ್ಷಗಳ ಒಗ್ಗಟ್ಟಿನ ಸಲುವಾಗಿ ಅದಾನಿ ವಿರುದ್ಧದ ಜೆಪಿಸಿ ತನಿಖೆಯ ಆಗ್ರಹವನ್ನು ವಿರೋಧಿಸಲ್ಲ ಎಂದು ಹೇಳಿದ್ದಾರೆ.

ಹಿಂಡರ್ಬರ್ಗ್ ವಿವಾದದಲ್ಲಿ ಅದಾನಿ ಬೆನ್ನಿಗೆ ನಿಂತ ಪವಾರ್: ಇದಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ ಹೀಗಿದೆ....
ಉದ್ಯಮಿ ಅದಾನಿ ಸಮೂಹದ ಸಂಸ್ಥೆಗಳನ್ನು ಅಮೇರಿಕಾ ಮೂಲದ ಶಾರ್ಟ್ ಸೆಲ್ಲರ್ ಹಿಂಡರ್ಬರ್ಗ್ ಟಾರ್ಗೆಟ್ ಮಾಡುತ್ತಿರುವುದರ ಬಗ್ಗೆ ಮಾತನಾಡಿರುವ ಎನ್ ಸಿಪಿ ವರಿಷ್ಠ ಶರದ್ ಪವಾರ್, ಅದಾನಿ ಸಮೂಹದ ಬೆನ್ನಿಗೆ ನಿಂತಿದ್ದಾರೆ.

ಪ್ರತಿಪಕ್ಷಗಳು ಮಾತುಕತೆಗೆ ಮುಂದಾದರೆ ಸಂಸತ್ ಕಲಾಪ ಬಿಕ್ಕಟ್ಟನ್ನು ಬಗೆಹರಿಸಬಹುದು: ಅಮಿತ್ ಶಾ
ಪ್ರತಿಪಕ್ಷಗಳು ಮಾತುಕತೆಗೆ ಮುಂದಾದರೆ ಸಂಸತ್ತ್ ಕಲಾಪ ಬಿಕ್ಕಟ್ಟನ್ನು ಪರಿಹರಿಸಬಹುದು. ಅವರು ಎರಡು ಹೆಜ್ಜೆ ಮುಂದೆ ಬರಬೇಕು. ನಾವೂ ಎರಡು ಹೆಜ್ಜೆ ಮುಂದೆ ಹೋಗುತ್ತೇವೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.

ಅದಾನಿ ವಿವಾದ, ರಾಹುಲ್ ಗಾಂಧಿ ಅನರ್ಹತೆ: ವಿಪಕ್ಷಗಳಿಂದ ಒಗ್ಗಟ್ಟು ಪ್ರದರ್ಶನ, ಕಪ್ಪು ಬಟ್ಟೆ ಧರಿಸಿ ಪ್ರತಿಭಟನಾ ಮೆರವಣಿಗೆ
ಅದಾನಿ ವಿವಾದ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿದ ಕೇಂದ್ರದ ವಿರುದ್ಧ ಖಂಡನೆ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು, ಕಪ್ಪು ಬಟ್ಟೆ ಧರಿಸಿ ಸಂಸತ್ತಿನ ಸಂಕೀರ್ಣದಿಂದ ರಾಷ್ಟ್ರ ರಾಜಧಾನಿಯ ವಿಜಯ್ ಚೌಕ್'ನತ್ತ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ.

ಅದಾನಿ ಗ್ರೂಪ್ ವಿರುದ್ಧ ಜೆಪಿಸಿ ತನಿಖೆಗೆ ಆಗ್ರಹ: ರಾಷ್ಟ್ರಪತಿ ಭವನಕ್ಕೆ ಪ್ರತಿಪಕ್ಷಗಳ ಮೆರವಣಿಗೆ, ಹಲವು ನಾಯಕರು ಪೊಲೀಸರ ವಶಕ್ಕೆ
ಅದಾನಿ ಸಮೂಹದ ಕಂಪನಿಗಳ ಭ್ರಷ್ಟಾಚಾರ ಮತ್ತು ಆರ್ಥಿಕ ದುರುಪಯೋಗದ ಆರೋಪಗಳ ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸುವಂತ ಒತ್ತಾಯಿಸಿ ಪ್ರತಿಪಕ್ಷಗಳು ರಾಷ್ಟ್ರಪತಿ ಭವನದತ್ತ ಶುಕ್ರವಾರ ಮೆರವಣಿಗೆ ಆರಂಭಿಸಿದ್ದು, ಈ ವೇಳೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.

ಅದಾನಿ ಬಳಿಕ ಟ್ವಿಟ್ಟರ್ ಮಾಜಿ ಸಿಇಒ ಜ್ಯಾಕ್ ಡಾರ್ಸಿ ಗುರಿಯಾಗಿಸಿಕೊಂಡ ಹಿಂಡನ್‌ಬರ್ಗ್: ಬ್ಲಾಕ್ ಇಂಕ್ ಷೇರುಗಳಲ್ಲಿ ಕುಸಿತ
ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ ಗುರಿಯಾಗಿಸಿಕೊಂಡಿದ್ದ ಅಮೆರಿಕಾ ಮೂಲದ ಸಂಸ್ಥೆ ಹಿಂಡನ್‌ಬರ್ಗ್ ಇದೀಗ ಟ್ವಿಟ್ಟರ್ ಮಾಜಿ ಸಿಇಒ ಜ್ಯಾಕ್ ಡಾರ್ಸಿಯನ್ನು ಗುರಿಯಾಗಿಸಿಕೊಂಡಿದ್ದು, ಹಲವು ಆರೋಪಗಳನ್ನು ಮಾಡಿದೆ. ಆರೋಪದ ಬೆನ್ನಲ್ಲೇ ಬ್ಲಾಕ್ ಇಂಕ್ ಷೇರುಗಳಲ್ಲಿ ಭಾರೀ ಕುಸಿತಗಳು ಕಂಡು ಬಂದಿದೆ.

ವಿಧಾನಸಭೆ ಚುನಾವಣೆಗೂ ಮುನ್ನ ಅದಾನಿ, ಅಂಬಾನಿ, ಆ್ಯಪಲ್ ನಿಂದ ಕರ್ನಾಟಕದಲ್ಲಿ ಭಾರಿ ಹೂಡಿಕೆ!
ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಕರ್ನಾಟಕದಲ್ಲಿ ಅದಾನಿ, ಅಂಬಾನಿ, ಆ್ಯಪಲ್ ಸಂಸ್ಥೆಗಳು ಭಾರಿ ಪ್ರಮಾಣದ ಹೂಡಿಕೆ ಮಾಡಿ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಮುಂದಾಗಿವೆ ಎಂದು ಹೇಳಲಾಗಿದೆ.

ಅದಾನಿ ವಿರುದ್ಧ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ; ಮೋದಿ ಸರ್ಕಾರಕ್ಕೆ ಕಪಾಳಮೋಕ್ಷ: ಎಎಪಿ
ಇತ್ತೀಚಿಗೆ ಅದಾನಿ ಗ್ರೂಪ್ ಷೇರುಗಳ ಕುಸಿತ ಸೇರಿದಂತೆ ಷೇರು ಮಾರುಕಟ್ಟೆಯ ವಿವಿಧ ನಿಯಂತ್ರಕ ಅಂಶಗಳನ್ನು ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶ...

